Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಕೀರ್ತನೆಗಳು 59

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ದೇವರೇ, ನನ್ನ ಶತ್ರುಗಳಿಂದ ನನ್ನನ್ನು ಬಿಡಿಸಿರಿ. ನನಗೆ ವಿರೋಧವಾಗಿ ಎದ್ದವರಿಂದ ನನ್ನನ್ನು ರಕ್ಷಿಸಿರಿ
2ಕೆಡುಕನ್ನು ಮಾಡುವವರಿಂದ ನನ್ನನ್ನು ಬಿಡಿಸಿರಿ. ಕೊಲೆಪಾತಕರಿಂದ ನನ್ನನ್ನು ರಕ್ಷಿಸಿರಿ.
3ಇಗೋ, ನನ್ನ ಪ್ರಾಣಕ್ಕೆ ಅವರು ಒಳಸಂಚುಮಾಡುತ್ತಾರೆ. ಕ್ರೂರರು ನನಗೆ ವಿರೋಧವಾಗಿ ಕೂಡಿಕೊಳ್ಳುತ್ತಾರೆ. ಯೆಹೋವ ದೇವರೇ, ನನ್ನಲ್ಲಿ ಅಪರಾಧವಿಲ್ಲ, ನಾನು ಯಾವ ತಪ್ಪೂ ಮಾಡಿಲ್ಲ.
4ನನ್ನಲ್ಲಿ ತಪ್ಪು ಇಲ್ಲದಿದ್ದರೂ ಅವರು ಹಾನಿಮಾಡಲು ಸಿದ್ಧರಾಗಿದ್ದಾರೆ. ನನ್ನ ಅವಸ್ಥೆಯನ್ನು ನೋಡಿರಿ, ನನಗೆ ಸಹಾಯ ಮಾಡುವುದಕ್ಕೆ ಸಿದ್ಧರಾಗಿರಿ.
5ಸರ್ವಶಕ್ತರಾದ ಯೆಹೋವ ದೇವರೇ, ಇಸ್ರಾಯೇಲರ ದೇವರೇ, ನೀವು ಎಲ್ಲಾ ಜನಾಂಗಗಳನ್ನು ನ್ಯಾಯತೀರಿಸುವುದಕ್ಕೆ ಎಚ್ಚರವಾಗಿರಿ. ದುಷ್ಟ ಅಪರಾಧಿಗಳಲ್ಲಿ ಯಾರಿಗೂ ದಯೆಸಿಗದಿರಲಿ.
6ಅವರು ಸಂಜೆಗೆ ಹಿಂದಿರುಗುವರು. ನಾಯಿಯ ಹಾಗೆ ಬೊಗಳುವರು. ಪಟ್ಟಣವನ್ನು ಸುತ್ತುವರು.
7ಇಗೋ, ತಮ್ಮ ಬಾಯಿಂದ ಬೊಗಳುತ್ತಾರೆ. ಅವರ ತುಟಿಗಳಲ್ಲಿ ಖಡ್ಗಗಳು ಇವೆ. ಅವರು, “ನಮ್ಮನ್ನು ಕೇಳುವವರು ಯಾರು?” ಎಂದು ಅಂದುಕೊಳ್ಳುತ್ತಾರೆ.
8ಆದರೆ ಯೆಹೋವ ದೇವರೇ, ನೀವು ಅವರನ್ನು ನೋಡಿ ನಗುವಿರಿ. ಇತರ ಜನಾಂಗವೆಲ್ಲ ಅಪಹಾಸ್ಯಕ್ಕಿಡಾಗಲಿ.
9ದೇವರೇ, ನನ್ನ ಬಲವೇ, ನಿಮಗಾಗಿ ಕಾದುಕೊಂಡಿರುವೆನು. ನನ್ನ ದೇವರೇ, ನೀವು ನನ್ನ ಕೋಟೆಯಾಗಿರುವಿರಿ.
10ದೇವರು ಪ್ರಸನ್ನರಾಗಿ ನನ್ನ ಮುಂದೆ ಹೋಗುವರು. ದೇವರು ನನ್ನ ನಿಂದಕರ ಮೇಲೆ ಜಯಿಸುವಂತೆ ಮಾಡುವರು.
11ನಮ್ಮ ಗುರಾಣಿಯಾಗಿರುವ ಯೆಹೋವ ದೇವರೇ, ನನ್ನ ಜನರು ಮರೆಯದ ಹಾಗೆ ಅವರು ಉಳಿದಿರಲಿ. ನಿಮ್ಮ ಪರಾಕ್ರಮದಿಂದ ಅವರನ್ನು ದಂಡಿಸಿರಿ.
12ಅವರ ಬಾಯಿಯ ಪಾಪಕ್ಕೂ, ಅವರ ತುಟಿಗಳ ಮಾತಿಗೂ, ಅವರು ನುಡಿಯುವ ಶಾಪಕ್ಕೂ ಅವರ ಗರ್ವವೇ ಅವರನ್ನು ಹಿಡಿಯಲಿ.
13ಅವರು ದಂಡನೆಗೆ ತುತ್ತಾಗಲಿ. ಅವರು ನಿರ್ನಾಮವಾಗಿಬಿಡಲಿ. ಆಗ ಯಾಕೋಬರನ್ನು ಆಳುವವರು ದೇವರೇ ಎಂಬುದು ಇಡೀ ಲೋಕಕ್ಕೇ ಗೊತ್ತಾಗಲಿ.
14ಅವರು ಸಂಜೆಗೆ ಹಿಂದಿರುಗುವರು. ನಾಯಿಯ ಹಾಗೆ ಬೊಗಳುವರು. ಪಟ್ಟಣವನ್ನು ಸುತ್ತುವರು.
15ಅವರು ಆಹಾರಕ್ಕಾಗಿ ಅಲೆದಾಡುವರು. ತೃಪ್ತಿಯಾಗದಿದ್ದರೆ ಗೊಣಗುಟ್ಟುವರು.
16ಆದರೆ ನಾನು ನಿಮ್ಮ ಬಲವನ್ನು ಕುರಿತು ಹಾಡುವೆನು. ಹೌದು, ಮುಂಜಾನೆ ನಿಮ್ಮ ಪ್ರೀತಿಯ ಕುರಿತು ಹಾಡುವೆನು. ಏಕೆಂದರೆ ನೀವು ನನಗೆ ಭದ್ರಕೋಟೆಯೂ, ನನ್ನ ಇಕ್ಕಟ್ಟಿನಲ್ಲಿ ಆಶ್ರಯವಾಗಿಯೂ ಇದ್ದೀರಿ.
17ನನ್ನ ಬಲವಾಗಿರುವವರೇ, ನಿಮ್ಮನ್ನು ಕೊಂಡಾಡುವೆನು. ಏಕೆಂದರೆ ದೇವರೇ, ನೀವು ನನ್ನ ಭದ್ರಕೋಟೆ ಆಗಿದ್ದೀರಿ. ನೀವು ನಾನು ಭರವಸೆ ಇಡುವ ಕರುಣೆಯುಳ್ಳ ದೇವರೂ ಆಗಿದ್ದೀರಿ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.