Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಪೂರ್ವಕಾಲ ವೃತ್ತಾಂತ 25

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಇದಲ್ಲದೆ ದಾವೀದನೂ, ಸೈನ್ಯಾಧಿಪತಿಗಳೂ ಆಸಾಫ್, ಹೇಮಾನ್, ಯೆದುತೂನ್; ಇವರ ಪುತ್ರರಲ್ಲಿ ಕಿನ್ನರಿಗಳಿಂದಲೂ, ವೀಣೆಗಳಿಂದಲೂ, ತಾಳಗಳಿಂದಲೂ ಪ್ರವಾದಿಸಲು ತಕ್ಕವರನ್ನು ಸೇವೆಗೆ ಪ್ರತ್ಯೇಕಿಸಿದರು. ಕೆಲಸದವರ ಲೆಕ್ಕವು ಅವರ ಸೇವೆಯ ಪ್ರಕಾರವಾಗಿತ್ತು.
2ಅವರು ಯಾರೆಂದರೆ: ಆಸಾಫನ ಪುತ್ರರಲ್ಲಿ ಜಕ್ಕೂರ್, ಯೋಸೇಫ, ನೆತನ್ಯ, ಅಶರೇಲ; ಇವರು ಆಸಾಫನ ಕೈಕೆಳಗೆ ಪ್ರವಾದಿಸಿದರು. ಇವರು ಅರಸನ ಮೇಲ್ವಿಚಾರಣೆಯಲ್ಲಿದ್ದರು.
3ಯೆದುತೂನನ ಪುತ್ರರಲ್ಲಿ ಗೆದಲ್ಯ, ಚೆರೀ, ಯೆಶಾಯ, ಶಿಮ್ಮೀ, ಹಷಬ್ಯ, ಮತ್ತಿತ್ಯ. ಈ ಆರು ಮಂದಿಯು ಯೆದುತೂನನ ಪುತ್ರರು. ತಮ್ಮ ತಂದೆ ಯೆದುತೂನನ ಕೈಕೆಳಗೆ ಕಿನ್ನರಿಗಳನ್ನು ಬಾರಿಸಿ, ಯೆಹೋವ ದೇವರನ್ನು ಕೊಂಡಾಡಿ, ಸ್ತುತಿಸಿ ಪ್ರವಾದಿಸುತ್ತಿದ್ದರು.
4ಹೇಮಾನನ ಪುತ್ರರಲ್ಲಿ ಬುಕ್ಕೀಯ, ಮತ್ತನ್ಯ, ಉಜ್ಜೀಯೇಲ್, ಶೆಬೂಯೇಲ್, ಯೆರೀಮೋತ್, ಹನನ್ಯ, ಹನಾನೀ, ಎಲೀಯಾತ್, ಗಿದ್ದಲ್ತಿ, ರೋಮಮ್ತಿಯೆಜೆರ್, ಯೊಷ್ಬೆಕಾಷ, ಮಲ್ಲೋತಿ, ಹೋತೀರ್, ಮಹಜೀಯೋತ್.
5ಇವರೆಲ್ಲರು ದೇವರ ಕಾರ್ಯಗಳಲ್ಲಿ ಕೊಂಬು ಊದುವ ಅರಸನ ದರ್ಶಿಯಾದ ಹೇಮಾನನ ಪುತ್ರರು. ದೇವರು ಹೇಮಾನನಿಗೆ ಹದಿನಾಲ್ಕು ಮಂದಿ ಪುತ್ರರನ್ನೂ, ಮೂರು ಮಂದಿ ಪುತ್ರಿಯರನ್ನೂ ಕೊಟ್ಟಿದ್ದರು.
6ಯೆಹೋವ ದೇವರ ಆಲಯದಲ್ಲಿ ಆರಾಧನೆ ನಡೆಯುತ್ತಿರುವಾಗ, ಇವರೆಲ್ಲರೂ ತಮ್ಮ ತಂದೆಯ ನೇತೃತ್ವದಲ್ಲಿ ತಾಳ, ಸ್ವರಮಂಡಲ, ಕಿನ್ನರಿ ಇವುಗಳಿಂದ ಗಾಯನ ಮಾಡುತ್ತಿದ್ದರು. ಹೀಗೆ ಆಸಾಫ್, ಯೆದುತೂನ್, ಹೇಮಾನರು ಅರಸನ ಸೇವೆಯಲ್ಲಿದ್ದರು.
