Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಕೀರ್ತನೆಗಳು 94

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಯೆಹೋವ ದೇವರೇ, ನೀವು ಪ್ರತೀಕಾರ ಸಲ್ಲಿಸುವ ದೇವರಾಗಿದ್ದೀರಿ. ಮುಯ್ಯಿ ತೀರಿಸುವವರು ನೀವೇ; ದೇವರೇ, ನ್ಯಾಯ ತೀರಿಸುವಂತೆ ನಿಮ್ಮನ್ನು ಪ್ರಕಟಿಸಿಕೊಳ್ಳಿರಿ.
2ಭೂಲೋಕದ ನ್ಯಾಯಾಧಿಪತಿಯೇ, ಗರ್ವಿಷ್ಠರಿಗೆ ತಕ್ಕ ಪ್ರತೀಕಾರವನ್ನು ಸಲ್ಲಿಸ ಬನ್ನಿರಿ.
3ಯೆಹೋವ ದೇವರೇ, ಎಲ್ಲಿಯವರೆಗೆ? ದುಷ್ಟರು ಎಷ್ಟರವರೆಗೆ ಹಿಗ್ಗುತ್ತಿರಬೇಕು?
4ಕೆಡುಕರು ಉಬ್ಬಿಕೊಂಡು ಮಾತನಾಡುತ್ತಾರೆ. ಕೇಡು ಮಾಡುವವರೆಲ್ಲರೂ ಕೊಚ್ಚಿಕೊಳ್ಳುತ್ತಾರೆ.
5ಯೆಹೋವ ದೇವರೇ, ನಿಮ್ಮ ಜನರನ್ನು ಅವರು ಕುಗ್ಗಿಸುತ್ತಾರೆ. ನಿಮ್ಮ ಬಾಧ್ಯತೆಯನ್ನು ಬಾಧಿಸುತ್ತಾರೆ.
6ವಿಧವೆಯನ್ನೂ ಪರದೇಶಸ್ಥನನ್ನೂ ಅವರು ಹತ್ಯಮಾಡುತ್ತಾರೆ. ದಿಕ್ಕಿಲ್ಲದವರನ್ನು ಹತಮಾಡುತ್ತಾರೆ.
7“ಯೆಹೋವ ದೇವರು ನೋಡುವುದಿಲ್ಲ, ಯಾಕೋಬನ ದೇವರು ಗ್ರಹಿಸುವುದಿಲ್ಲ,” ಎಂದು ಅವರು ಹೇಳುತ್ತಾರೆ.
8ಜನರಲ್ಲಿ ಬುದ್ಧಿಹೀನರೇ, ನೀವು ಗ್ರಹಿಸಿರಿ. ಮೂರ್ಖರೇ, ಯಾವಾಗ ಬುದ್ಧಿವಂತರಾಗುವಿರಿ?
9ಕಿವಿಯನ್ನು ನಿರ್ಮಿಸಿದ ದೇವರು ಕೇಳದಿರುವರೇ? ಕಣ್ಣನ್ನು ರೂಪಿಸಿದವರು ನೋಡುವುದಿಲ್ಲವೇ?
10ರಾಷ್ಟ್ರಗಳಿಗೆ ಶಿಕ್ಷಣ ಕೊಡುವ ದೇವರು ಶಿಕ್ಷಿಸುವುದಿಲ್ಲವೋ? ಮಾನವನಿಗೆ ಕಲಿಸುವ ದೇವರಲ್ಲಿ ಜ್ಞಾನದ ಕೊರತೆಯಿದೆಯೋ?
11ಮನುಷ್ಯನ ಯೋಚನೆಗಳು ವ್ಯರ್ಥವಾದವುಗಳೆಂದು ಯೆಹೋವ ದೇವರು ತಿಳಿದುಕೊಳ್ಳುತ್ತಾರೆ.
12ಯೆಹೋವ ದೇವರೇ, ನೀವು ಯಾರನ್ನು ಶಿಕ್ಷಿಸುವಿರೋ ಅಂಥವರು ಧನ್ಯರು. ನಿಮ್ಮ ನಿಯಮದಿಂದ ಯಾರಿಗೆ ಕಲಿಸಿಕೊಡುವಿರೋ ಅವರು ಧನ್ಯರು.
