Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಜ್ಞಾನೋಕ್ತಿಗಳು 23

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಆಳುವವನ ಸಂಗಡ ನೀನು ಊಟಕ್ಕೆ ಕುಳಿತಿರುವಾಗ, ನಿನ್ನ ಎದುರಿನಲ್ಲಿ ಏನಿದೆ ಎಂದು ಶ್ರದ್ಧೆಯಿಂದ ಗಮನಿಸು.
2ನೀನು ಹೊಟ್ಟೆಬಾಕನಾಗಿದ್ದರೆ, ನಿನ್ನ ಕುತ್ತಿಗೆಗೆ ಖಡ್ಗವನ್ನು ಇಟ್ಟುಕೋ.
3ಅವನ ರುಚಿ ಪದಾರ್ಥಗಳನ್ನು ಅಪೇಕ್ಷಿಸಬೇಡ; ಏಕೆಂದರೆ ಅದು ಮೋಸದ ಆಹಾರವು. ಎಂಟನೆಯ ಹೇಳಿಕೆ
4ಐಶ್ವರ್ಯವಂತನಾಗುವುದಕ್ಕೆ ಪ್ರಯಾಸಪಡಬೇಡ; ಅದಕ್ಕಾಗಿ ಸ್ವಬುದ್ಧಿಯನ್ನೇ ಆಶ್ರಯಿಸಬೇಡ.
5ಕಣ್ಣು ಮಿಟುಕಿಸುವುದರಲ್ಲಿ ಐಶ್ವರ್ಯ ಕಣ್ಮರೆಯಾಗುತ್ತದೆ. ಅದು ನಿಸ್ಸಂದೇಹವಾಗಿ ರೆಕ್ಕೆಗಳನ್ನು ಕಟ್ಟಿಕೊಂಡು ಹದ್ದಿನಂತೆ ಆಕಾಶದ ಕಡೆಗೆ ಹಾರಿಹೋಗುವುದು. ಒಂಬತ್ತನೆಯ ಹೇಳಿಕೆ
6ಜಿಪುಣನ ಆಹಾರವನ್ನು ತಿನ್ನಬೇಡ; ಅವನ ರುಚಿ ಪದಾರ್ಥಗಳನ್ನು ಆಶಿಸಬೇಡ.
7ಏಕೆಂದರೆ, ಅವನು ಎಲ್ಲದಕ್ಕೂ ಬೆಲೆ ಕಟ್ಟುವ ಯೋಚನೆಯುಳ್ಳವನಂತೆ ಇದ್ದಾನೆ; ಅವನು, “ತಿನ್ನು, ಕುಡಿ,” ಎಂದು ಹೇಳುತ್ತಾನೆ; ಆದರೆ ಅವನ ಹೃದಯವು ನಿನ್ನೊಂದಿಗಿಲ್ಲ.
8ನೀನು ತಿಂದ ಸ್ವಲ್ಪ ತುತ್ತನ್ನು ಕಕ್ಕಿಬಿಡುವೆ; ನಿನ್ನ ಸವಿಮಾತುಗಳೆಲ್ಲಾ ವ್ಯರ್ಥವೇ. ಹತ್ತನೆಯ ಹೇಳಿಕೆ
9ಬುದ್ಧಿಹೀನರ ಸಂಗಡ ಮಾತಾಡಬೇಡ; ಏಕೆಂದರೆ ನಿನ್ನ ಜ್ಞಾನದ ಮಾತುಗಳನ್ನು ಅವರು ತಿರಸ್ಕರಿಸುವನು. ಹನ್ನೊಂದನೆಯ ಹೇಳಿಕೆ
10ಪೂರ್ವಕಾಲದ ಮೇರೆಯನ್ನು ತೆಗೆಯಬೇಡ; ಅನಾಥರ ಹೊಲಗಳನ್ನು ಅತಿಕ್ರಮಿಸಬೇಡ.
