Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಮೀಕ 5

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಬೇತ್ಲೆಹೇಮಿನಿಂದ ಒಬ್ಬ ಅಧಿಪತಿಯು ಸೈನ್ಯಗಳ ಪಟ್ಟಣವೇ, ಗುಂಪುಗಳಾಗಿ ಕೂಡಿಕೊಳ್ಳಿರಿ. ನಮ್ಮ ಮೇಲೆ ಮುತ್ತಿಗೆ ಹಾಕಿದ್ದಾರೆ. ಇಸ್ರಾಯೇಲಿನ ಅಧಿಪತಿಯನ್ನು ಕೋಲಿನಿಂದ ಕೆನ್ನೆಯ ಮೇಲೆ ಹೊಡೆಯುತ್ತಾರೆ.
2ಆದರೆ ಎಫ್ರಾತದ ಬೇತ್ಲೆಹೇಮೇ, ನೀನು ಯೆಹೂದದ ಗೋತ್ರಗಳಲ್ಲಿ ಸಣ್ಣದಾಗಿದ್ದರೂ ಇಸ್ರಾಯೇಲಿನಲ್ಲಿ ದೊರೆತನ ಮಾಡತಕ್ಕವನು ನಿನ್ನೊಳಗಿಂದ ನನಗಾಗಿ ಹೊರಡುವನು. ಆತನ ಮೂಲವು ಪೂರ್ವದಿಂದಲೂ ಅನಾದಿ ಕಾಲದಿಂದಲೂ ಆದದ್ದು.
3ಆದ್ದರಿಂದ ಹೆರುವವಳು ಒಬ್ಬ ಮಗನನ್ನು ಹೆರುವ ಕಾಲದವರೆಗೂ ಇಸ್ರಾಯೇಲನ್ನು ಕೈಬಿಡಲಾಗುವುದು. ಆಗ ಅವನ ಸಹೋದರರಲ್ಲಿ ಉಳಿದವರು ಇಸ್ರಾಯೇಲರ ಬಳಿಗೆ ಹಿಂದಿರುಗುವರು.
4ಆತನು ಯೆಹೋವ ದೇವರ ಬಲದಲ್ಲಿಯೂ ತನ್ನ ದೇವರಾದ ಯೆಹೋವ ದೇವರ ಹೆಸರಿನ ಘನತೆಯಲ್ಲಿಯೂ ನಿಂತುಕೊಂಡು ತನ್ನ ಮಂದೆಯನ್ನು ಮೇಯಿಸುವನು. ಅವರು ನೆಲೆಯಾಗಿರುವರು, ಆತನ ಘನತೆಯು ಭೂಮಿಯ ಅಂತ್ಯಗಳ ಮಟ್ಟಿಗೂ ತಲುಪುವುದು.
5ಆತನೇ ಅವರ ಸಮಾಧಾನವಾಗಿರುವನು. ಅಸ್ಸೀರಿಯದವನು ನಮ್ಮ ನಾಡಿಗೆ ಮುತ್ತಿಗೆ ಹಾಕುವಾಗ ನಮ್ಮ ಕೋಟೆಗಳ ಮೂಲಕ ಸೈನ್ಯವಾಗಿ ಹೋಗುವಾಗ ನಾವು ಅವನಿಗೆ ವಿರೋಧವಾಗಿ ಏಳು ಕುರುಬರನ್ನೂ ಎಂಟು ಸೇನಾಪತಿಗಳನ್ನೂ ಎಬ್ಬಿಸುವೆವು.
6ಅವರು ಅಸ್ಸೀರಿಯ ದೇಶವನ್ನು ಖಡ್ಗದಿಂದಲೂ ನಿಮ್ರೋದನ ದೇಶವನ್ನು ಹಿಡಿದ ಖಡ್ಗದಿಂದಲೂ ಆಳುವರು. ಅಸ್ಸೀರಿಯವು ನಮ್ಮ ದೇಶದಲ್ಲಿ ಬಂದು ನಮ್ಮ ಪ್ರದೇಶವನ್ನು ಮುತ್ತಿಗೆ ಹಾಕಿ ಪ್ರಾಂತಗಳಲ್ಲಿ ನಡೆಯುವಾಗ ಆತನು ನಮ್ಮನ್ನು ತಪ್ಪಿಸುವನು.
