Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಕೀರ್ತನೆಗಳು 21

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಯೆಹೋವ ದೇವರೇ, ನಿಮ್ಮ ಬಲದಲ್ಲಿ ಅರಸನು ಆನಂದಿಸುತ್ತಾನೆ; ನೀವು ಆತನಿಗೆ ಕೊಡುವ ಜಯಗಳಲ್ಲಿ ಎಷ್ಟೋ ಅಧಿಕವಾಗಿ ಉಲ್ಲಾಸಪಡುತ್ತಾನೆ!
2ಅರಸನ ಹೃದಯದ ಆಶೆಯನ್ನು ನೀವು ಈಡೇರಿಸಿದ್ದೀರಿ; ಆತನ ತುಟಿಗಳ ಬಿನ್ನಹವನ್ನು ಹಿಂದಿಟ್ಟುಕೊಳ್ಳಲಿಲ್ಲ.
3ನೀವು ಉತ್ತಮ ಆಶೀರ್ವಾದಗಳಿಂದ ಅರಸನನ್ನು ಸ್ವಾಗತಿಸಿದ್ದೀರಿ; ಚೊಕ್ಕ ಬಂಗಾರದ ಕಿರೀಟವನ್ನು ಆತನ ತಲೆಯ ಮೇಲಿಟ್ಟಿದ್ದೀರಿ.
4ಜೀವವನ್ನು ಅರಸನು ನಿಮ್ಮಿಂದ ಬೇಡಲು, ನೀವು ಆತನಿಗೆ ಯುಗಯುಗಾಂತರಗಳಿಗೂ ದೀರ್ಘಾಯುಷ್ಯವನ್ನು ಕೊಟ್ಟಿದ್ದೀರಿ.
5ನೀವು ಕೊಟ್ಟ ಜಯಗಳ ಮೂಲಕ ಅರಸನ ಪ್ರಭಾವ ಹೆಚ್ಚಾಗಿದೆ; ಗೌರವವನ್ನೂ ಘನತೆಯನ್ನೂ ಆತನ ಮೇಲೆ ಇಟ್ಟಿರುತ್ತೀರಿ.
6ನೀವು ನಿಶ್ಚಯವಾಗಿ ಅರಸನಿಗೆ ನಿತ್ಯ ಆಶೀರ್ವಾದ ದಯಪಾಲಿಸಿದ್ದೀರಿ; ನಿಮ್ಮ ಸನ್ನಿಧಿಯಲ್ಲಿ ಆತನು ಅಧಿಕ ಆನಂದಪಡುವಂತೆ ಮಾಡಿದ್ದೀರಿ.
7ಏಕೆಂದರೆ ಅರಸನು ಯೆಹೋವ ದೇವರಲ್ಲಿ ಭರವಸೆ ಇಡುತ್ತಾನೆ; ಮಹೋನ್ನತರ ಒಡಂಬಡಿಕೆಯ ಪ್ರೀತಿಯಿಂದ ಅರಸನು ಕದಲದೆ ಇರುವನು.
8ನಿಮ್ಮ ಹಸ್ತವು ನಿಮ್ಮ ಶತ್ರುಗಳನ್ನೆಲ್ಲಾ ವಶಪಡಿಸಿಕೊಳ್ಳುವುದು. ನಿಮ್ಮ ಬಲಗೈ ನಿಮ್ಮ ವೈರಿಗಳನ್ನು ಸಿಕ್ಕಿಸುವುದು.
9ನೀವು ಬರುವ ಕಾಲದಲ್ಲಿ ಅವರನ್ನು ಅಗ್ನಿಕುಂಡದಂತೆ ದಹಿಸಿಬಿಡುವಿರಿ. ಯೆಹೋವ ದೇವರು ತಮ್ಮ ಬೇಸರದಿಂದ ಅವರನ್ನು ದಂಡಿಸಿಬಿಡುವರು; ಬೆಂಕಿಯು ಅವರನ್ನು ಭಸ್ಮ ಮಾಡುವುದು.
10ಅವರ ವಂಶವನ್ನು ಭೂಲೋಕದೊಳಗಿಂದಲೂ ಅವರ ಸಂತತಿಯನ್ನು ಮಾನವರೊಳಗಿಂದಲೂ ಉಳಿಯದಿರಲಿ.
11ಅವರು ನಿಮಗೆ ವಿರೋಧವಾಗಿ ಕೇಡನ್ನು ಯತ್ನಿಸಿದರು, ಅವರು ಕುಯುಕ್ತಿಯನ್ನು ಕಲ್ಪಿಸಿದರೂ ಅದು ಕೈಗೂಡದಿರಲಿ.
12ನಿಮ್ಮ ಬಿಲ್ಲನ್ನು ಅವರಿಗೆ ವಿರೋಧವಾಗಿ ಎತ್ತುವಾಗ ಅವರು ನಿಮಗೆ ಬೆನ್ನುಮಾಡಿ ಓಡಿಹೋಗಲಿ.
13ಯೆಹೋವ ದೇವರೇ, ನಿಮ್ಮ ಬಲದಲ್ಲಿ ಉನ್ನತರಾಗಿದ್ದೀರಿ, ನಾವು ನಿಮ್ಮ ಪರಾಕ್ರಮವನ್ನು ಹಾಡಿ ಕೀರ್ತಿಸುವೆವು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.