Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೆಹೋಶುವ 18

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಇಸ್ರಾಯೇಲರ ಸಮೂಹವೆಲ್ಲಾ ಶೀಲೋವಿನಲ್ಲಿ ಒಟ್ಟು ಕೂಡಿ ಅಲ್ಲಿ ದೇವದರ್ಶನ ಗುಡಾರವನ್ನು ನಿಲ್ಲಿಸಿದರು. ದೇಶವು ಅವರ ವಶವಾಯಿತು.
2ಆದರೆ ಇಸ್ರಾಯೇಲರಲ್ಲಿ ತಮ್ಮ ಬಾಧ್ಯತೆಯನ್ನು ಇನ್ನೂ ಹೊಂದಿಕೊಳ್ಳದ ಏಳು ಗೋತ್ರಗಳು ಉಳಿದಿದ್ದವು.
3ಯೆಹೋಶುವನು ಇಸ್ರಾಯೇಲರಿಗೆ, “ನಿಮ್ಮ ತಂದೆಗಳ ದೇವರಾದ ಯೆಹೋವ ದೇವರು ನಿಮಗೆ ಕೊಟ್ಟ ದೇಶವನ್ನು ಸ್ವಾಧೀನಮಾಡಿಕೊಳ್ಳುವುದಕ್ಕೆ ನೀವು ಎಷ್ಟರವರೆಗೆ ಆಲಸ್ಯ ಮಾಡುವಿರಿ?
4ಒಂದೊಂದು ಗೋತ್ರಕ್ಕೆ ಮೂರು ಮಂದಿಯ ಪ್ರಕಾರ ನಿಮ್ಮೊಳಗಿಂದ ಕರೆದುಕೊಂಡು ಬನ್ನಿರಿ. ನಾನು ಅವರನ್ನು ಕಳುಹಿಸುವೆನು. ಅವರು ಎದ್ದು ದೇಶದಲ್ಲೆಲ್ಲಾ ಹೋಗಿ ತಮ್ಮ ಬಾಧ್ಯತೆಗಳ ಪ್ರಕಾರ ಅದನ್ನು ಅಳತೆಮಾಡಿ ವಿವರವಾಗಿ ಬರೆಯಲಿ. ತರುವಾಯ ನನ್ನ ಬಳಿಗೆ ಅವರು ಬರಲಿ.
5ನೀವು ಅದನ್ನು ಏಳು ಪಾಲಾಗಿ ಹಂಚಬೇಕು. ದಕ್ಷಿಣದಲ್ಲಿ ಯೆಹೂದವು, ಉತ್ತರದಲ್ಲಿ ಯೋಸೇಫನ ಮನೆತನದವರೂ ನೆಲೆಸಬೇಕು.
6ನೀವು ದೇಶವನ್ನು ಏಳು ಪಾಲಾಗಿ ವಿತರಿಸಬೇಕು ಮತ್ತು ಅದರ ವಿವರಗಳನ್ನು ಇಲ್ಲಿ ನನ್ನ ಬಳಿಯಲ್ಲಿ ತರಬೇಕು. ಆಗ ನಾನು ಈ ಸ್ಥಳದಲ್ಲಿ ನಮ್ಮ ದೇವರಾದ ಯೆಹೋವ ದೇವರ ಮುಂದೆ ನಿಮಗಾಗಿ ಚೀಟುಗಳನ್ನು ಹಾಕುವೆನು.
7ಆದರೆ ಲೇವಿಯರಿಗೆ ನಿಮ್ಮೊಳಗೆ ಪಾಲಿಲ್ಲ. ಏಕೆಂದರೆ ಅವರಿಗೆ ಯೆಹೋವ ದೇವರ ಯಾಜಕತ್ವವೇ ಅವರ ಸೊತ್ತು. ಇದಲ್ಲದೆ ಗಾದನೂ ರೂಬೇನನೂ ಮನಸ್ಸೆಯ ಅರ್ಧ ಗೋತ್ರವೂ ಯೊರ್ದನ್ ನದಿಯ ಪೂರ್ವದಿಕ್ಕಿನಲ್ಲಿ ಯೆಹೋವ ದೇವರ ಸೇವಕನಾದ ಮೋಶೆಯಿಂದಲೇ ತಮಗೆ ಸೊತ್ತನ್ನು ತೆಗೆದುಕೊಂಡಿದ್ದಾರೆ,” ಎಂದನು.
8ಆ ಮನುಷ್ಯರು ನಾಡನ್ನು ಅಳತೆ ಮಾಡುವುದಕ್ಕಾಗಿ ಹೊರಟು ಹೋಗುವುದಕ್ಕೆ ಮುಂಚೆ ಯೆಹೋಶುವನು ಅವರಿಗೆ, “ನೀವು ಹೋಗಿ ದೇಶವೆಲ್ಲಾ ಸಂಚರಿಸಿ, ಅದನ್ನು ಅಳತೆಮಾಡಿ ನನ್ನ ಬಳಿಗೆ ತೆಗೆದುಕೊಂಡು ಬನ್ನಿರಿ. ನಾನು ಇಲ್ಲಿ ಶೀಲೋವಿನಲ್ಲಿ ಯೆಹೋವ ದೇವರ ಮುಂದೆ ನಿಮಗೆ ಚೀಟುಗಳನ್ನು ಹಾಕುವಂತೆ ನನ್ನ ಬಳಿಗೆ ಬನ್ನಿರಿ,” ಎಂದು ಅಪ್ಪಣೆಕೊಟ್ಟನು.
