Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ನೆಹೆಮೀಯ 10

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಮುದ್ರೆ ಹಾಕಿದವರು ಯಾರೆಂದರೆ: ಅಧಿಪತಿಯಾದ ಹಕಲ್ಯನ ಮಗ ನೆಹೆಮೀಯನು. ಚಿದ್ಕೀಯ,
2ಸೆರಾಯ, ಅಜರ್ಯ, ಯೆರೆಮೀಯ,
3ಪಷ್ಹೂರ, ಅಮರ್ಯ, ಮಲ್ಕೀಯನ,
4ಹಟ್ಟೂಷ್, ಶೆಬನ್ಯ, ಮಲ್ಲೂಕ್,
5ಹಾರಿಮ್, ಮೆರೇಮೋತ್, ಓಬದ್ಯ,
6ದಾನಿಯೇಲ, ಗಿನ್ನೆತೋನ್, ಬಾರೂಕ್,
7ಮೆಷುಲ್ಲಾಮ್, ಅಬೀಯ, ಮಿಯಾಮಿನ್,
8ಮಾಜ್ಯ, ಬಿಲ್ಗೈ, ಶೆಮಾಯ ಇವರು ಯಾಜಕರಾಗಿದ್ದರು.
9ಲೇವಿಯರು: ಅಜನ್ಯನ ಮಗನಾದ ಯೇಷೂವ, ಹೇನಾದಾದ್ ಎಂಬವನ ಮಕ್ಕಳಲ್ಲಿ ಬಿನ್ನೂಯ್, ಕದ್ಮಿಯೇಲ್,
10ಅವರ ಸಂಗಡಿಗರಾದ ಶೆಬನ್ಯ, ಹೋದೀಯ, ಕೆಲೀಟ, ಪೆಲಾಯ, ಹಾನಾನ್,
11ಮೀಕ, ರೆಹೋಬ್, ಹಷಬ್ಯ,
12ಜಕ್ಕೂರ್, ಶೇರೇಬ್ಯ, ಶೆಬನ್ಯ,
13ಹೋದೀಯ, ಬಾನೀ, ಬೆನೀನೂ ಎಂಬವರು.
14ಜನರ ಮುಖ್ಯಸ್ಥರು ಪರೋಷ್, ಪಹತ್ ಮೋವಾಬ್, ಏಲಾಮ್, ಜತ್ತೂ, ಬಾನೀ,
15ಬುನ್ನಿ, ಅಜ್ಗಾದ್, ಬೇಬೈ,
16ಅದೋನೀಯ, ಬಿಗ್ವೈ, ಅದೀನ್,
17ಆಟೇರ್, ಹಿಜ್ಕೀಯ, ಅಜ್ಜೂರ್,
18ಹೋದೀಯ, ಹಾಷುಮ್, ಬೇಚೈ,
19ಹಾರೀಫ್, ಅನಾತೋತ್, ನೇಬೈ,
20ಮಗ್ಪೀಯಾಷ್, ಮೆಷುಲ್ಲಾಮ್, ಹೇಜೀರ್,
21ಮೆಷೇಜಬೇಲ್, ಚಾದೋಕ್, ಯದ್ದೂವ,
22ಪೆಲಟ್ಯ, ಹಾನಾನ್, ಅನಾಯ,
23ಹೋಶೇಯ, ಹನನ್ಯ, ಹಷ್ಷೂಬ್,
24ಹಲ್ಲೋಹೇಷ್, ಪಿಲ್ಹ, ಶೋಬೇಕ್,
25ರೆಹೂಮ್, ಹಷಬ್ನ, ಮಾಸೇಯ
26ಅಹೀಯ, ಹಾನಾನ್, ಆನಾನ್,
27ಮಲ್ಲೂಕ್, ಹಾರಿಮ್, ಬಾಣನು.
