Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೆಹೋಶುವ 19

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಎರಡನೆಯ ಚೀಟು ಬಿದ್ದ ಭಾಗವು ಸಿಮೆಯೋನನ ಗೋತ್ರದವರದಾಗಿತ್ತು. ಸಿಮೆಯೋನನ ಗೋತ್ರದವರಿಗೆ ಅವರ ಕುಟುಂಬಗಳ ಪ್ರಕಾರ ದೊರೆಯಿತು. ಅವರ ಸೊತ್ತು ಯೆಹೂದ ಗೋತ್ರದ ಸೊತ್ತಿನ ಮಧ್ಯದಲ್ಲಿತ್ತು.
2ಅವರಿಗೆ ಸೇರಿದ ಪಟ್ಟಣಗಳು ಯಾವುವೆಂದರೆ: ಬೇರ್ಷೆಬಾ ಅಥವಾ ಶೆಬಾ, ಮೋಲಾದಾ,
3ಹಚರ್ ಷೂವಾಲ್, ಬಾಲಾ, ಎಚೆಮ್,
4ಎಲ್ತೋಲದ್, ಬೆತೂಲ್, ಹೊರ್ಮಾ,
5ಚಿಕ್ಲಗ್, ಬೇತ್ ಮರ್ಕಾಬೋತ್, ಹಚರ್‌ಸೂಸಾ,
6ಬೇತ್ ಲೆಬಾವೋತ್, ಶಾರೂಹೆನ್ ಎಂಬ ಹದಿಮೂರು ಪಟ್ಟಣಗಳೂ, ಅವುಗಳ ಗ್ರಾಮಗಳೂ ಆಗಿದ್ದವು.
7ಇದಲ್ಲದೆ ಆಯಿನ್, ರಿಮ್ಮೋನ್, ಎತೆರ್, ಆಷಾನ್ ಎಂಬ ನಾಲ್ಕು ಪಟ್ಟಣಗಳು ಅವುಗಳ ಗ್ರಾಮಗಳೂ ಆಗಿದ್ದವು.
8ಇದರೊಂದಿಗೆ ಬಾಲಾತ್ ಬೇರಿನವರೆಗೂ ಇರುವ ಎಲ್ಲಾ ಪಟ್ಟಣ ಮತ್ತು ಅದರ ಗ್ರಾಮಗಳೂ ಬಾಲತ್ ಬೇರ್ ಎಂಬುದು ದಕ್ಷಿಣದಲ್ಲಿರುವ ನೆಗೇವಿನ ರಾಮದಲ್ಲಿ ಇರುತ್ತದೆ. ಇದೇ ಸಿಮೆಯೋನನ ಗೋತ್ರದವರ ಕುಟುಂಬಗಳ ಪ್ರಕಾರ ದೊರೆತ ಸೊತ್ತು.
9ಸಿಮೆಯೋನನ ಗೋತ್ರದವರಿಗೆ ಬಾಧ್ಯತೆ ಯೆಹೂದ ಗೋತ್ರದವರ ಭಾಗದಿಂದ ಸಿಕ್ಕಿತು. ಏಕೆಂದರೆ ಯೆಹೂದ ಗೋತ್ರದ ಭಾಗವು ಅವರಿಗೆ ಹೆಚ್ಚಾಗಿದ್ದ ಕಾರಣ, ಸಿಮೆಯೋನನ ಗೋತ್ರದವರು ಯೆಹೂದ ಗೋತ್ರದವರ ಎಲ್ಲೆಯ ಒಳಗಿಂದಲೇ ತಮ್ಮ ಪಾಲನ್ನು ಹೊಂದಿದರು. ಜೆಬುಲೂನನ ಪಾಲು
10ಮೂರನೆಯ ಚೀಟು ಬಿದ್ದ ಭಾಗ ಜೆಬುಲೂನನ ಗೋತ್ರದವರಿಗೆ ಅವರ ಕುಟುಂಬಗಳ ಪ್ರಕಾರ ಬಿದ್ದಿತು. ಅವರ ಬಾಧ್ಯತೆಯ ಮೇರೆ ಸಾರೀದ್ ವರೆಗೂ ಇತ್ತು.
