Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಅರಣ್ಯಕಾಂಡ 27

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಯೋಸೇಫನ ಮಗನಾದ ಮನಸ್ಸೆಯ ಕುಟುಂಬಗಳಿಗೆ ಸೇರಿದ ಚಲ್ಪಹಾದ ಎಂಬುವನು. ಇವನು ಮಾಕೀರನ ಮರಿಮಗ, ಗಿಲ್ಯಾದನ ಮೊಮ್ಮಗ ಹಾಗು ಹೇಫೆರನ ಮಗ. ಈ ಚಲ್ಪಹಾದನಿಗೆ ಮಹ್ಲಾ, ನೋವಾ, ಹೊಗ್ಲಾ, ಮಿಲ್ಕಾ ಮತ್ತು ತಿರ್ಚಾ ಎಂಬ ಪುತ್ರಿಯರಿದ್ದರು.
2ಇವರು ಸಭೆಯ ಗುಡಾರದ ಬಾಗಿಲಿನ ಹತ್ತಿರದಲ್ಲಿದ್ದ ಮೋಶೆ, ಯಾಜಕನಾದ ಎಲಿಯಾಜರ್, ಪ್ರಧಾನರು ಮತ್ತು ಸಮಸ್ತ ಸಭೆಯವರ ಮುಂದೆ ಬಂದು ನಿಂತು ಅವರಿಗೆ,
3“ನಮ್ಮ ತಂದೆಯು ಮರುಭೂಮಿಯಲ್ಲಿ ಸತ್ತನು. ಅವನು ಕೋರಹನ ಗುಂಪಿನಲ್ಲಿ ಯೆಹೋವ ದೇವರಿಗೆ ವಿರೋಧವಾಗಿ ಕೂಡಿಕೊಂಡವರ ಗುಂಪಿನೊಳಗಿರದೆ, ತನ್ನ ಪಾಪದಲ್ಲಿಯೇ ಸತ್ತನು. ಅವನಿಗೆ ಪುತ್ರರು ಇರಲಿಲ್ಲ.
4ಹಾಗಾದರೆ ನಮ್ಮ ತಂದೆಗೆ ಮಗನಿಲ್ಲದಿರುವುದರಿಂದ, ಅವನ ಹೆಸರನ್ನು ತನ್ನ ಕುಟುಂಬದಿಂದ ಏಕೆ ತೆಗೆಯಬೇಕು? ನೀನು ನಮ್ಮ ತಂದೆಯ ಸಹೋದರರ ಮಧ್ಯದಲ್ಲಿ ಒಂದು ಸೊತ್ತನ್ನು ನಮಗೆ ಕೊಡು,” ಎಂದರು.
5ಮೋಶೆಯು ಅವರ ವ್ಯಾಜ್ಯವನ್ನು ಯೆಹೋವ ದೇವರ ಮುಂದೆ ತಂದನು.
6ಆಗ ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
7ಚಲ್ಪಹಾದನ ಪುತ್ರಿಯರು ಹೇಳಿದ್ದು ಸರಿ, ನೀನು ಅವರಿಗೆ ಅವರ ತಂದೆಯ ಸಹೋದರರ ಮಧ್ಯದಲ್ಲಿ ಒಂದು ಸೊತ್ತನ್ನು ನಿಶ್ಚಯವಾಗಿ ಕೊಡಬೇಕು, ಅವರ ತಂದೆಯ ಸೊತ್ತನ್ನು ಅವರಿಗೆ ಸೇರಿಸಬೇಕು.
8“ಇಸ್ರಾಯೇಲರ ಸಂಗಡ ಮಾಡನಾಡಿ ನೀನು ಹೇಳಬೇಕಾದದ್ದೇನೆಂದರೆ: ‘ಒಬ್ಬನು ಮಗನಿಲ್ಲದೆ ಸತ್ತರೆ, ನೀವು ಅವನ ಸೊತ್ತನ್ನು ಅವನ ಮಗಳಿಗೆ ಸೇರಿಸಬೇಕು.
9ಅವನಿಗೆ ಸಹೋದರರು ಇಲ್ಲದಿದ್ದರೆ, ನೀವು ಅವನ ಸೊತ್ತನ್ನು ಅವನ ತಂದೆಯ ಸಹೋದರರಿಗೆ ಕೊಡಬೇಕು.
10ಆದರೆ ಅವನ ತಂದೆಗೆ ಸಹೋದರರು ಇಲ್ಲದಿದ್ದರೆ,
11ಅವನ ಕುಟುಂಬದೊಳಗೆ ಅವನಿಗೆ ಹೆಚ್ಚಾಗಿ ಸಮೀಪವಾದ ಬಂಧುವಿಗೆ ಅವನ ಸೊತ್ತನ್ನು ಕೊಡಬೇಕು. ಅವನೇ ಅದನ್ನು ಪಡೆದುಕೊಳ್ಳಲಿ. ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ, ಇದು ಇಸ್ರಾಯೇಲರಿಗೆ ನ್ಯಾಯದ ಕಟ್ಟಳೆಯಾಗಿರಬೇಕು,’ ” ಎಂದು ಹೇಳಿದರು. ಮೋಶೆ ಯೆಹೋಶುವನನ್ನು ನೇಮಿಸಿದ್ದು
12ಆಗ ಯೆಹೋವ ದೇವರು ಮೋಶೆಗೆ, “ನೀನು ಈ ಅಬಾರೀಮ್ ಪರ್ವತದ ಮೇಲೆ ಏರಿ, ನಾನು ಇಸ್ರಾಯೇಲರಿಗೆ ಕೊಟ್ಟ ದೇಶವನ್ನು ನೋಡು.
