Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ನೆಹೆಮೀಯ 3

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಆಗ ಮಹಾಯಾಜಕನಾದ ಎಲ್ಯಾಷೀಬನೂ, ಅವನ ಕುಟುಂಬದ ಯಾಜಕರೂ ಕುರಿ ಬಾಗಿಲನ್ನು ಕಟ್ಟಿ, ಅದನ್ನು ಪ್ರತಿಷ್ಠಿಸಿ, ಅದಕ್ಕೆ ಕದಗಳನ್ನು ಇಟ್ಟರು. ಅಲ್ಲಿಂದ ಶತ ಗೋಪುರದವರೆಗೆ ಗೋಡೆ ಕಟ್ಟಿ ಅದನ್ನೂ ಪ್ರತಿಷ್ಠಿಸಿದರು. ಅಲ್ಲಿಂದ ಹನನೇಲ್ ಬುರುಜಿನವರೆಗೂ ಕಟ್ಟಿದರು.
2ಅಲ್ಲಿಂದ ಆಚೆಗೆ ಕಟ್ಟುತ್ತಿದ್ದವರು ಯೆರಿಕೋವಿನವರು, ನಂತರ ಇಮ್ರಿಯ ಮಗನಾದ ಜಕ್ಕೂರನು.
3ಮೀನು ಬಾಗಿಲನ್ನು ಪುನಃ ಕಟ್ಟಿದವರು ಹಸ್ಸೆನಾಹನ ಮನೆಯವರು. ಇವರು ಅದರ ಮೇಲೆ ತೊಲೆಗಳನ್ನಿಟ್ಟು, ಅದಕ್ಕೆ ಬಾಗಿಲು, ತಿರುಗಣಿ ಅಗುಳಿಗಳನ್ನು ಹಚ್ಚಿದರು. ಅಲ್ಲಿಂದ ಮುಂದಕ್ಕೆ ಗೋಡೆಯನ್ನು
4ಜೀರ್ಣೋದ್ಧಾರ ಮಾಡಿಸಿದವನು ಊರೀಯನ ಮಗನೂ, ಹಕ್ಕೋಚನ ಮೊಮ್ಮಗನೂ ಆಗಿರುವ ಮೆರೇಮೋತ್; ಆಮೇಲೆ ಬೆರೆಕ್ಯನ ಮಗನೂ, ಮೆಷೇಜಬೇಲನ ಮೊಮ್ಮಗನೂ ಆಗಿರುವ ಮೆಷುಲ್ಲಾಮ್; ಆಚೆಗೆ ಬಾಣನ ಮಗನಾದ ಚಾದೋಕ್,
5ಅಲ್ಲಿಂದ ಮುಂದಕ್ಕೆ ತೆಕೋವದವರು ಗೋಡೆಯನ್ನು ದುರಸ್ತಿ ಮಾಡಿಸಿದರು. ಆದರೆ ತೆಕೋವದವರಲ್ಲಿ ಶ್ರೇಷ್ಠರಾದವರೋ ತಮ್ಮ ಒಡೆಯರ ಸೇವೆಗಾಗಿ ಹೆಗಲನ್ನು ಕೊಡಲಿಲ್ಲ.
6ಹಳೆಯದು ಎಂಬ ಬಾಗಿಲನ್ನು ಜೀರ್ಣೋದ್ಧಾರ ಮಾಡಿದವರು ಪಾಸೇಹನ ಮಗನಾದ ಯೋಯಾದನೂ, ಬೆಸೋದ್ಯನ ಮಗನಾದ ಮೆಷುಲ್ಲಾಮನೂ, ಇವರು ಅದರ ಮೇಲೆ ತೊಲೆಗಳನ್ನಿಟ್ಟು, ಅದಕ್ಕೆ ಬಾಗಿಲು ತಿರುಗಣಿ ಅಗುಳಿಗಳನ್ನು ಹಚ್ಚಿದರು.
7ಅಲ್ಲಿಂದ ಯೂಫ್ರೇಟೀಸ್ ನದಿಯ ರಾಜ್ಯಪಾಲನ ಅಧಿಕಾರದಲ್ಲಿರುವ ಸ್ಥಳಗಳಿಂದ ಗಿಬ್ಯೋನ್ ಮತ್ತು ಮಿಚ್ಪ ಊರುಗಳ, ಗಿಬ್ಯೋನಿನವನಾದ ಮೆಲೆಟ್ಯ, ಮೇರೊನೋತಿನವನಾದ ಯಾದೋನ್ ಇವರೂ, ಜೀರ್ಣೋದ್ಧಾರ ಮಾಡಿದರು.