11ಅಲ್ಲಿಂದ ಪಶ್ಚಿಮ ಕಡೆಗೆ ಹೋಗಿ, ಮರಾಳಕ್ಕೆ ಏರಿ, ದಬ್ಬೆಷೆತಿಗೆ ಹೋಗಿ, ಯೊಕ್ನೆಯಾಮಿಗೆ ಎದುರಾದ ಹಳ್ಳಕ್ಕೆ ಹೋಗುತ್ತದೆ.
12ಅದು ಸಾರೀದಿನಿಂದ ಸೂರ್ಯನು ಉದಯಿಸುವ ಪೂರ್ವದಿಕ್ಕಿನ ಕಿಸ್ಲೋತ್ ತಾಬೋರಿನ ಮೇರೆಗೆ ತಿರುಗಿ, ಅಲ್ಲಿಂದ ದಾಬೆರತಿಗೆ ಹೋಗುತ್ತದೆ. ಅಲ್ಲಿಂದ ಏರುತ್ತಾ ಯಾಫೀಯಕ್ಕೆ ಹೋಗುತ್ತದೆ.
13ಅಲ್ಲಿಂದ ಪೂರ್ವದಿಕ್ಕಿನಲ್ಲಿ ಮುಂದುವರೆದು ಗತ್‌ಹೇಫೆರನ್ನು ಮತ್ತು ಎತ್‌ಕಾಚೀನನ್ನು ದಾಟಿ, ರಿಮ್ಮೋನವರೆಗೂ ಹೋಗಿ ನೇಯಗೆ ತಿರುಗುತ್ತದೆ.
14ಅಲ್ಲಿಂದ ಆ ಮೇರೆ ಉತ್ತರ ದಿಕ್ಕಿನಲ್ಲಿರುವ ಹನ್ನಾತೋನಿಗೆ ಸುತ್ತಿಕೊಂಡು ಇಫ್ತಯೇಲನ ಹಳ್ಳದ ತಗ್ಗಿಗೆ ಮುಗಿಯುತ್ತದೆ.
15ಈ ಮೇರೆಯಲ್ಲಿರುವ ಕಟ್ಟಾತ್, ನಹಲಾಲ್, ಶಿಮ್ರೋನ್, ಇದಲಾ, ಬೇತ್ಲೆಹೇಮ್ ಮೊದಲಾದ ಹನ್ನೆರಡು ಪಟ್ಟಣಗಳು, ಅವುಗಳ ಗ್ರಾಮಗಳು ಸಹ ಒಳಪಟ್ಟಿರುತ್ತದೆ
16ಜೆಬುಲೂನಿನ ಗೋತ್ರದವರಿಗೆ ಅವರ ಕುಟುಂಬಗಳ ಪ್ರಕಾರ ಆ ಪಟ್ಟಣಗಳೂ, ಅವುಗಳ ಗ್ರಾಮಗಳೂ ಅವರ ಬಾಧ್ಯತೆಯಾಗಿದ್ದವು. ಇಸ್ಸಾಕಾರನ ಪಾಲು
17ನಾಲ್ಕನೆಯ ಚೀಟು ಇಸ್ಸಾಕಾರನ ಸಂತತಿಯವರಿಗೆ ಬಿದ್ದಿತು.
18ಅವರ ಮೇರೆಯು: ಇಜ್ರೆಯೇಲ್ ಕೆಸುಲೋತ್, ಶೂನೇಮ್,
19ಹಫಾರಯಿಮ್, ಶಿಯೋನ್, ಅನಾಹರತ್,
20ರಬ್ಬೀತ್, ಕಿಷ್ಯೋನ್, ಎಬೆಜ್,
21ರೆಮೆತ್, ಏಂಗನ್ನೀಮ್, ಏನ್ ಹದ್ದಾ, ಬೇತ್ ಪಚ್ಚೇಚ್ ಎಂಬ ತೀರಗಳನ್ನು ಒಳಗೊಂಡಿತ್ತು.
22ಆ ಎಲ್ಲೆಯು ತಾಬೋರ್, ಶಹಚೀಮಾ, ಬೇತ್ ಷೆಮೆಷ್ ಎಂಬ ಊರುಗಳಿಗೆ ಸೇರಿ ಯೊರ್ದನ್ ನದಿ ತೀರದಲ್ಲಿ ಮುಗಿಯುತ್ತದೆ. ಅಲ್ಲಿ ಹದಿನಾರು ಪಟ್ಟಣಗಳೂ ಅವುಗಳ ಗ್ರಾಮಗಳೂ ಇದ್ದವು.
