Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಜ್ಞಾನೋಕ್ತಿಗಳು 9

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಜ್ಞಾನ ಎಂಬಾಕೆಯು ತನ್ನ ಮನೆಯನ್ನು ಕಟ್ಟಿಕೊಂಡಿದ್ದಾಳೆ; ಆಕೆಯು ತನ್ನ ಏಳು ಕಂಬಗಳನ್ನು ಕೆತ್ತಿಸಿದ್ದಾಳೆ.
2ಆಕೆಯು ಮಾಂಸದ ಆಹಾರನ್ನು ತಯಾರಿಸಿ, ತನ್ನ ದ್ರಾಕ್ಷಾರಸವನ್ನು ಬೆರೆಸಿ, ತನ್ನ ಮೇಜನ್ನು ಸಹ ಸಿದ್ಧಪಡಿಸಿದಳು.
3ಆಕೆಯು ತನ್ನ ದಾಸಿಯರನ್ನು ಕಳುಹಿಸುತ್ತಾಳೆ; ಆಕೆಯು ಪಟ್ಟಣದ ಅತಿ ಉನ್ನತ ಸ್ಥಳದಿಂದ ಕೂಗುತ್ತಾಳೆ,
4“ಯಾರು ಮುಗ್ಧರೋ ಅವರು ನನ್ನ ಮನೆಗೆ ಬರಲಿ,” ಬುದ್ಧಿ ಇಲ್ಲದೆ ಇರುವವನಿಗೆ ಆಕೆಯು ಹೇಳುತ್ತಾಳೆ,
5“ಬಾ, ನನ್ನ ಆಹಾರವನ್ನು ತಿಂದು, ನಾನು ಬೆರೆಸಿದ ದ್ರಾಕ್ಷಾರಸವನ್ನು ಕುಡಿ,” ಎಂದೂ
6“ನಿಮ್ಮ ಮೂಢತ್ವವನ್ನು ಬಿಟ್ಟು ಬಾಳಿರಿ ಮತ್ತು ವಿವೇಕದ ಮಾರ್ಗದಲ್ಲಿ ಹೋಗು,” ಎಂದೂ ಕೂಗುತ್ತಾಳೆ.
7ಪರಿಹಾಸ್ಯ ಮಾಡುವವನನ್ನು ಗದರಿಸುವವನು ತನ್ನನ್ನು ತಾನೇ ಅವಮಾನಕ್ಕೆ ಗುರಿಮಾಡಿಕೊಳ್ಳುವನು; ದುಷ್ಟನನ್ನು ಗದರಿಸುವವನು ತನಗೆ ತಾನೇ ಕಳಂಕವನ್ನು ತಂದುಕೊಳ್ಳುವನು.
8ಪರಿಹಾಸ್ಯ ಮಾಡುವವನನ್ನು ಗದರಿಸಬೇಡ ಅವನು ನಿನ್ನನ್ನು ಹಗೆ ಮಾಡುವನು; ಜ್ಞಾನಿಯನ್ನು ಗದರಿಸಿದರೆ ಅವನು ನಿನ್ನನ್ನು ಪ್ರೀತಿ ಮಾಡುವನು.
9ಜ್ಞಾನಿಗೆ ಶಿಕ್ಷಣ ನೀಡಿದರೆ ಅವನು ಇನ್ನೂ ಹೆಚ್ಚಾಗಿ ಜ್ಞಾನವಂತನಾಗಿರುವನು; ನೀತಿವಂತನಿಗೆ ಬೋಧಿಸಿದರೆ ಅವನು ಜ್ಞಾನವನ್ನು ಹೆಚ್ಚಿಸಿಕೊಳ್ಳುವನು.
10ಯೆಹೋವ ದೇವರ ಭಯವೇ ಜ್ಞಾನಕ್ಕೆ ಮೂಲವು. ಪರಿಶುದ್ಧರ ಪರಿಜ್ಞಾನವೇ ತಿಳುವಳಿಕೆಯಾಗಿದೆ.
11ಏಕೆಂದರೆ ಜ್ಞಾನದ ಮೂಲಕ ನಿನ್ನ ಜೀವನದ ದಿನಗಳು ಹೆಚ್ಚುವುವು; ನಿನ್ನ ಜೀವನದ ವರ್ಷಗಳು ವೃದ್ಧಿಯಾಗುವುವು.
12ನೀನು ಜ್ಞಾನಿಯಾದರೆ, ನಿನ್ನ ಜ್ಞಾನವು ನಿನಗೆ ಪ್ರತಿಫಲ ಕೊಡುವುದು; ನೀನು ನಿಂದಿಸುವವನಾದರೆ, ನೀನೇ ಅದರ ಫಲವನ್ನು ಅನುಭವಿಸುವಿ.
13ಬುದ್ಧಿಹೀನಳಾದ ಸ್ತ್ರೀಯು ಕೂಗಾಟದವಳು; ಅವಳು ಅರಿವಿಲ್ಲದವಳು, ಏನೂ ತಿಳಿಯದವಳು.
14ಅವಳು ತನ್ನ ಮನೆಯ ಬಾಗಿಲಿನಲ್ಲಿ ಕುಳಿತು, ಪಟ್ಟಣದ ಎತ್ತರವಾದ ಸ್ಥಳಗಳ ಪೀಠದ ಮೇಲೆ ನಿಂತು,
15ತಮ್ಮ ಮಾರ್ಗವನ್ನು ಹಿಡಿದು ಹೋಗುವ ಪ್ರಯಾಣಿಕರನ್ನು ಕರೆಯುತ್ತಾಳೆ,
16“ಯಾರು ಮುಗ್ಧರೋ ಅವರು ನನ್ನ ಮನೆಗೆ ಬರಲಿ,” ಬುದ್ಧಿ ಇಲ್ಲದೆ ಇರುವವನಿಗೆ ಆಕೆಯು ಹೇಳುತ್ತಾಳೆ,
17“ಕದ್ದ ನೀರು ಸಿಹಿಯಾಗಿದೆ; ರಹಸ್ಯದಲ್ಲಿ ತಿನ್ನುವ ಆಹಾರವು ರುಚಿಯಾಗಿದೆ,” ಎಂದು ಹೇಳುತ್ತಾಳೆ.
18ಆದರೆ ಆ ಮನೆ ಸತ್ತವರ ಸ್ಥಾನವಾಗಿದೆ. ಅವಳ ಅತಿಥಿಗಳು ಪಾತಾಳದ ಅಗಾಧದಲ್ಲಿ ಬಿದ್ದಿದ್ದಾರೆಂದು ಅವನಿಗೆ ತಿಳಿಯದು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.