9ಆ ಮನುಷ್ಯರು ಆ ನಾಡಿಗೆ ಹೋಗಿ, ಅದರ ಪಟ್ಟಣಗಳ ಪ್ರಕಾರ ಏಳು ಪಾಲಾಗಿ ಒಂದು ಗ್ರಂಥದಲ್ಲಿ ಬರೆದುಕೊಂಡು ಶೀಲೋವಿನಲ್ಲಿರುವ ಪಾಳೆಯಕ್ಕೆ ಯೆಹೋಶುವನ ಬಳಿಗೆ ತಿರುಗಿ ಬಂದರು.
10ಆಗ ಯೆಹೋಶುವನು ಅವರಿಗೆ ಶೀಲೋವಿನಲ್ಲಿ ಯೆಹೋವ ದೇವರ ಮುಂದೆ ಚೀಟುಗಳನ್ನು ಹಾಕಿದನು. ಅಲ್ಲಿ ಯೆಹೋಶುವನು ಇಸ್ರಾಯೇಲರಿಗೆ ನಾಡನ್ನು ಅವರ ಗೋತ್ರಗಳ ಪ್ರಕಾರ ಪಾಲುಗಳನ್ನು ಹಂಚಿಕೊಟ್ಟನು. ಬೆನ್ಯಾಮೀನನ ಪಾಲು
11ಬೆನ್ಯಾಮೀನನ ಸಂತತಿಯವರಿಗೆ ಅವರ ಕುಟುಂಬಗಳ ಪ್ರಕಾರ ಅವರ ಗೋತ್ರಕ್ಕೆ ಚೀಟು ಬಿದ್ದಿತು. ಅವರ ಸೊತ್ತು ಯೆಹೂದ ಮತ್ತು ಯೋಸೇಫನ ಗೋತ್ರದವರ ಪ್ರಾಂತಗಳಿಗೆ ನಡುವೆಯಿತ್ತು.
12ಅದರ ಉತ್ತರ ದಿಕ್ಕಿನ ಮೇರೆಯು ಯೊರ್ದನಿನಿಂದ ಹೊರಟು ಯೆರಿಕೋವಿನ ಉತ್ತರದ ಕಡೆಯಿಂದ ಬೆಟ್ಟಗಳಲ್ಲಿ ಪಶ್ಚಿಮದ ಕಡೆಗೆ ಏರಿ ಬೇತಾವೆನ ಮರುಭೂಮಿಗೆ ಮುಗಿಯುವುದು.
13ಆ ಮೇರೆಯು ಅಲ್ಲಿಂದ ಬೇತೇಲೆಂಬ ಲೂಜಿಗೆ ಹಾದು, ಲೂಜಿನ ದಕ್ಷಿಣದ ಕಡೆಗೆ ಹೋಗಿ, ಅಟಾರೋತ್ ಅದ್ದಾರಿನ ಕೆಳಗಿನ ಬೇತ್ ಹೋರೋನಿಗೆ ದಕ್ಷಿಣದಲ್ಲಿರುವ ಬೆಟ್ಟಕ್ಕೆ ಹೋಗುವುದು.
14ಇದಲ್ಲದೆ ಆ ಮೇರೆಯು ದಕ್ಷಿಣ ಎಲ್ಲೆಗೆ ಎದುರಾಗಿರುವ ಬೇತ್ ಹೋರೋನಿಗೆ ಎದುರಾಗಿ ಬೆಟ್ಟವನ್ನು ಹಿಡಿದು, ದಕ್ಷಿಣವಾಗಿ ಸುತ್ತಿಕೊಂಡು ಕಿರ್ಯತ್ ಯಾರೀಮ್ ಎಂಬ ಯೆಹೂದ ಗೋತ್ರದ ಪಟ್ಟಣವಾದ ಕಿರ್ಯತ್ ಬಾಳದ ಬಳಿಗೆ ಹೋಗಿ ಮುಗಿಯುವುದು. ಇದು ಪಶ್ಚಿಮ ಎಲ್ಲೆಯಾಗಿತ್ತು.
15ಆ ದಕ್ಷಿಣ ಎಲ್ಲೆಯೂ ಕಿರ್ಯತ್ ಯಾರೀಮ್ ತುದಿಯಿಂದ ಹೊರಟು, ಪಶ್ಚಿಮಕ್ಕೆ ಹೋಗಿ, ನೆಫ್ತೋಹದ ಜಲಬುಗ್ಗೆಯ ಬಳಿ ಮುಗಿಯುತ್ತದೆ.