23ಇಸ್ಸಾಕಾರನ ಗೋತ್ರದ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಪಟ್ಟಣಗಳೂ, ಅವುಗಳ ಗ್ರಾಮಗಳೂ ಅವರಿಗೆ ದೊರೆತ ಪಾಲು. ಆಶೇರನ ಪಾಲು
24ಚೀಟು ಬಿದ್ದ ಐದನೆಯ ಭಾಗವು ಆಶೇರನ ಗೋತ್ರಕ್ಕೆ ಅವರ ಕುಟುಂಬದ ಪ್ರಕಾರ ದೊರೆಯಿತು.
25ಅವರ ಮೇರೆ: ಹೆಲ್ಕತ್, ಹಲೀ, ಬೆಟೆನ್, ಅಕ್ಷಾಫ್,
26ಅಲಮ್ಮೆಲೆಕ್, ಅಮಾದ್, ಮಿಷಾಲ್ ಎಂಬ ಪಟ್ಟಣಗಳನ್ನು ಸುತ್ತಿಕೊಂಡು ಅದು ಪಶ್ಚಿಮಕ್ಕೆ ಕರ್ಮೆಲ್, ಶೀಹೋರ್ ಲಿಬ್ನತ್ ಕಡೆ ಹೋಗಿ,
27ಅಲ್ಲಿಂದ ಪೂರ್ವದ ಕಡೆಯಾಗಿ ಬೇತ್‌ದಾಗೋನಿಗೆ ತಿರುಗುತ್ತದೆ. ಅನಂತರ ಜೆಬುಲೂನಿಗೂ ಬೇತ್ ಏಮೆಕಿಗೆ ಉತ್ತರ ದಿಕ್ಕಿನಲ್ಲಿ ಇರುವ ಇಫ್ತಯೇಲ್ ತಗ್ಗಿಗೂ ನೆಗೀಯೇಲ್ ಕಡೆ ಹಾದು, ಎಡಭಾಗದಲ್ಲಿರುವ ಕಾಬೂಲ್ ಕಡೆ ಮುಂದುವರೆಯುತ್ತದೆ.
28ಅಲ್ಲಿಂದ ಅಬ್ದೋನ್, ರೆಹೋಬ್, ಹಮ್ಮೋನ್, ಕಾನಾ ಹಾಗೂ ಸೀದೋನ್ ಎಂಬ ಮಹಾನಗರಕ್ಕೆ ಹೋಗುತ್ತದೆ.
29ಅಲ್ಲಿಂದ ರಾಮಾ, ಟೈರ್ ಎಂಬ ಕೋಟೆಪಟ್ಟಣದವರೆಗೂ ಹೋಗುತ್ತದೆ. ಅಲ್ಲಿಂದ ಹೋಸಾ ಕಡೆ ಹೊರಟು ಮೆಡಿಟೆರಿಯನ್ ಸಮುದ್ರದ ಬಳಿ ಅಕ್ಜೀಬ್ ಮೇರೆಯ ಅಂಚಿಗೆ ಮುಗಿಯುತ್ತದೆ.
30ಅದಕ್ಕೆ ಉಮ್ಮಾ, ಅಫೇಕ್ ಮತ್ತು ರೆಹೋಬ್ ಒಟ್ಟು ಇಪ್ಪತ್ತೆರಡು ಪಟ್ಟಣಗಳೂ ಅವುಗಳ ಗ್ರಾಮಗಳೂ ಇದ್ದವು.
31ಇದೇ ಆಶೇರನ ಗೋತ್ರದವರಿಗೆ ಅವರ ಕುಟುಂಬಗಳ ಪ್ರಕಾರ ದೊರೆತ ಪಟ್ಟಣಗಳೂ, ಅವುಗಳ ಗ್ರಾಮಗಳೂ ಆಗಿರುತ್ತವೆ. ನಫ್ತಾಲಿಗೆ ದೊರೆತ ಭಾಗ
32ಆರನೆಯ ಚೀಟು ಬಿದ್ದ ಭಾಗವು ನಫ್ತಾಲಿಯ ಗೋತ್ರದ್ದಾಗಿತ್ತು. ನಫ್ತಾಲಿಯ ಗೋತ್ರದ ಅವರ ಕುಟುಂಬಗಳ ಪ್ರಕಾರ ಪಾಲು ದೊರೆಯಿತು.
