Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಪೂರ್ವಕಾಲ ವೃತ್ತಾಂತ 27

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಯೋತಾಮನು ಆಳಲು ಆರಂಭಿಸಿದಾಗ ಇಪ್ಪತ್ತೈದು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಹದಿನಾರು ವರ್ಷ ಆಳಿದನು. ಚಾದೋಕನ ಮಗಳಾದ ಯೆರೂಷ ಅವನ ತಾಯಿ.
2ಅವನು ತನ್ನ ತಂದೆಯಾದ ಉಜ್ಜೀಯನಂತೆ ಯೆಹೋವ ದೇವರ ದೃಷ್ಟಿಯಲ್ಲಿ ಒಳ್ಳೆಯದನ್ನು ಮಾಡಿದನು. ಆದರೆ ಅವನ ತಂದೆಯಂತೆ ಯೆಹೋವ ದೇವರ ಆಲಯದಲ್ಲಿ ಪ್ರವೇಶಿಸಲಿಲ್ಲ. ಆಗ ಜನರು ಇನ್ನೂ ಕೆಟ್ಟದ್ದನ್ನು ಮಾಡುತ್ತಾ ಇದ್ದರು.
3ಅವನು ಯೆಹೋವ ದೇವರ ಆಲಯದ ಮೇಲಿನ ಬಾಗಿಲನ್ನು ಕಟ್ಟಿಸಿ, ಓಫೇಲ್ ಗೋಡೆಯನ್ನು ಎತ್ತರವಾಗಿ ಕಟ್ಟಿಸಿದನು.
4ಇದಲ್ಲದೆ ಯೆಹೂದ ಪರ್ವತ ಪ್ರದೇಶದಲ್ಲಿ ಪಟ್ಟಣಗಳನ್ನೂ ಕಾಡುಗಳ ಪ್ರದೇಶದಲ್ಲಿ ಕೋಟೆಗಳನ್ನೂ ಬುರುಜುಗಳನ್ನೂ ಕಟ್ಟಿಸಿದನು.
5ಯೋತಾಮನು ಅಮ್ಮೋನ್ಯರ ಅರಸನ ಸಂಗಡ ಯುದ್ಧಮಾಡಿ ಅವನನ್ನು ಜಯಿಸಿದನು. ಆದ್ದರಿಂದ ಅಮ್ಮೋನಿಯರು ಅದೇ ವರ್ಷದಲ್ಲಿ 3,400 ಕಿಲೋಗ್ರಾಂ ಬೆಳ್ಳಿ, 1,600 ಮೆಟ್ರಿಕ್ ಟನ್ ಗೋಧಿ, 1,350 ಮೆಟ್ರಿಕ್ ಟನ್ ಜವೆಗೋಧಿಯನ್ನೂ ಅವನಿಗೆ ಕೊಟ್ಟರು. ಅಮ್ಮೋನಿಯರು ಎರಡನೆಯ ವರ್ಷದಲ್ಲಿಯೂ, ಮೂರನೆಯ ವರ್ಷದಲ್ಲಿಯೂ ಅದೇ ಪ್ರಕಾರ ಅವನಿಗೆ ಕೊಟ್ಟರು.
6ಹೀಗೆ ಯೋತಾಮನು ತನ್ನ ದೇವರಾದ ಯೆಹೋವ ದೇವರ ಮುಂದೆ ತನ್ನ ಮಾರ್ಗಗಳನ್ನು ಸರಿಪಡಿಸಿಕೊಂಡದ್ದರಿಂದ ಅವನು ಬಲಗೊಂಡನು.
7ಯೋತಾಮನ ಇತರ ಕ್ರಿಯೆಗಳೂ, ಅವನು ಮಾಡಿದ ಯುದ್ಧಗಳೂ, ಅವನ ಮಾರ್ಗಗಳೂ, ಅವು ಇಸ್ರಾಯೇಲರ ಮತ್ತು ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
8ಅವನು ಆಳಲು ಆರಂಭಿಸಿದಾಗ ಇಪ್ಪತ್ತೈದು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಹದಿನಾರು ವರ್ಷ ಆಳಿದನು.
9ಯೋತಾಮನು ಮೃತನಾಗಿ ತನ್ನ ಪಿತೃಗಳ ಬಳಿಗೆ ಸೇರಿದನು. ಅವನ ಶವವನ್ನು ದಾವೀದನ ಪಟ್ಟಣದಲ್ಲಿ ಸಮಾಧಿಮಾಡಿದರು. ಅವನ ಮಗ ಆಹಾಜನು ಅವನಿಗೆ ಬದಲಾಗಿ ಅರಸನಾದನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.