8ಇದರ ಆಚೆಗೆ ಹರ್ಹಯನ ಮಗನಾದ ಅಕ್ಕಸಾಲಿಗರ ಉಜ್ಜೀಯೇಲ್, ಆಮೇಲೆ ಗಾಣಿಗನಾದ ಹನನ್ಯ, ಇವರು ಅಗಲವಾದ ಗೋಡೆಯವರೆಗೂ ಯೆರೂಸಲೇಮನ್ನು ಕಟ್ಟಿ ಭದ್ರಪಡಿಸಿದರು.
9ಇದರ ಆಚೆಗೆ ಯೆರೂಸಲೇಮಿನ ಅರೆನಾಡೊಡೆಯನೂ, ಹೂರನ ಮಗನೂ ಆದ ರೆಫಾಯ.
10ಇವನ ಮುಂದಕ್ಕೆ ಹರೂಮಫನ ಮಗನಾದ ಯೆದಾಯ, ಇವನು ತನ್ನ ಮನೆಯ ಎದುರಿಗಿರುವ ಗೋಡೆಯನ್ನು ಜೀರ್ಣೋದ್ಧಾರ ಮಾಡಿದನು. ಇವನ ಆಚೆಗೆ ಹಷಬ್ನೆಯನ ಮಗನಾದ ಹಟ್ಟೂಷ್.
11ಗೋಡೆಯ ಇನ್ನೊಂದು ಭಾಗವನ್ನೂ, ಒಲೆ ಬುರುಜನ್ನೂ ಜೀರ್ಣೋದ್ಧಾರ ಮಾಡಿದವರು ಹಾರಿಮನ ಮಗನಾದ ಮಲ್ಕೀಯನೂ, ಪಹತ್ ಮೋವಾಬ್ಯನಾದ ಹಷ್ಷೂಬನೂ
12ಇವನ ಸಮೀಪದಲ್ಲಿ ಗೋಡೆಯನ್ನು ಜೀರ್ಣೋದ್ಧಾರ ಮಾಡಿದವರು ಯೆರೂಸಲೇಮಿನ ಅರೆನಾಡೊಡೆಯನೂ, ಹಲ್ಲೋಹೇಷನ ಮಗನೂ ಆದ ಶಲ್ಲೂಮನೂ, ಅವನ ಕುಮಾರಿಯರೂ.
13ತಗ್ಗಿನ ಬಾಗಿಲನ್ನು ಜೀರ್ಣೋದ್ಧಾರ ಮಾಡಿದವರು ಹಾನೂನನೂ, ಜಾನೋಹ ಊರಿನವರೂ. ಇವರು ಅದರ ಗೋಡೆಯನ್ನು ಕಟ್ಟಿ, ಅದಕ್ಕೆ ಕದ ತಿರುಗಣಿ ಅಗುಳಿಗಳನ್ನು ಹಚ್ಚಿ, ಅಲ್ಲಿಂದ ತಿಪ್ಪೆ ಬಾಗಿಲಿನವರೆಗೂ 450 ಮೀಟರ್ ಗೋಡೆಯನ್ನು ಕಟ್ಟಿದರು.
14ತಿಪ್ಪೆ ಬಾಗಿಲನ್ನು ಜೀರ್ಣೋದ್ಧಾರ ಮಾಡಿದವರು ಬೇತ್ ಹಕ್ಕೆರೆಮಿನ ನಾಡೊಡೆಯನೂ, ರೇಕಾಬನ ಮಗನೂ ಆದ ಮಲ್ಕೀಯನೂ, ಇವರು ಅದರ ಗೋಡೆಯನ್ನು ಕಟ್ಟಿ, ಅದಕ್ಕೆ ಕದ ತಿರುಗಣಿ ಅಗುಳಿಗಳನ್ನು ಹಚ್ಚಿದರು.
15ಬುಗ್ಗೆಬಾಗಿಲನ್ನು ಜೀರ್ಣೋದ್ಧಾರ ಮಾಡಿದವನು ಮಿಚ್ಪದ ನಾಡೊಡೆಯನೂ, ಕೊಲ್ಹೋಜೆಯ ಮಗನೂ ಆದ ಶಲ್ಲೂನ್, ಇವನು ಅದರ ಗೋಡೆಯನ್ನು ಕಟ್ಟಿ, ಅದಕ್ಕೆ ಮಾಳಿಗೆಯನ್ನು ಹಾಕಿ, ಕದ ತಿರುಗಣಿ ಅಗುಳಿಗಳನ್ನು ಹಚ್ಚಿ, ದಾವೀದನ ನಗರದಿಂದಿಳಿದು ಬರುವ ಸೋಪಾನಗಳ ಈಚೆ ಅರಸನ ತೋಟದ ಬಳಿಯಲ್ಲಿರುವ ಶಿಲೋವ ಕೊಳದ ಗೋಡೆಯನ್ನು ಕಟ್ಟಿದನು.
