Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೆಹೋಶುವ 12

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಇಸ್ರಾಯೇಲರು ಯೊರ್ದನ್ ನದಿಯ ಆಚೆ ಸೂರ್ಯನು ಉದಯಿಸುವ ದಿಕ್ಕಿನಲ್ಲಿ ಅರ್ನೋನ್ ಕಣಿವೆಯಿಂದ ಹೆರ್ಮೋನ್ ಬೆಟ್ಟದವರೆಗೂ ಅರಾಬಾ ಎಲ್ಲಾ ಪೂರ್ವ ಭಾಗಗಳನ್ನು ಒಳಗೊಂಡಂತೆ ಭೂಪ್ರದೇಶವನ್ನು ಸ್ವಾಧೀನ ಮಾಡಿಸಿಕೊಂಡ ದೇಶಗಳ ಅರಸರು ಯಾರಾರೆಂದರೆ:
2ಅವರಲ್ಲಿ ಮೊದಲನೆಯವನು ಹೆಷ್ಬೋನಿನಲ್ಲಿದ್ದ ಅಮೋರಿಯರ ಅರಸ ಸೀಹೋನ್ ಎಂಬವನು. ಅವನು ಅರ್ನೋನ್ ಕಣಿವೆಯ ಮಧ್ಯಭಾಗದ ದಾರಿಯ ಬಳಿಯಲ್ಲಿ ಇರುವ ಅರೋಯೇರ್ ನಗರದಿಂದ, ಅರ್ಧ ಗಿಲ್ಯಾದಿನಿಂದಲೂ ಅಮ್ಮೋನಿಯರ ಮೇರೆಯಾದ ಯಬ್ಬೋಕ್ ನದಿಯವರೆಗೆ ಆಳುತ್ತಿದ್ದನು.
3ಯೊರ್ದನ್ ನದಿಯ ಪೂರ್ವದಲ್ಲಿ ಕಿನ್ನೆರೆತ್ ಸಮುದ್ರದಿಂದ ಲವಣ ಸಮುದ್ರವೆನಿಸಿಕೊಳ್ಳುವ ಅರಾಬಾ ಸಮುದ್ರದ ಹತ್ತಿರವಿರುವ ಬೇತ್ ಯೆಷೀಮೋತನವರೆಗೂ ದಕ್ಷಿಣದಲ್ಲಿರುವ ಪಿಸ್ಗಾ ಬೆಟ್ಟದ ಬುಡದವರೆಗೂ ಇರುವ ತಗ್ಗಾದ ಪ್ರದೇಶವು ಸಹ ಅವನ ರಾಜ್ಯವಾಗಿತ್ತು.
4ಅಷ್ಟಾರೋತ್ ಮತ್ತು ಎದ್ರೈ ಎಂಬ ಊರುಗಳಲ್ಲಿ ವಾಸಮಾಡಿದ್ದ ರೆಫಾಯರ ವಂಶಸ್ಥನೂ ಬಾಷಾನಿನ ಅರಸನೂ ಆದ ಓಗನು ಎರಡನೆಯವನು.
5ಅವನು ಹೆರ್ಮೋನ್ ಬೆಟ್ಟವನ್ನೂ ಸಲ್ಕಾ ನಗರವನ್ನೂ ಗೆಷೂರಿಯರ ಮತ್ತು ಮಾಕಾತೀಯರ ಮೇರೆಯವರೆಗೂ ಇದ್ದ ಇಡೀ ಬಾಷಾನ್ ನಾಡನ್ನು ಆಳುತ್ತಿದ್ದನು. ಹೆಷ್ಬೋನಿನ ಅರಸನಾದ ಸೀಹೋನನ ಮೇರೆಯವರೆಗಿದ್ದ ಗಿಲ್ಯಾದಿನ ಅರ್ಧ ಪ್ರಾಂತ್ಯದವರೆಗೂ ಅವನು ಆಳಿಕೊಂಡಿದ್ದನು.
6ಯೆಹೋವ ದೇವರ ಸೇವಕನಾದ ಮೋಶೆಯೂ ಇಸ್ರಾಯೇಲರೂ ಅವರನ್ನು ಸೋಲಿಸಿ, ಅವರ ರಾಜ್ಯವನ್ನು ರೂಬೇನ್ಯರಿಗೂ ಗಾದ್ಯರಿಗೂ ಮನಸ್ಸೆ ಕುಲದ ಅರ್ಧ ಗೋತ್ರದವರಿಗೂ ಸೊತ್ತಾಗಿ ಕೊಟ್ಟನು.
