Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಪೂರ್ವಕಾಲ ವೃತ್ತಾಂತ 24

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಆರೋನನ ಪುತ್ರರಲ್ಲಿ ವರ್ಗಗಳಾಗಿ ವಿಭಾಗ ಆದವರು ಇವರೇ. ಆರೋನನ ಪುತ್ರರು: ನಾದಾಬ್, ಅಬೀಹೂ, ಎಲಿಯಾಜರ್ ಮತ್ತು ಈತಾಮಾರ್.
2ಆದರೆ ನಾದಾಬ್ ಮತ್ತು ಅಬೀಹೂ ತಮ್ಮ ತಂದೆಗಿಂತ ಮುಂಚೆ ಸತ್ತು ಮಕ್ಕಳಿಲ್ಲದೆ ಇದ್ದುದರಿಂದ ಎಲಿಯಾಜರನೂ, ಈತಾಮಾರನೂ ಯಾಜಕ ಸೇವೆ ಮಾಡಿದರು.
3ಆದ್ದರಿಂದ ದಾವೀದನು ಎಲಿಯಾಜರನ ಮಕ್ಕಳಲ್ಲಿ ಚಾದೋಕನಿಗೂ, ಈತಾಮಾರನ ಮಕ್ಕಳಲ್ಲಿ ಅಹೀಮೆಲೆಕನಿಗೂ ಅವರ ಸೇವೆಯಲ್ಲಿರುವ ಪದ್ದತಿಗಳ ಪ್ರಕಾರ ವರ್ಗಗಳನ್ನು ವಿಭಾಗಿಸಿದನು.
4ಈತಾಮಾರನ ಪುತ್ರರಿಗಿಂತ ಎಲಿಯಾಜರನ ಪುತ್ರರಲ್ಲಿ ಮುಖ್ಯಸ್ಥರು ಹೆಚ್ಚಾಗಿದ್ದುದರಿಂದ, ಅವರು ಸಹ ಹೀಗೆಯೇ ವಿಭಾಗಿಸಿದ್ದರು. ಎಲಿಯಾಜರನ ಪುತ್ರರಲ್ಲಿ ತಮ್ಮ ಪಿತೃಗಳ ಮನೆಯ ಪ್ರಕಾರ ಹದಿನಾರು ಮಂದಿ ಮುಖ್ಯಸ್ಥರು. ಈತಾಮಾರನ ಪುತ್ರರಲ್ಲಿ ತಮ್ಮ ಪಿತೃಗಳ ಮನೆಯ ಪ್ರಕಾರ ಎಂಟು ಮಂದಿ ಮುಖ್ಯಸ್ಥರು.
5ಇವರು ಸಹ ಚೀಟುಹಾಕುವ ಮೂಲಕ ನಿಷ್ಪಕ್ಷಪಾತವಾಗಿ ವಿಭಾಗವಾಗಿದ್ದರು. ಏಕೆಂದರೆ ಪರಿಶುದ್ಧ ಸ್ಥಾನದ ಪ್ರಧಾನರೂ, ದೇವರ ಪ್ರಧಾನರೂ ಎಲಿಯಾಜರನ ಪುತ್ರರೂ, ಈತಾಮಾರನ ಪುತ್ರರೂ ಇದ್ದರು.
6ಇದಲ್ಲದೆ ಲೇವಿಯರಲ್ಲಿ ಒಬ್ಬನಾದಂಥ ನೆತನೆಯೇಲ್ ಇವನ ಮಗ ಲೇಖಕನಾದ ಶೆಮಾಯನು ಅರಸನ ಮುಂದೆಯೂ; ಪ್ರಧಾನರು, ಯಾಜಕನಾದ ಚಾದೋಕನು, ಅಬಿಯಾತರನ ಮಗ ಅಹೀಮೆಲೆಕನು, ಯಾಜಕರ ಲೇವಿಯರ ಪಿತೃಗಳ ಮುಖ್ಯಸ್ಥರ ಮುಂದೆಯೂ ಅವರ ಹೆಸರುಗಳನ್ನು ಬರೆದನು. ಎಲಿಯಾಜರನಿಗೋಸ್ಕರ ಒಂದು ಶ್ರೇಷ್ಠ ಮನೆ ತೆಗೆದುಕೊಳ್ಳಲಾಯಿತು. ಅದರಂತೆಯೇ, ಈತಾಮಾರನಿಗೋಸ್ಕರವೂ ಒಂದು ತೆಗೆದುಕೊಳ್ಳಲಾಯಿತು.