7ಇದಲ್ಲದೆ ಯಾಕೋಬನ ಶೇಷವು ಅನೇಕ ಜನಾಂಗಳ ಮಧ್ಯದಲ್ಲಿ ಯೆಹೋವ ದೇವರಿಂದ ಬಂದ ಮಂಜಿನ ಹಾಗೆಯೂ ಹುಲ್ಲಿನ ಮೇಲೆ ಜಡಿಮಳೆಯ ಹಾಗೆಯೂ ಇರುವುದು. ಅದು ಮನುಷ್ಯರಿಗೋಸ್ಕರ ಆತುಕೊಳ್ಳುವುದಿಲ್ಲ, ಮನುಷ್ಯ ಮಕ್ಕಳಿಗಾಗಿ ಕಾದುಕೊಳ್ಳುವುದಿಲ್ಲ.
8ಯಾಕೋಬನ ಜನಶೇಷವು ದೇಶದೇಶಗಳೊಳಗೆ ಅನೇಕ ಜನಾಂಗಗಳ ಮಧ್ಯದಲ್ಲಿ, ಅಡವಿಯ ಮೃಗಗಳಲ್ಲಿ ಸಿಂಹದಂತೆಯೂ ಕುರಿಮಂದೆಗಳಲ್ಲಿ ಪ್ರಾಯದ ಸಿಂಹದಂತೆಯೂ ಇರುವುದು. ಅದು ಹಾದುಹೋದರೆ ಇಳಿದುಬಿಟ್ಟು ಹರಿದುಬಿಡುತ್ತದೆ, ಯಾರೂ ಬಿಡಿಸಲಾರರು,
9ನಿನ್ನ ಕೈ ನಿನ್ನ ವೈರಿಗಳೆಲ್ಲರ ಮೇಲೆ ಉನ್ನತವಾಗಿರುವುದು. ನಿನ್ನ ಶತ್ರುಗಳೆಲ್ಲರು ನಾಶಹೊಂದುವರು.
10ಯೆಹೋವ ದೇವರು ಹೀಗೆ ಘೋಷಿಸುತ್ತಾರೆ: “ಆ ದಿವಸದಲ್ಲಿ, ನಾನು ನಿನ್ನ ಮಧ್ಯದೊಳಗಿರುವ ನಿನ್ನ ಕುದುರೆಗಳನ್ನು ಕಡಿದುಬಿಟ್ಟು ನಿನ್ನ ರಥಗಳನ್ನು ನಾಶಮಾಡುವೆನು.
11ನಿನ್ನ ದೇಶದ ಪಟ್ಟಣಗಳನ್ನು ನಾಶಮಾಡಿಬಿಟ್ಟು ನಿನ್ನ ಕೋಟೆಗಳನ್ನೆಲ್ಲಾ ಕೆಡವಿಹಾಕುವೆನು.
12ನಿನ್ನ ಮಂತ್ರತಂತ್ರವನ್ನು ನಾಶಮಾಡುವೆನು; ಕಣಿ ಹೇಳುವವರು ನಿನಗೆ ಇನ್ನು ಇರುವುದಿಲ್ಲ.
13ನಿನ್ನ ಕೆತ್ತಿದ ವಿಗ್ರಹಗಳನ್ನೂ ನಿಂತಿರುವ ನಿನ್ನ ಪ್ರತಿಮೆಗಳನ್ನೂ ಸಹ ನಿನ್ನ ಮಧ್ಯದೊಳಗಿಂದ ಕಡಿದುಬಿಡುವೆನು. ಇನ್ನು ನಿನ್ನ ಸ್ವಂತ ಕೈಗಳು ರೂಪಿಸಿದ್ದನ್ನು ನೀನು ಆರಾಧಿಸದಂತೆ ಮಾಡುವೆನು.
14ನಿನ್ನ ಅಶೇರ ಸ್ತಂಭಗಳನ್ನು ನಿನ್ನ ಮಧ್ಯದೊಳಗಿಂದ ಕಿತ್ತುಹಾಕಿ ನಿನ್ನ ಪಟ್ಟಣಗಳನ್ನು ನಾಶಮಾಡುವೆನು.
15ನನಗೆ ಕಿವಿಗೊಡದೆ ಇದ್ದ ಜನಾಂಗಗಳಿಗೆ ಕೋಪದಿಂದಲೂ ಉಗ್ರದಿಂದಲೂ ಮುಯ್ಯಿಗೆ ಮುಯ್ಯಿತೀರಿಸುವೆನು.”
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.