13ದುಷ್ಟನಿಗಾಗಿ ಕುಣಿಯು ಅಗಿಯುವವರೆಗೆ ಅಂಥವನಿಗೆ ವಿಶ್ರಾಂತಿಯನ್ನು ಕೊಡುವಿರಿ.
14ಯೆಹೋವ ದೇವರು ತಮ್ಮ ಜನರನ್ನು ತಿರಸ್ಕರಿಸುವುದಿಲ್ಲ. ದೇವರು ತಮ್ಮ ಬಾಧ್ಯತೆಯಾಗಿರುವವರನ್ನು ಎಂದೂ ಮರೆಯುವುದಿಲ್ಲ.
15ನ್ಯಾಯ ನಿಯಮವು ನೀತಿಯ ಮೇಲೆ ಅವಲಂಬಿಸಿರುವುದು; ಯಥಾರ್ಥ ಹೃದಯದವರೆಲ್ಲರೂ ಅದನ್ನು ಹಿಂಬಾಲಿಸುವರು.
16ನನಗೋಸ್ಕರ ದುರ್ಮಾರ್ಗಿಗಳಿಗೆ ವಿರೋಧವಾಗಿ ಏಳುವವನ್ಯಾರು? ಅಪರಾಧ ಮಾಡುವವರಿಗೆ ವಿರೋಧವಾಗಿ ನನಗೋಸ್ಕರ ನಿಂತು ಕೊಳ್ಳುವವನ್ಯಾರು?
17ಯೆಹೋವ ದೇವರು ನನಗೆ ಸಹಾಯ ಕೊಡದಿದ್ದರೆ, ನಾನು ಬೇಗನೇ ಮರಣದ ಮೌನದಲ್ಲಿ ವಾಸಿಸುತ್ತಿದ್ದೆನು.
18“ನನ್ನ ಕಾಲು ಜಾರುತ್ತಿದೆ,” ಎಂದು ನಾನು ಹೇಳುತ್ತಿರುವಾಗಲೇ, ಯೆಹೋವ ದೇವರೇ, ನಿಮ್ಮ ಪ್ರೀತಿಯು ನನ್ನನ್ನು ಎತ್ತಿ ಹಿಡಿಯಿತು.
19ನನ್ನ ಚಿಂತೆಗಳು ನನ್ನೊಳಗೆ ಹೆಚ್ಚುತ್ತಿರುವಾಗ, ನಿಮ್ಮ ಸಂತೈಸುವಿಕೆಯು ನನ್ನ ಮನಸ್ಸನ್ನು ಆನಂದಪಡಿಸುತ್ತದೆ.
20ತೀರ್ಪುಗಳಿಂದ ಕೇಡನ್ನು ಕಲ್ಪಿಸುವ ಅಪರಾಧದ ನ್ಯಾಯಾಸನವು ನಿಮ್ಮ ಸಂಗಡ ಅನ್ಯೋನ್ಯವಾಗಿರುವುದೋ?
21ನೀತಿವಂತನ ವಿರೋಧವಾಗಿ ಅವರು ಕೂಡಿಕೊಳ್ಳುತ್ತಾರೆ; ಅವರ ನಿರಪರಾಧಿಗಳನ್ನು ಮರಣಕ್ಕೆ ಒಪ್ಪಿಸುತ್ತಾರೆ.
22ಆದರೆ ಯೆಹೋವ ದೇವರು ನನಗೆ ದುರ್ಗವೂ, ನನ್ನ ದೇವರೂ, ನನ್ನ ಆಶ್ರಯದ ಬಂಡೆಯೂ ಆಗಿದ್ದಾರೆ.
23ವೈರಿಯ ಅಪರಾಧವು ಅವರ ಮೇಲೆಯೇ ತಿರುಗಿ ಬೀಳಲಿ; ಅವರ ಕೇಡಿನಲ್ಲಿ ಅವರನ್ನು ಸಂಹರಿಸುವನು; ನಮ್ಮ ದೇವರಾದ ಯೆಹೋವ ದೇವರು ಅವರನ್ನು ಸಂಹರಿಸಿ ಬಿಡುವನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.