7ಮೊದಲನೆಯ ಚೀಟು ಯೆಹೋಯಾರೀಬನಿಗೆ ಬಿದ್ದಿತು; ಎರಡನೆಯದು ಯೆದಾಯನಿಗೆ,
8ಮೂರನೆಯದು ಹಾರಿಮನಿಗೆ; ನಾಲ್ಕನೆಯದು ಸೆಯೋರೀಮನಿಗೆ;
9ಐದನೆಯದು ಮಲ್ಕೀಯನಿಗೆ; ಆರನೆಯದು ಮಿಯಾಮಿನನಿಗೆ;
10ಏಳನೆಯದು ಹಕ್ಕೋಚನಿಗೆ; ಎಂಟನೆಯದು ಅಬೀಯನಿಗೆ;
11ಒಂಬತ್ತನೆಯದು ಯೆಷೂವನಿಗೆ; ಹತ್ತನೆಯದು ಶೇಕನ್ಯನಿಗೆ;
12ಹನ್ನೊಂದನೆಯದು ಎಲ್ಯಾಷೀಬನಿಗೆ; ಹನ್ನೆರಡನೆಯದು ಯಾಕೀಮನಿಗೆ,
13ಹದಿಮೂರನೆಯದು ಹುಪ್ಪನಿಗೆ; ಹದಿನಾಲ್ಕನೆಯದು ಯೆಷೆಬಾಬನಿಗೆ;
14ಹದಿನೈದನೆಯದು ಬಿಲ್ಗನಿಗೆ; ಹದಿನಾರನೆಯದು ಇಮ್ಮೇರನಿಗೆ;
15ಹದಿನೇಳನೆಯದು ಹೇಜೀರನಿಗೆ; ಹದಿನೆಂಟನೆಯದು ಹಪಿಚ್ಚೇಚನಿಗೆ;
16ಹತ್ತೊಂಬತ್ತನೆಯದು ಪೆತಹ್ಯನಿಗೆ; ಇಪ್ಪತ್ತನೆಯದು ಯೆಹೆಜ್ಕೇಲನಿಗೆ;
17ಇಪ್ಪತ್ತೊಂದನೆಯದು ಯಾಕೀನನಿಗೆ; ಇಪ್ಪತ್ತೆರಡನೆಯದು ಗಾಮೂಲನಿಗೆ;
18ಇಪ್ಪತ್ಮೂರನೆಯದು ದೆಲಾಯನಿಗೆ; ಇಪ್ಪತ್ನಾಲ್ಕನೆಯದು ಮಾಜ್ಯನಿಗೆ.
19ಇವೇ ಇಸ್ರಾಯೇಲಿನ ದೇವರಾದ ಯೆಹೋವ ದೇವರು ತಮ್ಮ ತಂದೆ ಆರೋನನಿಗೆ ಆಜ್ಞಾಪಿಸಿದ ಹಾಗೆ, ಅವನ ಕೈಕೆಳಗೆ ತಮ್ಮ ತಮ್ಮ ಕಟ್ಟಳೆಗಳ ಪ್ರಕಾರ, ಯೆಹೋವ ದೇವರ ಮನೆಯಲ್ಲಿ ಸೇವೆ ಮಾಡುವುದಕ್ಕೆ ಬರಬೇಕಾದ ಅವರ ನಿಯಮಗಳು. ಉಳಿದ ಲೇವಿಯರು
20ಲೇವಿಯ ವಂಶಜರಲ್ಲಿ ಉಳಿದವರು ಯಾರೆಂದರೆ: ಅಮ್ರಾಮನ ಕುಮಾರರಲ್ಲಿ ಶೂಬಾಯೇಲನು; ಶೂಬಾಯೇಲನ ಪುತ್ರರಲ್ಲಿ ಯೆಹ್ದೆಯಾಹನು.
