Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಮೀಕ 6

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಯೆಹೋವ ದೇವರು ಹೇಳುವುದನ್ನು ಈಗ ಕೇಳಿರಿ, ಎದ್ದೇಳು, ಬೆಟ್ಟಗಳ ಮುಂದೆ ವ್ಯಾಜ್ಯವಾಡು; ನೀನು ಹೇಳುವುದನ್ನು ಗುಡ್ಡಗಳು ಕೇಳಲಿ.
2ಬೆಟ್ಟಗಳೇ, ಯೆಹೋವ ದೇವರ ಆಪಾದನೆಯನ್ನು ಕೇಳಿರಿ. ಭೂಮಿಯ ಶಾಶ್ವತವಾದ ಅಸ್ತಿವಾರಗಳೇ ಕಿವಿಗೊಡಿರಿ. ಏಕೆಂದರೆ ಯೆಹೋವ ದೇವರಿಗೆ ತಮ್ಮ ಜನರ ವಿರುದ್ಧ ವ್ಯಾಜ್ಯವಿದೆ, ಅವರು ಇಸ್ರಾಯೇಲಿನ ವಿರುದ್ಧ ಆರೋಪಿಸುತ್ತಾರೆ.
3ನನ್ನ ಜನರೇ, ನಾನು ನಿಮಗೆ ಏನು ಮಾಡಿದ್ದೇನೆ? ನಾನು ನಿಮ್ಮ ಮೇಲೆ ಭಾರ ಹಾಕಿದ್ದೇನೋ? ನನಗೆ ಉತ್ತರಕೊಡಿರಿ.
4ನಾನು ಈಜಿಪ್ಟ್ ದೇಶದೊಳಗಿಂದ ನಿನ್ನನ್ನು ಮೇಲೆ ಬರಮಾಡಿ, ದಾಸತ್ವದ ದೇಶದೊಳಗಿಂದ ನಿನ್ನನ್ನು ವಿಮೋಚಿಸಿ, ಮೋಶೆ, ಆರೋನ್ ಮತ್ತು ಮಿರ್ಯಾಮಳನ್ನು ನಿನಗೆ ನಾಯಕರನ್ನಾಗಿ ಕಳುಹಿಸಿದೆನು.
5ನನ್ನ ಜನರೇ, ಮೋವಾಬಿನ ಅರಸನಾದ ಬಾಲಾಕನು ಯೋಚಿಸಿದ್ದನ್ನೂ ಬೆಯೋರನ ಮಗ ಬಿಳಾಮನು ಅವನಿಗೆ ಉತ್ತರವಾಗಿ ಹೇಳಿದ್ದನ್ನೂ ಶಿಟ್ಟೀಮು ಮೊದಲುಗೊಂಡು ಗಿಲ್ಗಾಲಿನ ವರೆಗೆ ಆದ ನಿಮ್ಮ ಪ್ರಯಾಣವನ್ನೂ ಈಗ ಜ್ಞಾಪಕಮಾಡಿಕೊಳ್ಳಿರಿ. ಆಗ ಯೆಹೋವ ದೇವರ ನೀತಿಯ ಕೃತ್ಯಗಳನ್ನು ತಿಳಿದುಕೊಳ್ಳುವಿರಿ.
6ನಾನು ಯಾವುದರೊಂದಿಗೆ ಯೆಹೋವ ದೇವರ ಮುಂದೆ ಬಂದು, ಯಾವುದರೊಂದಿಗೆ ಉನ್ನತವಾದ ದೇವರ ಮುಂದೆ ಅಡ್ಡಬೀಳಲಿ? ದಹನಬಲಿಗಳ ಮತ್ತು ಒಂದು ವರ್ಷದ ಕರುಗಳ ಸಂಗಡ ಆತನ ಮುಂದೆ ಹೋಗಲೇ?
7ಯೆಹೋವ ದೇವರು ಸಾವಿರ ಟಗರುಗಳಿಗಾದರೂ ಎಣ್ಣೆಯ ಹತ್ತು ಸಾವಿರ ನದಿಗಳಿಗಾದರೂ ಮೆಚ್ಚುವರೋ? ನನ್ನ ದ್ರೋಹಕ್ಕಾಗಿ ನನ್ನ ಚೊಚ್ಚಲ ಮಗನನ್ನೂ ನನ್ನ ಆತ್ಮದ ಪಾಪಕ್ಕಾಗಿ ನನ್ನ ಗರ್ಭದ ಫಲವನ್ನೂ ಕೊಡಲೋ?
