Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಹೋಶೇಯ 10

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಇಸ್ರಾಯೇಲು ಹರಡುವ ದ್ರಾಕ್ಷಿಬಳ್ಳಿಯಾಗಿದೆ, ಅವನು ತನಗಾಗಿ ಫಲಫಲಿಸುತ್ತಾನೆ. ತನ್ನ ಬಹಳ ಫಲದ ಪ್ರಕಾರವಾಗಿ ಅವನು ಬಲಿಪೀಠಗಳನ್ನೂ ಹೆಚ್ಚಿಸಿದ್ದಾನೆ. ತನ್ನ ದೇಶದ ಅಭಿವೃದ್ಧಿಯ ಪ್ರಕಾರ ಅಂದವಾದ ವಿಗ್ರಹಗಳನ್ನು ಮಾಡಿದ್ದಾನೆ.
2ಅವರ ಹೃದಯವು ವಂಚಕವಾದದ್ದು. ಈಗ ಅವರು ಅಪರಾಧಗಳನ್ನು ಹೊರಬೇಕು. ಯೆಹೋವ ದೇವರು ಅವರ ಬಲಿಪೀಠಗಳನ್ನು ಕೆಡವಿ, ಅವರ ವಿಗ್ರಹಗಳನ್ನು ನಾಶಮಾಡುವರು.
3ಆಗ ಅವರು, “ನಮಗೆ ಅರಸನಿಲ್ಲ, ಏಕೆಂದರೆ ನಾವು ಯೆಹೋವ ದೇವರಲ್ಲಿ ಭಯಭಕ್ತಿ ಇಟ್ಟವರಲ್ಲ. ಅರಸನು ನಮಗಿದ್ದರೂ ಏನು ಮಾಡುವನು?” ಎಂದುಕೊಳ್ಳುತ್ತಾರೆ.
4ಅವರು ಮಾತುಗಳನ್ನಾಡಿ ಒಡಂಬಡಿಕೆಯನ್ನು ಮಾಡುವುದಕ್ಕೆ ಸುಳ್ಳು ಪ್ರಮಾಣವನ್ನು ಮಾಡುತ್ತಾರೆ. ಆದ್ದರಿಂದ ನ್ಯಾಯತೀರ್ಪು ವಿಷದ ಕಳೆಯ ಹಾಗೆ ಹೊಲದ ಸಾಲುಗಳಲ್ಲಿ ಮೊಳೆಯುತ್ತದೆ.
5ಬೇತಾವೆನಿನ ಬಸವ ವಿಗ್ರಹಕ್ಕೆ ಸಮಾರ್ಯದ ನಿವಾಸಿಗಳು ಭಯಪಡುವರು. ಅದರಲ್ಲಿ ಆನಂದಿಸಿದ ಜನರು ಅದಕ್ಕೋಸ್ಕರ ಗೋಳಾಡುವರು. ಅದರ ಯಾಜಕರು ನಡುಗುವರು. ಏಕೆಂದರೆ ಅದರ ವೈಭವವು ಅದರಿಂದ ಕುಂದಿಹೋಯಿತು.
6ಅದು ಸಹ, ಮಹಾರಾಜನಿಗೆ ಕಾಣಿಕೆಯಾಗಿ ಅಸ್ಸೀರಿಯಕ್ಕೆ ಒಯ್ಯಲಾಗುವುದು. ಎಫ್ರಾಯೀಮು ನಾಚಿಕೆಯನ್ನು ಹೊಂದುವುದು. ಇಸ್ರಾಯೇಲ್ ಸಹ ತನ್ನ ಸಲಹೆಯ ಬಗ್ಗೆ ನಾಚಿಕೆಪಡುತ್ತದೆ.
7ಸಮಾರ್ಯ ಹಾಗು ಅದರ ಅರಸನು ನೀರಿನ ಮೇಲಿನ ಕಡ್ಡಿಯ ಹಾಗೆ ಅಳಿದು ಹೋಗುವನು.
8ಇಸ್ರಾಯೇಲಿನ ಪಾಪಕ್ಕೆ ಆಸ್ಪದವಾದ ಆವೆನಿನ ಉನ್ನತ ಪೂಜಾಸ್ಥಳಗಳು ಹಾಳಾಗಿ ಹೋಗುವುವು. ಮುಳ್ಳುಗಿಡಗಳೂ, ಕಳೆಗಳೂ ಬಲಿಪೀಠಗಳ ಮೇಲೆ ಬೆಳೆಯುವುವು. ಜನರು ಬೆಟ್ಟಗಳಿಗೆ, “ನಮ್ಮ ಮೇಲೆ ಬೀಳಿರಿ! ಗುಡ್ಡಗಳಿಗೆ, ನಮ್ಮನ್ನು ಮುಚ್ಚಿಕೊಳ್ಳಿರಿ!” ಎನ್ನುವರು.