16ಇವನ ಆಚೆ ಎಂದರೆ ದಾವೀದನ ಸಮಾಧಿಯ ಎದುರಿನಲ್ಲಿರುವ ಕೊಳ, ಸಿಪಾಯರ ಠಾಣ ಇವುಗಳವರೆಗೂ ಜೀರ್ಣೋದ್ಧಾರ ಮಾಡಿದವನು ಬೇತ್ ಚೂರಿನ ಅರೆನಾಡೊಡೆಯನೂ, ಅಜ್ಬೂಕನ ಮಗನೂ ಆದ ನೆಹೆಮೀಯನು.
17ಇವನ ನಂತರ ಜೀರ್ಣೋದ್ಧಾರ ಮಾಡಿದವರು ಲೇವಿಯರು. ಅವರಲ್ಲಿ ಮೊದಲು ಬಾನೀಯ ಮಗನಾದ ರೆಹೂಮ್, ಇವನ ಸಮೀಪದಲ್ಲಿ ತನ್ನ ನಾಡಿನವರೊಡನೆ ಕಟ್ಟುತ್ತಿದ್ದ ಕೆಯೀಲದ ಅರೆನಾಡೊಡೆಯನಾದ ಹಷಬ್ಯ ಇವರು.
18ಇವರ ನಂತರ, ಇವರ ಬಂಧುಗಳಲ್ಲಿ ಕೆಯೀಲದ ಎರಡನೆಯ ಅರೆನಾಡೊಡೆಯನೂ, ಹೇನಾದಾದನ ಮಗನೂ ಆದ ಬಿನ್ನೂಯ್.
19ಇವನ ಸಮೀಪದಲ್ಲಿ ಗೋಡೆಯ ಮೂಲೆಯಲ್ಲಿರುವ ಆಯುಧ ಶಾಲೆಗೆ ಹೋಗುವ ಮೆಟ್ಟಿಲು ಎದುರಿಗಿರುವ ಭಾಗವನ್ನು ಮಿಚ್ಪದ ಅಧಿಕಾರಿಯೂ, ಯೇಷೂವನ ಮಗನೂ ಆದ ಏಜೆರನು ಜೀರ್ಣೋದ್ಧಾರ ಮಾಡಿದನು.
20ಇವನ ನಂತರ, ಗೋಡೆಯ ಇನ್ನೊಂದು ಭಾಗವನ್ನು ಅಂದರೆ ಮೂಲೆಯಿಂದ ಮಹಾಯಾಜಕನಾದ ಎಲ್ಯಾಷೀಬನ ಮನೆಯ ಬಾಗಿಲಿನವರೆಗೆ ಜಕ್ಕೈಯ ಮಗನಾದ ಬಾರೂಕನು ಉತ್ಸಾಹದಿಂದ ಭದ್ರಪಡಿಸಿದನು.
21ಇವನ ನಂತರ, ಗೋಡೆಯ ಇನ್ನೊಂದು ಭಾಗವನ್ನು ಎಂದರೆ ಎಲ್ಯಾಷೀಬನ ಮನೆಯ ಬಾಗಿಲಿನಿಂದ ಅದೇ ಮನೆಯ ಕೊನೆಯವರೆಗೆ ಹಕ್ಕೋಚನ ಮೊಮ್ಮಗನೂ, ಊರೀಯನ ಮಗನೂ ಆದ ಮೆರೇಮೋತನು ಜೀರ್ಣೋದ್ಧಾರ ಮಾಡಿದನು.
22ಮುಂದಿನ ಭಾಗವನ್ನು ಜೀರ್ಣೋದ್ಧಾರ ಮಾಡಿದವರು ಸುತ್ತಲಿನ ಪ್ರದೇಶದ ಯಾಜಕರು.
23ಇವರ ಆಚೆ, ಬೆನ್ಯಾಮೀನ್ ಹಷ್ಷೂಬರು, ಇವರು ತಮ್ಮ ತಮ್ಮ ಮನೆಗಳಿಗೆ ಎದುರಾಗಿರುವ ಗೋಡೆಯನ್ನು ಜೀರ್ಣೋದ್ಧಾರ ಮಾಡಿದರು. ಇವರ ತರುವಾಯ ಅನನ್ಯನ ಮೊಮ್ಮಗನೂ, ಮಾಸೇಯನ ಮಗನೂ ಆದ ಅಜರ್ಯ, ಇವನು ತನ್ನ ಮನೆಯ ಹತ್ತಿರದಲ್ಲಿರುವ ಗೋಡೆಯನ್ನು ಜೀರ್ಣೋದ್ಧಾರ ಮಾಡಿದನು.