16ನೆಫ್ತೋಹ ಬುಗ್ಗೆಯ ಮೇಲೆ ಬೆನ್ ಹಿನ್ನೋಮ್ ತಗ್ಗಿನ ಈಚೆಗೂ ರೆಫಾಯಿಮ್ ತಗ್ಗಿನ ಉತ್ತರದಲ್ಲಿಯೂ ಇರುವ ಬೆಟ್ಟದ ಅಂಚಿಗೆ ಹೋಗಿ, ಅಲ್ಲಿಂದ ದಕ್ಷಿಣದಲ್ಲಿ ಯೆಬೂಸಿಯರ ಮೇರೆಯಾದ ಬೆನ್ ಹಿನ್ನೋಮಿನ ಹಳ್ಳದ ಕಣಿವೆ ಮಾರ್ಗವಾಗಿ ಏನ್ ರೋಗೆಲಿಗೆ ಬರುತ್ತದೆ.
17ಅಲ್ಲಿಂದ ಏನ್ ಷೆಮೆಷ್, ಅಲ್ಲಿಂದ ಅದುಮೀಮ್ ಎಂಬ ದಿಬ್ಬೆಗೆ ಎದುರಾಗಿ ಗೆಲೀಲೋತಿಗೂ, ಅಲ್ಲಿಂದ ರೂಬೇನನ ಪುತ್ರನಾದ ಬೋಹನನ ಕಲ್ಲಿಗೆ ಏರಿಹೋಗಿ,
18ಅಲ್ಲಿಂದ ಬೇತ್ ಅರಾಬಾದ ಎದುರಾಗಿ ಉತ್ತರ ಭಾಗಕ್ಕೆ ಹೊರಟು, ಅರಾಬಾ ತಗ್ಗಿಗೆ ಇಳಿದು ಬರುತ್ತದೆ.
19ಅಲ್ಲಿಂದ ಆ ಮೇರೆ ಬೇತ್ ಹೊಗ್ಲಾಕ್ಕೆ ಉತ್ತರ ಕಡೆಯಾಗಿ ಹೊರಟು, ಯೊರ್ದನ್ ನದಿ ಮುಖ ದ್ವಾರಕ್ಕೆ ಉತ್ತರವಾದ ಲವಣ ಸಮುದ್ರ ಎಂಬ ಲವಣ ಸಮುದ್ರದ ಉತ್ತರ ಮೂಲೆಯಲ್ಲಿ ಮುಗಿಯುತ್ತದೆ. ಇದೇ ದಕ್ಷಿಣ ಭಾಗದ ಮೇರೆ.
20ಪೂರ್ವದಿಕ್ಕಿನಲ್ಲಿ ಯೊರ್ದನ್ ನದಿಯೇ ಅದರ ಮೇರೆಯಾಗಿತ್ತು. ಇದು ಬೆನ್ಯಾಮೀನನ ಗೋತ್ರದವರಿಗೆ ಅವರ ಕುಟುಂಬಗಳ ಪ್ರಕಾರ ಸುತ್ತಲಿರುವ ಮೇರೆಗಳ ಸೊತ್ತಾಗಿತ್ತು.
21ಬೆನ್ಯಾಮೀನನ ಗೋತ್ರಕ್ಕೆ ಅವರ ಕುಟುಂಬಗಳ ಪ್ರಕಾರ ದೊರಕಿರುವ ಪಟ್ಟಣಗಳ ವಿವರ: ಯೆರಿಕೋ, ಬೇತ್ ಹೊಗ್ಲಾ, ಏಮೆಕ್ ಕೆಚ್ಚೀಚ್ ತಗ್ಗು,
22ಬೇತ್ ಅರಾಬಾ, ಚೆಮಾರಯಿಮ್, ಬೇತೇಲ್,
23ಅವ್ವೀಮ್, ಪಾರಾ, ಒಫ್ರಾ,
24ಕೆಫೆರ್ ಅಮ್ಮೋನಿ, ಒಫ್ನೀ, ಗೆಬಾ ಎಂಬ ಹನ್ನೆರಡು ಪಟ್ಟಣಗಳೂ ಅವುಗಳ ಗ್ರಾಮಗಳೂ ಆಗಿರುತ್ತವೆ.
25ಇದಲ್ಲದೆ ಗಿಬ್ಯೋನ್, ರಾಮಾ, ಬೇರೋತ್,
26ಮಿಚ್ಪೆ, ಕೆಫೀರಾ, ಮೋಚಾ,
27ರೆಕೆಮ್, ಇರ್ಪೇಲ್, ತರಲಾ,
28ಚೇಲ, ಎಲೆಫ್, ಯೆಬೂಸಿಯರು ಇದ್ದಂಥ ಯೆರೂಸಲೇಮು ಗಿಬೆಯ, ಕಿರ್ಯತ್ ಎಂಬ ಹದಿನಾಲ್ಕು ಪಟ್ಟಣಗಳೂ, ಅವುಗಳ ಗ್ರಾಮಗಳೂ ಆಗಿರುತ್ತವೆ. ಇವೇ ಬೆನ್ಯಾಮೀನ್ ಗೋತ್ರದವರಿಗೆ ಅವರ ಕುಟುಂಬಗಳ ಪ್ರಕಾರ ದೊರೆತ ಸೊತ್ತು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.