9ಇಸ್ರಾಯೇಲೇ ನೀನು ಗಿಬೆಯದಲ್ಲಿದ್ದ ಕಾಲದಿಂದ ನನ್ನ ವಿರುದ್ಧ ಪಾಪ ಮಾಡುತ್ತಲೇ ಬಂದಿರುವೆ. ನಿನ್ನ ಜನರು ಪಾಪದಲ್ಲಿಯೇ ಮುಂದುವರಿಯುತ್ತಿದ್ದಾರೆ. ಗಿಬೆಯದಲ್ಲಿ ಕೆಟ್ಟದ್ದನ್ನು ಮಾಡುವ ಜನರು ಯುದ್ಧಕ್ಕೆ ತುತ್ತಾಗಲಿದ್ದಾರೆ.
10ನಾನು ಅವರನ್ನು ಶಿಕ್ಷಿಸಲು ನನಗೆ ಮನಸ್ಸುಂಟು. ಅವರ ಇಮ್ಮಡಿ ಅಪರಾಧಕ್ಕೆ ತಕ್ಕ ಶಾಸ್ತಿಯಾಗುವುದು, ಆಗ ಇತರ ರಾಷ್ಟ್ರಗಳು ಅವರಿಗೆ ವಿರುದ್ಧವಾಗಿ ಒಂದುಗೂಡುವುವು.
11ಎಫ್ರಾಯೀಮು ಒಂದು ತರಬೇತಿ ಪಡೆದ ಕಡಸಾಗಿದೆ. ಅದು ತುಳಿಯುವುದನ್ನು ಇಷ್ಟಪಡುತ್ತದೆ. ಆದರೆ ನಾನು ಅದರ ಸುಂದರವಾದ ಕುತ್ತಿಗೆಯ ಮೇಲೆ ನೊಗವನ್ನು ಹೊರುತ್ತೇನೆ. ಎಫ್ರಾಯೀಮು ಸವಾರಿ ಮಾಡುವ ಹಾಗೆ ನಾನು ಮಾಡುವೆನು. ಯೆಹೂದ ಉಳುವನು. ಯಾಕೋಬನು ಅವನ ಹೆಂಟೆಗಳನ್ನು ಒಡೆಯುವನು.
12ನಿಮಗಾಗಿ ನೀತಿಯ ಬೀಜವನ್ನು ಬಿತ್ತಿರಿ. ಪ್ರೀತಿಯ ಫಲವನ್ನು ಕೊಯ್ಯಿರಿ. ಹಾಳಾಗಿ ಬೀಳುಬಿದ್ದ ನಿಮ್ಮ ಭೂಮಿಯನ್ನು ಅಗೆಯಿರಿ. ಏಕೆಂದರೆ ಆತನು ಬಂದು ನಿಮ್ಮ ಮೇಲೆ ನೀತಿಯನ್ನು ಸುರಿಸುವವರೆಗೂ ಯೆಹೋವ ದೇವರನ್ನು ಹುಡುಕುವ ಸಮಯ ಇದೇ.
13ಆದರೆ ನೀವು ದುಷ್ಟತ್ವವನ್ನು ಬಿತ್ತಿ, ಅನ್ಯಾಯವನ್ನು ಕೊಯ್ದಿರಿ, ವಂಚನೆಯ ಫಲವನ್ನು ತಿಂದಿದ್ದೀರಿ. ಏಕೆಂದರೆ ನೀವು ನಿಮ್ಮ ಸ್ವಂತ ಬಲದಲ್ಲಿ ನಿಮ್ಮ ಶೂರರಲ್ಲಿಯೂ ಭರವಸೆಯಿಟ್ಟಿದ್ದೀರಿ.
14ಆದ್ದರಿಂದ ನಿನ್ನ ಜನರಲ್ಲಿ ಗಲಭೆ ಉಂಟಾಗುವುದು. ಶಲ್ಮಾನ ರಾಜನು ಬೇತ್ ಅರ್ಬೇಲನ್ನು ಯುದ್ಧದ ದಿನದಲ್ಲಿ ನಾಶಮಾಡಿದ ಪ್ರಕಾರ, ನಿನ್ನ ಕೋಟೆಗಳೆಲ್ಲಾ ನಾಶವಾಗುವವು. ತಾಯಿ, ತನ್ನ ಮಕ್ಕಳ ಸಹಿತ ಬಂಡೆಗೆ ಅಪ್ಪಳಿಸಿದ
15ಹಾಗೆಯೇ, ಬಹಳ ದುಷ್ಟತ್ವದ ನಿಮಿತ್ತ ಬೇತೇಲಿಗೆ ಸಂಭವಿಸುವುದು. ಬೆಳಗಿನ ಜಾವದಲ್ಲಿ ಇಸ್ರಾಯೇಲಿನ ಅರಸನು ಸಂಪೂರ್ಣವಾಗಿ ನಾಶವಾಗುವನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.