33ಅವರ ಮೇರೆಯು ಹೆಲೇಫ್ ಮತ್ತು ಚಾನನ್ನೀಮ್ ಎಂಬ ಕಡೆಯಲ್ಲಿ ಇರುವ ಅಲ್ಲೋನ್ ಮರದಿಂದ, ಆದಾಮಿ ನೆಕೆಬ್, ಯಬ್ನೆಯೇಲ್, ಇವುಗಳ ಮೇಲೆ ಹಾದು ಲಕ್ಕೂಮ್ ತನಕ ಹೋಗಿ ಯೊರ್ದನ್ ನದಿಯ ತೀರದಲ್ಲಿ ಮುಗಿಯುತ್ತದೆ.
34ಆ ಮೇರೆಯು ಪಶ್ಚಿಮಕ್ಕೆ ಅಜ್ನೋತ್ ತಾಬೋರ್ ಕಡೆಗೆ ತಿರುಗಿ, ಅಲ್ಲಿಂದ ಹುಕ್ಕೋಕ್ ಹೊರಟು, ದಕ್ಷಿಣಕ್ಕೆ ಜೆಬುಲೂನನನ್ನೂ ಪಶ್ಚಿಮಕ್ಕೆ ಆಶೇರನ್ನೂ ಮತ್ತು ಯೆಹೂದಿಯರ ಮೇರೆಗೂ ಪೂರ್ವದಿಕ್ಕಿನಲ್ಲಿ ಯೊರ್ದನ್ ನದಿಯನ್ನು ಮುಟ್ಟಿ ಬರುವುದು.
35ಇದರಲ್ಲಿರುವ ಕೋಟೆಗಳುಳ್ಳ ಪಟ್ಟಣಗಳು ಯಾವುವೆಂದರೆ: ಜಿದ್ದೀಮ್, ಚೇರ್, ಹಮ್ಮತ್, ರಕ್ಕತ್, ಕಿನ್ನೆರೆತ್,
36ಅದಾಮಾ, ರಾಮಾ, ಹಾಚೋರ್,
37ಕೆದೆಷ್, ಎದ್ರೈ, ಎನ್ ಹಾಚೋರ್,
38ಇರೋನ್, ಮಿಗ್ದಲ್ ಎಲ್, ಹೊರೇಮ್, ಬೇತ್ ಅನಾತ್ ಹಾಗೂ ಬೇತ್ ಷೆಮೆಷ್. ಮೊದಲಾದ ಹತ್ತೊಂಬತ್ತು ಕೋಟೆಪಟ್ಟಣಗಳೂ, ಅವುಗಳ ಗ್ರಾಮಗಳು.
39ಇದೇ ನಫ್ತಾಲಿಯ ಗೋತ್ರದವರಿಗೆ ಅವರ ಕುಟುಂಬಗಳ ಪ್ರಕಾರ ಸೊತ್ತಾಗಿ ಸಿಕ್ಕಿದ ಪಟ್ಟಣಗಳೂ ಅವುಗಳ ಗ್ರಾಮಗಳು. ದಾನ್ ಗೋತ್ರಕ್ಕೆ ದೊರೆತ ಭಾಗ
40ಇದಲ್ಲದೆ ಏಳನೆಯ ಚೀಟು ಬಿದ್ದ ಭಾಗವು ದಾನನ ಗೋತ್ರದವರಿಗೆ ಅವರ ಕುಟುಂಬಗಳ ಪ್ರಕಾರ ದೊರೆಯಿತು.
