Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಕೀರ್ತನೆಗಳು 73

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ದೇವರು ನಿಜವಾಗಿಯೂ ಇಸ್ರಾಯೇಲಿಗೂ ಶುದ್ಧ ಹೃದಯದವರಿಗೂ ಒಳ್ಳೆಯವರು.
2ನನ್ನ ಪಾದಗಳು ಬಹಳಮಟ್ಟಿಗೆ ತಪ್ಪುವ ಹಾಗಿದ್ದವು. ನನ್ನ ಹೆಜ್ಜೆಗಳು ಜಾರುವುದಕ್ಕೆ ಬಹು ಸಮೀಪವಾಗಿದ್ದವು.
3ಏಕೆಂದರೆ ನಾನು ದುಷ್ಟರ ಸೌಭಾಗ್ಯವನ್ನು ಕಂಡಾಗ ಮೂರ್ಖರ ಮೇಲೆ ಹೊಟ್ಟೆಕಿಚ್ಚುಪಟ್ಟೆನು.
4ಏಕೆಂದರೆ ಅವರಿಗೆ ಹೋರಾಟಗಳು ಇಲ್ಲ. ಅವರ ದೇಹವು ಆರೋಗ್ಯಕರ ಮತ್ತು ದೃಢವಾಗಿದೆ.
5ಇತರರ ಹಾಗೆ ಅವರಿಗೆ ಯಾವುದೇ ಹೊರೆ ಇಲ್ಲ ಮಾನವರಿಗೆ ತಗುಲುವ ಯಾವುದೇ ವ್ಯಾಧಿಯೂ ಅವರಿಗೆ ತಗುಲುವುದಿಲ್ಲ.
6ಆದ್ದರಿಂದ ಗರ್ವವು ಕಂಠಮಾಲೆಯಂತೆ ಅವರನ್ನು ಸುತ್ತಿದೆ. ದಬ್ಬಾಳಿಕೆ ಅವರನ್ನು ಬಟ್ಟೆಯ ಹಾಗೆ ಮುಚ್ಚುತ್ತಿದೆ.
7ಅವರ ಹೃದಯವು ಕೊಬ್ಬಿನಿಂದ ಉಬ್ಬಿಕೊಂಡಿರುತ್ತವೆ; ಅವರ ದುಷ್ಕಲ್ಪನೆಗಳಿಗೆ ಮಿತಿಯೇ ಇಲ್ಲ.
8ಅವರು ಹಾಸ್ಯಮಾಡುವವರಾಗಿ ಕೇಡನ್ನೇ ಮಾತನಾಡುತ್ತಾರೆ ದಬ್ಬಾಳಿಕೆ ಮಾಡಲು ಗರ್ವದಿಂದ ಅವರು ಬೆದರಿಕೆ ಹಾಕುತ್ತಾರೆ.
9ಪರಲೋಕಕ್ಕೆ ವಿರೋಧವಾಗಿ ತಮ್ಮ ಬಾಯನ್ನು ತೆರೆದಿದ್ದಾರೆ. ಭೂಲೋಕದಲ್ಲೆಲ್ಲಾ ಅವರ ಮಾತು ಮುಂದುವರೆದಿದೆ.
10ಆದ್ದರಿಂದ ಜನರು ಅವರ ಕಡೆಗೆ ತಿರುಗುತ್ತಾರೆ. ಜನರಿಗೆ ಅವರ ಮಾತು ಬಹಳವಾಗಿ ದೊರೆಯುತ್ತದೆ.
11ಅವರು, “ದೇವರಿಗೆ ಹೇಗೆ ಗೊತ್ತಾಗುವುದು? ಮಹೋನ್ನತನಿಗೆ ಏನಾದರೂ ತಿಳಿಯಲು ಸಾಧ್ಯವೇ?” ಎನ್ನುತ್ತಾರೆ.
12ದುಷ್ಟರು ನಿಶ್ಚಿಂತರಾಗಿ, ಐಶ್ವರ್ಯದಲ್ಲಿ ಇವರು ಹೆಚ್ಚುತ್ತಾರೆ.
13ನನ್ನ ಹೃದಯವನ್ನು ಶುದ್ಧ ಮಾಡಿಕೊಂಡಿದ್ದು ವ್ಯರ್ಥವೋ? ನನ್ನ ಅಂಗೈಗಳನ್ನು ನಿರಪರಾಧದಲ್ಲಿ ತೊಳೆದಿದ್ದೂ ವ್ಯರ್ಥವೋ?
14ಏಕೆಂದರೆ ನಾನು ದಿನವೆಲ್ಲಾ ಬಾಧೆಪಡುತ್ತಿದ್ದೇನೆ. ಪ್ರತಿ ಉದಯವೂ ನನಗೆ ಹೊಸ ಶಿಕ್ಷೆಯಾಗುತ್ತಿದೆ.