24ಇವನ ಆಚೆ, ಅಜರ್ಯನ ಮನೆಯಿಂದ ಮೂಲೆಯವರೆಗಿರುವ ಗೋಡೆಯ ಇನ್ನೊಂದು ಭಾಗವನ್ನು ಜೀರ್ಣೋದ್ಧಾರ ಮಾಡಿದವನು ಹೇನಾದಾದನ ಮಗನಾದ ಬಿನ್ನೂಯ್.
25ಸೆರೆಮನೆಯ ಅಂಗಳದ ಹತ್ತಿರ ಮೇಲಣ ಅರಮನೆಯ ಗೋಡೆಯನ್ನು ಮೀರಿ ಬರುವ ಮೂಲೆ ಬುರುಜಿನ ಎದುರಿನ ಭಾಗವನ್ನು ಊಜೈಯ ಮಗನಾದ ಪಾಲಾಲನೂ, ಇವನ ಆಚೆಯಲ್ಲಿ ಪರೋಷನ ಮಗನಾದ ಪೆದಾಯನೂ ಜೀರ್ಣೋದ್ಧಾರ ಮಾಡಿದರು.
26ಆ ಮೂಲೆ ಬುರುಜಿನ ಮತ್ತು ನೀರು ಬಾಗಿಲಿನ ಪೂರ್ವದಿಕ್ಕಿಗಿರುವ ಓಫೇಲ್ ಗುಡ್ಡವು ದೇವಾಲಯದ ಸೇವಕರ ನಿವಾಸ ಸ್ಥಾನವು.
27ಆ ದೊಡ್ಡ ಮೂಲೆ ಬುರುಜಿನ ಎದುರಿನಿಂದ ಓಫೇಲ್ ಗೋಡೆಯವರೆಗಿರುವ ಗೋಡೆಯ ಇನ್ನೊಂದು ಭಾಗವನ್ನು ತೆಕೋವದವರು ಜೀರ್ಣೋದ್ಧಾರ ಮಾಡಿದರು.
28ಯಾಜಕರು ಕುದುರೆ ಬಾಗಿಲಿನ ಆಚೆ ದಿನ್ನೆಯ ಮೇಲಿರುವ ಗೋಡೆಯಲ್ಲಿ ತಮ್ಮ ತಮ್ಮ ಮನೆಗಳ ಎದುರಿನ ಭಾಗಗಳನ್ನು ಜೀರ್ಣೋದ್ಧಾರ ಮಾಡಿದರು.
29ಇವರ ಆಚೆ, ಇಮ್ಮೇರನ ಮಗನಾದ ಚಾದೋಕನು ತನ್ನ ಮನೆಯ ಎದುರಿಗಿರುವ ಗೋಡೆಯನ್ನು ಜೀರ್ಣೋದ್ಧಾರ ಮಾಡಿದನು. ಇವನ ಆಚೆ, ಪೂರ್ವದಿಕ್ಕಿನ ದ್ವಾರಪಾಲಕನಾದ ಶೆಕನ್ಯನ ಮಗ ಶೆಮಾಯನು.
30ಇವನ ಆಚೆ ಶೆಲೆಮ್ಯನ ಮಗನಾದ ಹನನ್ಯ, ಗೋಡೆಯ ಇನ್ನೊಂದು ಭಾಗವನ್ನು ಜೀರ್ಣೋದ್ಧಾರ ಮಾಡಿದವನು ಚಾಲಾಫನ ಆರನೆಯ ಮಗನಾದ ಹಾನೂನ್, ಇವನ ಆಚೆ, ಅಂದರೆ ತನ್ನ ಸ್ವಂತ ಕೊಠಡಿಯ ಮುಂದೆ ಬೆರೆಕ್ಯನ ಮಗನಾದ ಮೆಷುಲ್ಲಾಮ್.
31ಇನ್ನೂ ಮುಂದಕ್ಕೆ ಅಕ್ಕಸಾಲಿಗರ ಮಲ್ಕೀಯ, ಇವನು ದಂಡು ಕೊಡುವ ಬಾಗಿಲಿನೆದುರಿನಲ್ಲಿರುವ ದೇವಾಲಯದ ಸೇವಕರ ಮತ್ತು ವರ್ತಕರ ಕೇರಿಯವರೆಗೂ ಮೂಲೆಯುಪ್ಪರಿಗೆಯವರೆಗೂ ಜೀರ್ಣೋದ್ಧಾರ ಮಾಡಿದನು.
32ಈ ಮೂಲೆಯುಪ್ಪರಿಗೆಗೂ, ಕುರಿ ಬಾಗಿಲಿಗೂ ಮಧ್ಯದಲ್ಲಿದ್ದ ಗೋಡೆಯನ್ನು ಜೀರ್ಣೋದ್ಧಾರ ಮಾಡಿದವರು ಅಕ್ಕಸಾಲಿಗರು, ವರ್ತಕರು ಇವರೇ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.