13ಅದನ್ನು ನೋಡಿದ ಮೇಲೆ, ನಿನ್ನ ಸಹೋದರನಾದ ಆರೋನನ ಪ್ರಕಾರ ನೀನೂ ಸಹ ನಿನ್ನ ಜನರ ಬಳಿಗೆ ಸೇರುತ್ತೀ.
14ಏಕೆಂದರೆ ನೀವು ಚಿನ್ ಎಂಬ ಮರುಭೂಮಿಯಲ್ಲಿ, ಇಸ್ರಾಯೇಲ್ ಜನಸಮೂಹದವರು ನನ್ನೊಡನೆ ವಾಗ್ವಾದ ಮಾಡಿದಾಗ ಅವರ ಮುಂದೆ ನೀರಿನ ಬಳಿಯಲ್ಲಿ ನನ್ನನ್ನು ಗೌರವಿಸದೆ, ನನ್ನ ಆಜ್ಞೆಯನ್ನು ಮೀರಿದಿರಿ. ಆ ನೀರು ಎಂದರೆ ಚಿನ್ ಎಂಬ ಮರುಭೂಮಿಯ ಕಾದೇಶಿನಲ್ಲಿರುವ ಮೆರೀಬಾದ ನೀರು,” ಎಂದರು.
15ಮೋಶೆಯು ಯೆಹೋವ ದೇವರ ಸಂಗಡ ಮಾತನಾಡಿ,
16“ಎಲ್ಲಾ ಮನುಷ್ಯರ ಆತ್ಮಗಳ ದೇವರಾದ ಯೆಹೋವ ದೇವರು ಈ ಜನಸಮೂಹದ ಮೇಲೆ ಒಬ್ಬ ಮನುಷ್ಯನನ್ನು ನೇಮಿಸಿ ಇಡಲಿ.
17ಅವನು ಅವರ ಮುಂದಾಗಿ ಹೋಗಲಿ, ಅವರ ಮುಂದಾಗಿ ಬರಲಿ. ಅವರನ್ನು ಕರೆದುಕೊಂಡು ಹೋಗಲಿ, ಕರೆದುಕೊಂಡು ಬರಲಿ. ಯೆಹೋವ ದೇವರ ಈ ಜನಸಮೂಹವು ಕುರುಬನಿಲ್ಲದ ಕುರಿಗಳ ಹಾಗೆ ಇರಬಾರದು,” ಎಂದನು.
18ಆಗ ಯೆಹೋವ ದೇವರು ಮೋಶೆಗೆ, “ಪವಿತ್ರಾತ್ಮವುಳ್ಳವನಾಗಿರುವ ನೂನನ ಮಗ ಯೆಹೋಶುವನನ್ನು ತೆಗೆದುಕೊಂಡು, ನಿನ್ನ ಕೈಯನ್ನು ಅವನ ಮೇಲೆ ಇಟ್ಟು,
19ಅವನನ್ನು ಯಾಜಕನಾದ ಎಲಿಯಾಜರನ ಮುಂದೆಯೂ ಸಮಸ್ತ ಸಭೆಯ ಮುಂದೆಯೂ ನಿಲ್ಲಿಸಿ, ಅವರಿಗೆದುರಾಗಿ ಅವನನ್ನು ನೇಮಿಸು.
20ಇಸ್ರಾಯೇಲರ ಸಮಸ್ತ ಸಭೆಯು ಅವನಿಗೆ ವಿಧೇಯರಾಗುವಂತೆ, ನಿನಗಿರುವ ಗೌರವವನ್ನು ಅವನಿಗೆ ಕೊಡಬೇಕು.
21ಅವನು ಯಾಜಕನಾದ ಎಲಿಯಾಜರನ ಮುಂದೆ ನಿಲ್ಲಬೇಕು. ಎಲಿಯಾಜರನು ಯೆಹೋವ ದೇವರ ಮುಂದೆ ಊರೀಮ್ ನ್ಯಾಯದ ಪ್ರಕಾರ ಅವನಿಗೋಸ್ಕರ ವಿಚಾರಣೆಯನ್ನು ಮಾಡಬೇಕು. ಯೆಹೋಶುವನ ಆಜ್ಞೆಯ ಪ್ರಕಾರವೇ ಅವನು ಮತ್ತು ಅವನ ಸಂಗಡ ಇರುವ ಸಮಸ್ತ ಇಸ್ರಾಯೇಲರ ಸಮೂಹವೂ ಹೊರಡಬೇಕು ಹಾಗು ಹಿಂದಿರುಗಬೇಕು,” ಎಂದರು.
22ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಅವನು ಮಾಡಿ, ಯೆಹೋಶುವನನ್ನು ತೆಗೆದುಕೊಂಡು, ಅವನನ್ನು ಯಾಜಕನಾದ ಎಲಿಯಾಜರನ ಮುಂದೆಯೂ, ಸಮಸ್ತ ಸಭೆಯ ಮುಂದೆಯೂ ನಿಲ್ಲಿಸಿ,
23ಅವನ ಮೇಲೆ ತನ್ನ ಕೈಗಳನ್ನು ಇಟ್ಟು, ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಅವನನ್ನು ನೇಮಿಸಿದನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.