11ಏಕೆಂದರೆ ಅವನ ವಿಮೋಚಕನು ಬಲಶಾಲಿಯಾಗಿದ್ದಾನೆ; ಅವರ ವ್ಯಾಜ್ಯಕ್ಕಾಗಿ ಆತನು ವಾದಿಸುವನು. ಹನ್ನೆರಡನೆಯ ಹೇಳಿಕೆ
12ಶಿಸ್ತಿಗೆ ನಿನ್ನ ಹೃದಯವನ್ನೂ ತಿಳುವಳಿಕೆಯ ಮಾತುಗಳಿಗೆ ನಿನ್ನ ಕಿವಿಗಳನ್ನೂ ಕೊಡು. ಹದಿಮೂರನೆಯ ಹೇಳಿಕೆ
13ಮಕ್ಕಳನ್ನು ಶಿಕ್ಷಿಸಲು ಹಿಂದೆಗೆಯಬೇಡ; ಬೆತ್ತದಿಂದ ಹೊಡೆದರೆ, ಅವರು ಸಾಯುವುದಿಲ್ಲ.
14ಅವರನ್ನು ಬೆತ್ತದಿಂದ ಹೊಡೆದು, ಪಾತಾಳದಿಂದ ಅವರ ಮರಣವನ್ನು ತಪ್ಪಿಸುವೆ. ಹದಿನಾಲ್ಕನೆಯ ಹೇಳಿಕೆ
15ಮಗನೇ, ನಿನ್ನ ಹೃದಯವು ಜ್ಞಾನವುಳ್ಳದ್ದಾಗಿದ್ದರೆ, ನನ್ನ ಹೃದಯವು ಹರ್ಷಿಸುವುದು.
16ನಿನ್ನ ತುಟಿಗಳು ಯಥಾರ್ಥವಾದವುಗಳನ್ನು ಮಾತಾಡಿದರೆ, ನನ್ನ ಅಂತರಾತ್ಮವು ಸಂತೋಷಿಸುವುದು. ಹದಿನೈದನೆಯ ಹೇಳಿಕೆ
17ಪಾಪಿಗಳನ್ನು ನೋಡಿ ನಿನ್ನ ಹೃದಯವು ಅಸೂಯೆಪಡದಿರಲಿ; ಆದರೆ ಯೆಹೋವ ದೇವರ ಭಯದಲ್ಲಿರಲು ಯಾವಾಗಲೂ ಆಸಕ್ತನಾಗಿರು.
18ಖಂಡಿತವಾಗಿಯೂ ನಿನಗೆ ಮುಂದಿನ ನಿರೀಕ್ಷೆಯಿದೆ; ನಿನ್ನ ನಿರೀಕ್ಷೆಯು ನಿರರ್ಥಕವಾಗದು. ಹದಿನಾರನೆಯ ಹೇಳಿಕೆ
19ಮಗನೇ, ಕೇಳಿ ಜ್ಞಾನವಂತನಾಗು; ನೀತಿ ಮಾರ್ಗದಲ್ಲಿ ನಿನ್ನ ಹೃದಯವನ್ನು ನಡೆಸು.
20ಅತಿ ಮದ್ಯಪಾನ ಮಾಡುವವರಲ್ಲಿ ಅತಿ ಮಾಂಸಭಕ್ಷರಲ್ಲಿಯೂ ಸೇರಬೇಡ.
21ಏಕೆಂದರೆ ಕುಡುಕರೂ ಹೊಟ್ಟೆಬಾಕರೂ ದುರ್ಗತಿಗೆ ಬರುವರು; ತೂಕಡಿಕೆಯು ಹರಕು ಬಟ್ಟೆಗಳನ್ನು ಹೊದಿಸುವದು. ಹದಿನೇಳನೆಯ ಹೇಳಿಕೆ
22ನಿನ್ನನ್ನು ಹೆತ್ತ ತಂದೆಯ ಮಾತಿಗೆ ಕಿವಿಗೊಡು, ನಿನ್ನ ತಾಯಿ ಮುಪ್ಪಿನವಳಾದಾಗ ಆಕೆಯನ್ನು ಅಸಡ್ಡೆ ಮಾಡಬೇಡ.
23ಸತ್ಯವನ್ನೂ ಜ್ಞಾನವನ್ನೂ ಶಿಕ್ಷಣವನ್ನೂ ವಿವೇಕವನ್ನೂ ಕೊಂಡುಕೋ; ಆದರೆ ಅವುಗಳನ್ನು ಮಾರಬೇಡ.