21ರೆಹಬ್ಯನನ್ನು ಕುರಿತು: ರೆಹಬ್ಯನ ಪುತ್ರರಲ್ಲಿ ಇಷೀಯನು ಮೊದಲನೆಯವನು.
22ಇಚ್ಹಾರರಲ್ಲಿ ಶೆಲೋಮೋತನು ಮೊದಲನೆಯವನು. ಶೆಲೋಮೋತನ ಪುತ್ರರಲ್ಲಿ ಯಹತನು.
23ಹೆಬ್ರೋನನ ಪುತ್ರರಲ್ಲಿ ಯೆರೀಯನು ಮೊದಲನೆಯವನು; ಎರಡನೆಯವನು ಅಮರ್ಯ; ಮೂರನೆಯವನು ಯಹಜಿಯೇಲ್; ನಾಲ್ಕನೆಯವನು ಯೆಕಮ್ಮಾಮ್.
24ಉಜ್ಜೀಯೇಲನ ಕುಮಾರರಲ್ಲಿ ಮೀಕನು; ಮೀಕನ ಪುತ್ರರಲ್ಲಿ ಶಾಮೀರನು.
25ಮೀಕನ ಸಹೋದರನು ಇಷೀಯನು; ಇಷೀಯನ ಪುತ್ರರಲ್ಲಿ ಜೆಕರ್ಯ.
26ಮೆರಾರೀಯ ಪುತ್ರರಲ್ಲಿ ಮಹ್ಲೀ, ಮೂಷೀ; ಯಾಜ್ಯನ ಮಗನು ಬೆನೋನು.
27ಮೆರಾರೀಯ ಪುತ್ರರಲ್ಲಿ ಯಾಜ್ಯನಿಗೆ ಬೆನೋ, ಶೋಹಮ್, ಜಕ್ಕೂರ್, ಇಬ್ರೀ ಎಂಬ ಪುತ್ರರಿದ್ದರು.
28ಮಹ್ಲೀಯನಿಗೆ ಎಲಿಯಾಜರನು ಹುಟ್ಟಿದನು; ಎಲಿಯಾಜರನಿಗೆ ಪುತ್ರರಿರಲಿಲ್ಲ.
29ಕೀಷನಿಂದ ಯೆರಹ್ಮೇಲನು.
30ಮೂಷೀಯ ಪುತ್ರರು: ಮಹ್ಲೀ, ಏದೆರ್, ಯೆರೀಮೋತ್. ಇವರು ತಮ್ಮ ಕುಟುಂಬಗಳ ಪ್ರಕಾರ ಲೇವಿಯರ ಪುತ್ರರಾಗಿದ್ದರು.
31ಇವರು ಹಾಗೆಯೇ ಅರಸನಾದ ದಾವೀದನ ಸಮ್ಮುಖದಲ್ಲಿಯೂ, ಚಾದೋಕನು, ಅಹೀಮೆಲೆಕನು, ಯಾಜಕರ ಮತ್ತು ಲೇವಿಯರ ಪಿತೃಗಳ ಮುಖ್ಯಸ್ಥರು, ಇವರ ಸಮ್ಮುಖದಲ್ಲಿಯೂ, ಆರೋನನ ಪುತ್ರರಾದ ತಮ್ಮ ಸಹೋದರರಿಗೆ ಎದುರಾಗಿ ಮುಖ್ಯಸ್ಥರಾದ ಪಿತೃಗಳು ತಮ್ಮ ಕಿರಿಯ ಸಹೋದರರಿಗೆದುರಾಗಿ ಚೀಟುಗಳನ್ನು ಹಾಕಿದರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.