Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೆಶಾಯ 20

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಅಸ್ಸೀರಿಯದ ಅರಸನಾದ ಸರ್ಗೋನನು ಕಳುಹಿಸಿದ ವರ್ಷದಲ್ಲಿ ಪ್ರಮುಖ ಸೇನಾಪತಿ, ಅಷ್ಡೋದಿಗೆ ಬಂದು ಅದನ್ನು ಮುತ್ತಿಗೆ ಹಾಕಿ ಆಕ್ರಮಿಸಿಕೊಂಡನು.
2ಅದೇ ಸಮಯದಲ್ಲಿ ಯೆಹೋವ ದೇವರು ಆಮೋಚನ ಮಗ ಯೆಶಾಯನಿಗೆ, “ನಿನ್ನ ಸೊಂಟಕ್ಕೆ ಕಟ್ಟಿರುವ ಗೋಣಿತಟ್ಟನ್ನು ಬಿಚ್ಚು. ನಿನ್ನ ಪಾದಗಳಲ್ಲಿರುವ ಕೆರಗಳನ್ನು ತೆಗೆದಿಡು,” ಎಂದು ಹೇಳಿದರು. ಅವನು ಹಾಗೆ ಮಾಡಿ, ಬೆತ್ತಲೆಯಾಗಿ ಬರಿಗಾಲಿನಲ್ಲೇ ತಿರುಗಾಡುತ್ತಿದ್ದನು.
3ಆಗ ಯೆಹೋವ ದೇವರು, “ನನ್ನ ಸೇವಕನಾದ ಯೆಶಾಯನು ಈಜಿಪ್ಟ್ ಮತ್ತು ಕೂಷಿಗು, ಗುರುತಾಗಿಯೂ, ಆಶ್ಚರ್ಯವಾಗಿಯೂ ಹೀಗೆ ಮೂರು ವರ್ಷ ಬೆತ್ತಲೆಯಾಗಿ ಕೆರವಿಲ್ಲದೆ ನಡೆದನು.
4ಹಾಗೆಯೇ ಅಸ್ಸೀರಿಯದ ಅರಸನು ಈಜಿಪ್ಟಿನವರನ್ನು ಬಂಧಿಸಿ, ಕೂಷಿನ ಕೈದಿಗಳನ್ನು ಅವರು ದೊಡ್ಡವರಾಗಲೀ, ಸಣ್ಣವರಾಗಲೀ ಬಟ್ಟೆ, ಕೆರಗಳಿಲ್ಲದೆ ಈಜಿಪ್ಟಿನ ಮಾನಭಂಗಕ್ಕೋಸ್ಕರ ಸೆರೆಗೆ ನಡೆಯುವಂತೆ ಮಾಡುವನು.
5ಆಗ ನನ್ನ ಜನರು ಅವನು ನಿರೀಕ್ಷಿಸಿಕೊಂಡಿದ್ದ ಕೂಷಿನ ನಿಮಿತ್ತವಾಗಿಯೂ, ಕೊಚ್ಚಿಕೊಳ್ಳುತ್ತಿದ್ದ ಈಜಿಪ್ಟಿನ ವಿಷಯವಾಗಿಯೂ, ನಿರಾಶರಾಗಿ ನಾಚಿಕೆಪಡುವರು.
6ಆ ದಿನದಲ್ಲಿ ಕರಾವಳಿಯ ನಿವಾಸಿಗಳು, ‘ಇಗೋ, ಅಸ್ಸೀರಿಯದ ಅರಸರಿಂದ ಬಿಡುಗಡೆಯಾಗಬೇಕೆಂದು ನಾವು ಯಾರನ್ನು ಶರಣಾಗತರಾಗಿ ಆಶ್ರಯಿಸಿ, ನಿರೀಕ್ಷಿಸಿದ್ದೆವೋ ಅವರಿಗೆ ಈ ಗತಿ ಬಂತಲ್ಲಾ ಮತ್ತು ನಾವು ತಪ್ಪಿಸಿಕೊಳ್ಳುವುದು ಹೇಗೆ?’ ಎಂದುಕೊಳ್ಳುವರು.”
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.