41ಅವರಿಗೆ ದೊರೆತ ಸೊತ್ತಿನ ವಿವರ: ಚೊರ್ಗಾ, ಎಷ್ಟಾವೋಲ್, ಈರ್ ಷೆಮೆಷ್,
42ಶಾಲಬ್ಬೀನ್, ಅಯ್ಯಾಲೋನ್, ಇತ್ಲಾ,
43ಏಲೋನ್, ತಿಮ್ನಾ, ಎಕ್ರೋನ್,
44ಎಲ್ತೆಕೇ, ಗಿಬ್ಬೆತೋನ್, ಬಾಲಾತ್,
45ಯೆಹುದ್, ಬೆನೇ ಬೆರಕ್, ಗತ್ ರಿಮ್ಮೋನ್,
46ಮೇಯರ್ಕೋನ್, ರಕ್ಕೋನ್ ಎಂಬ ಪಟ್ಟಣಗಳು. ಯೊಪ್ಪ ಊರಿಗೆ ಎದುರಾದ ಮೇರೆಯು ಸಹ ದೊರಕಿತು.
47ಇದಲ್ಲದೆ ದಾನನ ಗೋತ್ರದ ಮೇರೆಯು ಅವರಿಗೆ ಸಾಲದ್ದರಿಂದ ಅವರು ಹೊರಟುಹೋಗಿ ಲೆಷೆಮಿನ ಮೇಲೆ ಖಡ್ಗದಿಂದ ಯುದ್ಧಮಾಡಿ, ಅದನ್ನು ಸೋಲಿಸಿ, ಸ್ವಾಧೀನಮಾಡಿಕೊಂಡರು. ಅವರು ಅದರಲ್ಲಿ ವಾಸವಾಗಿದ್ದು ಲೆಷೆಮಿಗೆ ತಮ್ಮ ತಂದೆಯಾದ ದಾನನ ಹೆಸರಿನ ಪ್ರಕಾರ ದಾನ್ ಎಂದು ಹೆಸರಿಟ್ಟರು.
48ಈ ಪಟ್ಟಣಗಳೂ, ಅವುಗಳ ಗ್ರಾಮಗಳೂ, ದಾನ್ ಗೋತ್ರಕ್ಕೆ ಅವರ ಕುಟುಂಬಗಳ ಪ್ರಕಾರ ದೊರೆತ ಬಾಧ್ಯತೆಯು ಇದೇ. ಯೆಹೋಶುವನಿಗೆ ಕೊಟ್ಟ ಭಾಗ
49ಅವರು ದೇಶವನ್ನು ಅದರ ಮೇರೆಗಳ ಪ್ರಕಾರ ಬಾಧ್ಯತೆಯಾಗಿ ಹಂಚಿಕೊಂಡ ಮೇಲೆ ಇಸ್ರಾಯೇಲರು ನೂನನ ಮಗನಾದ ಯೆಹೋಶುವನಿಗೆ ತಮ್ಮ ಮಧ್ಯದಲ್ಲಿ ಪಾಲನ್ನು ಕೊಟ್ಟರು.
50ಅವನು ಕೇಳಿದ ಎಫ್ರಾಯೀಮ್ ಬೆಟ್ಟದಲ್ಲಿರುವ ತಿಮ್ನತ್ ಸೆರಹ ಎಂಬ ಪಟ್ಟಣವನ್ನು ಯೆಹೋವ ದೇವರ ಆಜ್ಞೆಯ ಪ್ರಕಾರ ಕೊಟ್ಟರು. ಅವನು ಪಟ್ಟಣವನ್ನು ಕಟ್ಟಿಕೊಂಡು ಅಲ್ಲಿಯೇ ನೆಲೆಸಿದನು.
51ಯಾಜಕನಾದ ಎಲಿಯಾಜರನೂ ನೂನನ ಮಗ ಯೆಹೋಶುವನೂ ಇಸ್ರಾಯೇಲರ ಗೋತ್ರಗಳ ಪಿತೃಗಳ ಹಿರಿಯರೂ ಶೀಲೋವಿನಲ್ಲಿ ದೇವದರ್ಶನ ಗುಡಾರದ ಬಾಗಿಲ ಬಳಿಯಲ್ಲಿ ಯೆಹೋವ ದೇವರ ಸಮ್ಮುಖದಲ್ಲಿ ಚೀಟುಹಾಕಿ ಹಂಚಿಕೊಟ್ಟ ಬಾಧ್ಯತೆಗಳು ಇವೇ. ಹೀಗೆ ಅವರು ದೇಶವನ್ನು ಹಂಚಿಕೊಳ್ಳುವ ಕೆಲಸವನ್ನು ಪೂರೈಸಿದರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.