7ಹೀಗೆಯೇ ಅವರ ಲೆಕ್ಕವೂ, ಯೆಹೋವ ದೇವರ ಹಾಡುಗಳಲ್ಲಿ ತರಬೇತುಪಡೆದ ಸಮಸ್ತ ಪ್ರವೀಣರ ಲೆಕ್ಕ, ತಮ್ಮ ಸಹೋದರರ ಸಹಿತವಾಗಿ ಇನ್ನೂರ ಎಂಬತ್ತೆಂಟು ಮಂದಿಯಾಗಿದ್ದರು.
8ಇದಲ್ಲದೆ ಹಿರಿಯರು ಕಿರಿಯರ ಹಾಗೆಯೂ, ಶಿಷ್ಯನು ಬೋಧಕನ ಹಾಗೆಯೂ ವರ್ಗಕ್ಕೆ ಎದುರಾಗಿ ವರ್ಗದವರು ಚೀಟುಗಳನ್ನು ಹಾಕಿದರು.
9ಆಸಾಫನಿಗೋಸ್ಕರ ಮೊದಲನೆಯ ಚೀಟು ಯೋಸೇಫನಿಗೆ ಬಂತು. ಎರಡನೆಯದು ಗೆದಲ್ಯನಿಗೆ; ಅವನೂ, ಅವನ ಸಹೋದರರೂ, ಅವನ ಪುತ್ರರೂ ಹನ್ನೆರಡು ಮಂದಿ.
10ಮೂರನೆಯದು ಜಕ್ಕೂರನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ;
11ನಾಲ್ಕನೆಯದು ಇಚ್ರೀಗೆ; ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
12ಐದನೆಯದು ನೆತನ್ಯನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
13ಆರನೆಯದು ಬುಕ್ಕೀಯನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
14ಏಳನೆಯದು ಯೆಸರೇಲನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
15ಎಂಟನೆಯದು ಯೆಶಾಯನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
16ಒಂಬತ್ತನೆಯವನು ಮತ್ತನ್ಯ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
17ಹತ್ತನೆಯದು ಶಿಮ್ಮಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
18ಹನ್ನೊಂದನೆಯದು ಅಜರಯೇಲನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
19ಹನ್ನೆರಡನೆಯದು ಹಷಬ್ಯನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
20ಹದಿಮೂರನೆಯದು ಶುಬಯೇಲನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
21ಹದಿನಾಲ್ಕನೆಯವನು ಮತ್ತಿತ್ಯ; ಇವನೂ, ಇವನ ಸಹೋದರರೂ, ಮಕ್ಕಳೂ ಕೂಡಿ ಹನ್ನೆರಡು ಮಂದಿ.
22ಹದಿನೈದನೆಯದು ಯೆರೆಮೋತನಿಗೆ; ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
23ಹದಿನಾರನೆಯದು ಹನನ್ಯನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
24ಹದಿನೇಳನೆಯದು ಯೊಷ್ಬೆಕಾಷನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
25ಹದಿನೆಂಟನೆಯದು ಹನಾನೀಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
26ಹತ್ತೊಂಬತ್ತನೆಯದು ಮಲ್ಲೋತಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
27ಇಪ್ಪತ್ತನೆಯದು ಎಲಿಯಾತನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
28ಇಪ್ಪತ್ತೊಂದನೆಯದು ಹೋತೀರನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
29ಇಪ್ಪತ್ತೆರಡನೆಯದು ಗಿದ್ದಲ್ತಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
30ಇಪ್ಪತ್ತಮೂರನೆಯದು ಮಹಜೀಯೋತನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
31ಇಪ್ಪತ್ತನಾಲ್ಕನೆಯದು ರೋಮಮ್ತಿಯೆಜೆರನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.