24ನೀತಿವಂತನ ತಂದೆಯು ಬಹಳವಾಗಿ ಸಂತೋಷಪಡುವನು; ಜ್ಞಾನಿಯಾದ ಮಗುವನ್ನು ಪಡೆದವನಿಗೆ ಅವನಿಂದ ಆನಂದವಾಗುವುದು.
25ನಿನ್ನ ತಂದೆತಾಯಿಗಳು ಸಂತೋಷಿಸುವರು; ನಿನ್ನ ಹೆತ್ತ ತಾಯಿ ಆನಂದಿಸುವಳು. ಹದಿನೆಂಟನೆಯ ಹೇಳಿಕೆ
26ಮಗನೇ, ನಿನ್ನ ಮನಸ್ಸನ್ನು ನನಗೆ ಕೊಡು; ನನ್ನ ಮಾರ್ಗಗಳನ್ನು ಅನುಸರಿಸುವಲ್ಲಿ ನಿಮ್ಮ ಕಣ್ಣುಗಳು ಆನಂದಿಸಲಿ.
27ವೇಶ್ಯೆಯು ಆಳವಾದ ಕುಣಿ; ವ್ಯಭಿಚಾರಿಣಿಯು ಇಕ್ಕಟ್ಟಾದ ಗುಂಡಿ.
28ಕಳ್ಳನಂತೆ ಅವಳು ಹೊಂಚು ಹಾಕಿ ಮನುಷ್ಯರಲ್ಲಿ ದ್ರೋಹಿಗಳನ್ನು ಹೆಚ್ಚಿಸುತ್ತಾಳೆ. ಹತ್ತೊಂಬತ್ತನೆಯ ಹೇಳಿಕೆ
29ಯಾರಿಗೆ ಕಷ್ಟ? ಯಾರಿಗೆ ದುಃಖ? ಯಾರಿಗೆ ಕಲಹಗಳು? ಯಾರು ಗೊಣಗುಟ್ಟುತ್ತಾರೆ? ಯಾರು ಸುಮ್ಮಸುಮ್ಮನೆ ಗಾಯಪಡುತ್ತಾರೆ? ಯಾರಿಗೆ ಕೆಂಪೇರಿದ ಕಣ್ಣುಗಳು?
30ಮದ್ಯಪಾನದಲ್ಲಿ ಆಸಕ್ತರಾಗಿ, ಮಿಶ್ರ ಮದ್ಯಪಾನವನ್ನು ಕುಡಿಯ ಬಯಸುವವರೇ ಅಲ್ಲವೇ!
31ದ್ರಾಕ್ಷಾರಸವು ಕೆಂಪಾಗಿದ್ದು, ಪಾತ್ರೆಯಲ್ಲಿ ಥಳಥಳಿಸುತ್ತಾ ಚಲಿಸಿದರೆ, ಅದನ್ನು ನೋಡಬೇಡ.
32ಕೊನೆಗೆ ಅದು ಹಾವಿನಂತೆ ಕಚ್ಚುವುದು ಮತ್ತು ಸರ್ಪದಂತೆ ವಿಷವುಕ್ಕಿಸುವುದು.
33ನಿಮ್ಮ ಕಣ್ಣುಗಳು ವಿಚಿತ್ರ ದೃಶ್ಯಗಳನ್ನು ನೋಡುತ್ತವೆ. ನಿಮ್ಮ ಮನಸ್ಸು ಗೊಂದಲಮಯ ವಿಷಯಗಳನ್ನು ಕಲ್ಪಿಸುತ್ತದೆ.
34ನೀನು ಸಮುದ್ರದ ಮಧ್ಯದಲ್ಲಿ ಮಲಗಿರುವವನಂತೆ ಇಲ್ಲವೆ ಹಡಗಿನ ಕಂಬದ ತುದಿಯಲ್ಲಿ ಇರುವಿ.
35“ಜನರು ನನ್ನನ್ನು ಹೊಡೆದರೂ ನನಗೆ ನೋವಾಗಲಿಲ್ಲ; ನಾನು ಎಚ್ಚರವಾಗುವುದು ಯಾವಾಗ? ಪುನಃ ನಾನು ಅದನ್ನು ಕುಡಿದೇನು?” ಎಂದುಕೊಳ್ಳುವೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.