15ನಾನು ಈ ಪ್ರಕಾರ ಬಾಯಿತೆರೆದು ಮಾತಾಡಿದ್ದರೆ, ನಿಮ್ಮ ಪ್ರಜೆಗೆ ದ್ರೋಹಿಯಾಗುತ್ತಿದ್ದೆನು.
16ಇದನ್ನೆಲ್ಲಾ ತಿಳಿದುಕೊಳ್ಳುವುದಕ್ಕೆ ನಾನು ಪ್ರಯತ್ನಿಸಿದಾಗ, ಅದು ನನಗೆ ಬಹಳವಾಗಿ ಕಷ್ಟಕರವಾಗಿತ್ತು.
17ನಾನು ದೇವರ ಪರಿಶುದ್ಧ ಆಲಯಕ್ಕೆ ಬರುವವರೆಗೆ ನನಗೆ ಅರ್ಥವಾಗಲಿಲ್ಲ. ಅನಂತರ ಅವರ ಅಂತ್ಯವನ್ನು ನನಗೆ ಅರ್ಥವಾಯಿತು.
18ನಿಶ್ಚಯವಾಗಿ ನೀವು ಜಾರುವ ಸ್ಥಳಗಳಲ್ಲಿ ಅವರನ್ನು ಬಿಟ್ಟಿದ್ದೀರಿ. ಅವರನ್ನು ದಂಡಿಸಿಬಿಡು.
19ಕ್ಷಣಮಾತ್ರದಲ್ಲಿ ಅವರು ನಾಶವಾದರು. ಅವರು ದಿಗಿಲುಬಿದ್ದು ಸಂಪೂರ್ಣವಾಗಿ ನಾಶವಾದರು.
20ಅವರು ನಿದ್ದೆಯಿಂದ ಎಚ್ಚರಗೊಂಡ ಕನಸಿನಂತೆ ಇರುತ್ತಾರೆ. ಯೆಹೋವ ದೇವರೇ, ನಿಮ್ಮ ದೃಷ್ಟಿಯಲ್ಲಿ ಅವರು ಅಲ್ಪರಾಗಿರಲಿ.
21ನನ್ನ ಹೃದಯವು ದುಃಖಗೊಂಡು, ನನ್ನ ಆತ್ಮವು ಕಹಿಗೊಂಡಿತು.
22ಆಗ ನಾನು ಮೂರ್ಖನಾಗಿ ಏನೂ ತಿಳಿಯದೆ ನಿಮ್ಮ ಮುಂದೆ ಪಶುವಿನಂತೆ ಇದ್ದೆನು.
23ಆದರೂ ನಾನು ನಿಮ್ಮ ಸಂಗಡ ಯಾವಾಗಲೂ ಇದ್ದೇನೆ. ನೀವು ನನ್ನ ಬಲಗೈಯನ್ನು ಹಿಡಿದಿದ್ದೀರಿ.
24ನಿಮ್ಮ ಆಲೋಚನೆಯಂತೆ ನನ್ನನ್ನು ನಡೆಸಿ, ತರುವಾಯ ಮಹಿಮೆಗೆ ನನ್ನನ್ನು ಸೇರಿಸುವಿರಿ.
25ಪರಲೋಕದಲ್ಲಿ ನನಗೆ ನೀವಲ್ಲದೆ ಮತ್ಯಾರಿದ್ದಾರೆ? ಇಹಲೋಕದಲ್ಲಿ ನಿಮ್ಮನ್ನಲ್ಲದೆ ಇನ್ನಾರನ್ನೂ ನಾನು ಬಯಸುವುದಿಲ್ಲ.
26ನನ್ನ ತನುಮನಗಳು ಕುಂದುತ್ತವೆ; ಆದರೆ ದೇವರು ಯುಗಯುಗಕ್ಕೂ ನನ್ನ ಹೃದಯದ ಬಲವೂ, ನನ್ನ ಪಾಲೂ ಆಗಿದ್ದಾರೆ.
27ದೇವರೇ, ನಿಮ್ಮಿಂದ ದೂರವಾಗಿರುವವರು ನಾಶವಾಗುತ್ತಾರೆ; ನಿಮ್ಮನ್ನು ಬಿಟ್ಟು ದ್ರೋಹ ಮಾಡುವವರೆಲ್ಲರೂ ದಂಡನೆಗೆ ಗುರಿಯಾಗುವರು.
28ನನಗಾದರೋ ದೇವರ ಸಮೀಪಕ್ಕೆ ಬರುವುದೇ ಒಳ್ಳೆಯದು. ನಿಮ್ಮ ಕ್ರಿಯೆಗಳನ್ನೆಲ್ಲಾ ಸಾರುವುದಕ್ಕೆ ಸಾರ್ವಭೌಮ ಯೆಹೋವ ದೇವರಲ್ಲಿ ನನ್ನ ಭರವಸೆಯನ್ನು ಇಟ್ಟಿದ್ದೇನೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.