1ಪರಲೋಕದಲ್ಲಿ ಸಿಂಹಾಸನರಾಗಿರುವವರೇ, ನಿಮ್ಮ ಕಡೆಗೆ ನನ್ನ ಕಣ್ಣುಗಳನ್ನು ಎತ್ತಿದ್ದೇನೆ.
2ಇಗೋ, ದಾಸರ ಕಣ್ಣುಗಳು ತಮ್ಮ ಯಜಮಾನರ ಕೈಯನ್ನು ನೋಡುವ ಪ್ರಕಾರ, ಮತ್ತು ದಾಸಿಯ ಕಣ್ಣುಗಳು ತನ್ನ ಯಜಮಾನಿಯ ಕೈಯನ್ನೂ ನೋಡುವ ಪ್ರಕಾರ, ನಮ್ಮ ಕಣ್ಣುಗಳು ನಮ್ಮ ಯೆಹೋವ ದೇವರು, ನಮ್ಮನ್ನು ಕರುಣಿಸುವವರೆಗೆ ನಿರೀಕ್ಷೆಯಿಂದ ನೋಡುತ್ತಿರುವುದು.
3ನಮ್ಮನ್ನು ಕರುಣಿಸು, ಯೆಹೋವ ದೇವರೇ, ನಮ್ಮನ್ನು ಕರುಣಿಸು; ಏಕೆಂದರೆ ನಾವು ಬಹಳವಾಗಿ ತಿರಸ್ಕಾರವನ್ನು ಅನುಭವಿಸಿದ್ದೇವೆ.
4ನಾವು ಸುಖಭೋಗಿಗಳ ಗೇಲಿಯನ್ನೂ ಗರ್ವಿಷ್ಠರಿಂದ ತಿರಸ್ಕಾರವನ್ನೂ ಅನುಭವಿಸಿದ್ದೇವೆ.