8ಮನುಷ್ಯನೇ, ಒಳ್ಳೆಯದೇನೆಂದು ನಿನಗೆ ದೇವರು ತೋರಿಸಿದ್ದಾರೆ. ಹೌದು, ನ್ಯಾಯವನ್ನು ಕೈಗೊಳ್ಳುವದೂ ಕರುಣೆಯನ್ನು ಪ್ರೀತಿಸುವುದೂ ನಿನ್ನ ದೇವರ ಮುಂದೆ ನಮ್ರನಾಗಿ ನಡೆದುಕೊಳ್ಳುವದೂ ಇದನ್ನೇ ಹೊರತು ಯೆಹೋವ ದೇವರು ನಿನ್ನಿಂದ ಇನ್ನೇನನ್ನು ಅಪೇಕ್ಷಿಸುತ್ತಾರೆ? ಇಸ್ರಾಯೇಲರ ವಂಚನೆ ಮತ್ತು ಶಿಕ್ಷೆ
9ಕೇಳು! ಯೆಹೋವ ದೇವರು ಪಟ್ಟಣವನ್ನು ಕರೆಯುತ್ತಿದ್ದಾರೆ. ನಿಮ್ಮ ನಾಮಕ್ಕೆ ಭಯಪಡುವುದು ಜ್ಞಾನ. ಕೋಲು ಮತ್ತು ಅದನ್ನು ನೇಮಿಸಿದ ವ್ಯಕ್ತಿಯನ್ನು ಎಚ್ಚರಿಕೆಯಿಂದ ಆಲಿಸಿರಿ.
10ದುಷ್ಟಮನೆತನವೇ ನೀನು ಕೆಟ್ಟದ್ದಾಗಿ ಸಂಪಾದಿಸಿದ್ದನ್ನು ಶಾಪಗ್ರಸ್ತರಾದ ಕಡಿಮೆ ಅಳತೆಯನ್ನು ನಾನು ಮರೆಯಬೇಕೋ?
11ನಾನು ದುಷ್ಟತ್ವದ ತಕ್ಕಡಿಗಳುಳ್ಳವರನ್ನು ಮೋಸವಾದ ಕಲ್ಲುಗಳ ಚೀಲವುಳ್ಳವರನ್ನು ನಿರ್ಮಲರೆಂದೆಣಿಸುವೆನೋ?
12ಅದರ ಐಶ್ವರ್ಯವಂತರು ಬಲಾತ್ಕಾರದಿಂದ ತುಂಬಿದ್ದಾರೆ. ಅದರ ನಿವಾಸಿಗಳು ಸುಳ್ಳುಗಳನ್ನು ಹೇಳುವವರಾಗಿದ್ದಾರೆ. ಅವರ ನಾಲಿಗೆ ಅವರ ಬಾಯಿಯಲ್ಲಿ ಕಪಟವುಳ್ಳದ್ದೇ.
13ಆದ್ದರಿಂದ ನಾನು ಸಹ ನಿನ್ನನ್ನು ಹೊಡೆದು ನಿನ್ನ ಪಾಪಗಳ ನಿಮಿತ್ತ ನಿನ್ನನ್ನು ಹಾಳುಮಾಡುವೆನು.
14ನೀನು ಉಂಡರೂ ತೃಪ್ತಿಯಾಗದೆ ಇರುವೆ; ನಿನ್ನೊಳಗೆ ಹಸಿವೆಯು ಇರುವುದು; ನೀವು ಸಂಗ್ರಹಿಸುತ್ತೀರಿ ಆದರೆ ಏನನ್ನೂ ಉಳಿಸುವುದಿಲ್ಲ, ಏಕೆಂದರೆ ನೀವು ಉಳಿಸುವದನ್ನು ನಾನು ಕತ್ತಿಗೆ ಕೊಡುತ್ತೇನೆ.
15ನೀನು ಬೀಜ ಬಿತ್ತಿ ಕೊಯ್ಯದೆ ಇರುವೆ; ಹಿಪ್ಪೆಗಳನ್ನು ತುಳಿದು ಎಣ್ಣೆ ಹಚ್ಚಿಕೊಳ್ಳದೆ ಇರುವೆ; ದ್ರಾಕ್ಷಾರಸಮಾಡಿ ಕುಡಿಯದೆ ಇರುವೆ.
16ಏಕೆಂದರೆ ಒಮ್ರಿಯ ನಿಯಮಗಳನ್ನೂ ಕೈಕೊಳ್ಳುತ್ತೀರಿ. ಅಹಾಬ್ ಮನೆತನದ ದುರಾಚಾರಗಳನ್ನೂ ಅವರ ಸಂಪ್ರದಾಯಗಳನ್ನೂ ಅನುಸರಿಸುತ್ತಾ ಬಂದಿದ್ದೀರಿ. ಆದ್ದರಿಂದ ನೀವು ನಾಶವಾಗುವಂತೆ ಮಾಡುವೆನು. ನಿಮ್ಮ ಜನರನ್ನು ಅಪಹಾಸ್ಯಕ್ಕೆ ಗುರಿಮಾಡುವೆನು. ಆದ್ದರಿಂದ ನೀವು ನನ್ನ ಜನರ ನಿಂದೆಯನ್ನು ಹೊರುವಿರಿ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.