7ಯೆಹೋಶುವನು ಇಸ್ರಾಯೇಲರ ಸಮೇತ ಯೊರ್ದನ್ ನದಿಯ ಪಶ್ಚಿಮದಲ್ಲಿ ಲೆಬನೋನ್ ಕಣಿವೆಯಲ್ಲಿದ್ದ ಬಾಲ್ಗಾದಿನಿಂದ ಸೇಯೀರಿನ ದಾರಿಯಲ್ಲಿದ್ದ ಹಾಲಾಕ್ ಪರ್ವತದವರೆಗೂ ವಿಸ್ತರಿಸಿಕೊಂಡಿದ್ದ ಮಲೆನಾಡಿನ ಪ್ರದೇಶದ ಅರಸರನ್ನೂ,
8ಇಳಿಜಾರಿನ ಪ್ರದೇಶ, ಬೆಟ್ಟದ ಪ್ರದೇಶ, ತಪ್ಪಲು ಪ್ರದೇಶ, ಮರುಭೂಮಿ ಹಾಗೂ ದಕ್ಷಿಣ ಪ್ರಾಂತ್ಯ ಇವುಗಳನ್ನು ಆಳುತ್ತಿದ್ದ ಹಿತ್ತಿಯ, ಅಮೋರಿಯ, ಕಾನಾನ್, ಪೆರಿಜೀಯ, ಹಿವ್ವಿಯ ಹಾಗೂ ಯೆಬೂಸಿಯ ಅರಸರನ್ನೂ ಸೋಲಿಸಿ, ಅವರ ನಾಡುಗಳನ್ನು ಇಸ್ರಾಯೇಲ್ ಕುಲಗಳಿಗೆ ಶಾಶ್ವತ ಸೊತ್ತಾಗಿ ಕೊಟ್ಟನು. ಆ ಅರಸರ ಪಟ್ಟಿ ಹೀಗಿದೆ:
9ಯೆರಿಕೋವಿನ ಅರಸನು ಬೇತೇಲ್ ಬಳಿಯಲ್ಲಿರುವ ಆಯಿ ಪಟ್ಟಣದ ಅರಸನು.
10ಯೆರೂಸಲೇಮಿನ ಅರಸನು. ಹೆಬ್ರೋನಿನ ಅರಸನು.
11ಯರ್ಮೂತಿನ ಅರಸನು. ಲಾಕೀಷಿನ ಅರಸನು.
12ಎಗ್ಲೋನಿನ ಅರಸನು. ಗೆಜೆರಿನ ಅರಸನು.
13ದೆಬೀರಿನ ಅರಸನು. ಗೆದೆರಿನ ಅರಸನು.
14ಹೊರ್ಮಾದ ಅರಸನು. ಅರಾದಿನ ಅರಸನು.
15ಲಿಬ್ನದ ಅರಸನು. ಅದುಲ್ಲಾಮಿನ ಅರಸನು.
16ಮಕ್ಕೇದದ ಅರಸನು. ಬೇತೇಲಿನ ಅರಸನು.
17ತಪ್ಪೂಹದ ಅರಸನು. ಹೇಫೆರಿನ ಅರಸನು.
18ಅಫೇಕದ ಅರಸನು. ಲಷ್ಷಾರೋನಿನ ಅರಸನು.
19ಮಾದೋನಿನ ಅರಸನು. ಹಾಚೋರಿನ ಅರಸನು.
20ಶಿಮ್ರೋನ್ ಮೆರೋನಿನ ಅರಸನು. ಅಕ್ಷಾಫಿನ ಅರಸನು.
21ತಾನಕದ ಅರಸನು. ಮೆಗಿದ್ದೋವಿನ ಅರಸನು.
22ಕೆದೆಷಿನ ಅರಸನು. ಕರ್ಮೆಲ್ ಬೆಟ್ಟದ ಯೊಕ್ನೆಯಾಮದ ಅರಸನು.
23ನೆಪೊತ್ ದೋರ್ ಪ್ರಾಂತದ ದೋರಿನ ಅರಸನು. ಗಿಲ್ಗಾಲದಲ್ಲಿಯ ಗೊಯ್ಮದ ಅರಸನು.
24ತಿರ್ಚದ ಅರಸನು. ಹೀಗೆ ಒಟ್ಟು ಮೂವತ್ತೊಂದು ಮಂದಿ ಅರಸರು ಅಪಜಯಗೊಂಡರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.