28ಜನರಲ್ಲಿ ಉಳಿದವರಾದ ಯಾಜಕರೂ, ಲೇವಿಯರೂ, ದ್ವಾರಪಾಲಕರೂ, ಹಾಡುಗಾರರೂ, ದೇವಾಲಯದ ಸೇವಕರೂ, ದೇವರ ನಿಯಮದ ಪ್ರಕಾರವಾಗಿ ಆ ದೇಶಗಳ ಜನರೊಳಗಿಂದ ತಮ್ಮನ್ನು ಪ್ರತ್ಯೇಕಿಸಿಕೊಂಡವರೆಲ್ಲರೂ, ಅವರ ಹೆಂಡತಿಯರೂ, ಅವರ ಪುತ್ರರೂ, ಅವರ ಪುತ್ರಿಯರೂ, ತಿಳುವಳಿಕೆಯೂ ಗ್ರಹಿಕೆಯೂ ಉಳ್ಳವರೆಲ್ಲರೂ,
29ತಮ್ಮ ಸಹೋದರರಾದ ತಮ್ಮ ಶ್ರೇಷ್ಠರ ಸಂಗಡ ಕೂಡಿಕೊಂಡು ದೇವರ ಸೇವಕ ಮೋಶೆಯ ಕೈಯಿಂದ ಕೊಟ್ಟ ದೇವರ ನಿಯಮದಂತೆ ನಡೆಯುತ್ತೇವೆಂದೂ, ನಮ್ಮ ಕರ್ತ ಆಗಿರುವ ಯೆಹೋವ ದೇವರ ಆಜ್ಞೆಗಳನ್ನೂ, ಅವರ ನ್ಯಾಯಗಳನ್ನೂ, ಅವರ ಕಟ್ಟಳೆಗಳನ್ನೂ, ಎಲ್ಲವನ್ನೂ ಕೈಗೊಂಡು ಮಾಡುತ್ತೇವೆಂದೂ ಆಣೆ ಇಟ್ಟು ಹೀಗೆ ಪ್ರಮಾಣ ಮಾಡಿದರು;
30ನಾವು ನಮ್ಮ ಪುತ್ರಿಯರನ್ನು ಇತರ ಜನರಿಗೆ ಕೊಡುವುದಿಲ್ಲ, ನಮ್ಮ ಪುತ್ರರಿಗೆ ಅವರ ಪುತ್ರಿಯರನ್ನು ತೆಗೆದುಕೊಳ್ಳುವುದಿಲ್ಲ ಎಂದು ಆಣೆ ಮಾಡುತ್ತೇವೆ.
31ಬೇರೆ ದೇಶದ ಜನರು ಸಬ್ಬತ್ ದಿನದಲ್ಲಿ ಸರಕುಗಳನ್ನೂ ಧಾನ್ಯವನ್ನೂ ಮಾರಲು ತೆಗೆದುಕೊಂಡು ಬಂದರೆ, ನಾವು ಅವುಗಳನ್ನು ಸಬ್ಬತ್ ದಿನದಲ್ಲಾದರೂ, ಪರಿಶುದ್ಧ ದಿನದಲ್ಲಾದರೂ ಅವರಿಂದ ಕೊಂಡುಕೊಳ್ಳುವುದಿಲ್ಲ. ಮತ್ತು ನಾವು ಏಳನೆಯ ವರ್ಷದಲ್ಲಿ ಭೂಮಿ ಕೆಲಸ ಮಾಡುವುದನ್ನು ಬಿಡುತ್ತೇವೆ ಮತ್ತು ಎಲ್ಲಾ ಸಾಲಗಳನ್ನು ರದ್ದುಗೊಳಿಸುತ್ತೇವೆ.
32ವರ್ಷಕ್ಕೆ 4 ಗ್ರಾಂ ಬೆಳ್ಳಿಯನ್ನು ನಮ್ಮ ದೇವರ ಆಲಯದ ಸೇವೆಗಾಗಿ ಕೊಡಬೇಕೆಂಬ ನಿಯಮವನ್ನು ಪಾಲಿಸಿಕೊಳ್ಳುತ್ತೇವೆ.
33ಈ ಹಣವನ್ನು, ಸಮ್ಮುಖದ ರೊಟ್ಟಿಗೋಸ್ಕರವೂ, ನಿತ್ಯಧಾನ್ಯ ಕಾಣಿಕೆಗೋಸ್ಕರವೂ, ವಿಶ್ರಾಂತಿಯ ದಿನಗಳಲ್ಲಿಯೂ, ಅಮಾವಾಸ್ಯೆಗಳಲ್ಲಿಯೂ, ಅರ್ಪಿಸುವ ನಿತ್ಯ ದಹನಬಲಿಗಳಿಗೋಸ್ಕರವೂ, ನೇಮಿಸಿದ ಹಬ್ಬಗಳಿಗೋಸ್ಕರವೂ, ಇಸ್ರಾಯೇಲರ ಪ್ರಾಯಶ್ಚಿತ್ತವಾದ ದೋಷಪರಿಹಾರದ ಬಲಿಗೋಸ್ಕರವೂ, ನಮ್ಮ ದೇವರ ಆಲಯದ ಸಮಸ್ತ ಕಾರ್ಯಕ್ಕೋಸ್ಕರವೂ ಉಪಯೋಗಿಸಬೇಕು.
34ಮೋಶೆಯ ನಿಯಮದಲ್ಲಿ ಬರೆದ ಹಾಗೆ ನಮ್ಮ ದೇವರಾಗಿರುವ ಯೆಹೋವ ದೇವರ ಬಲಿಪೀಠದ ಮೇಲೆ ಅರ್ಪಿಸುವುದಕ್ಕೆ ನೇಮಿತವಾದ ಕಾಲಗಳಲ್ಲಿ, ವರ್ಷ ವರ್ಷಕ್ಕೆ ನಮ್ಮ ಪಿತೃಗಳ ಗೋತ್ರಗಳ ಪ್ರಕಾರ ನಮ್ಮ ದೇವಾಲಯದೊಳಗೆ ತೆಗೆದುಕೊಂಡು ಬರಬೇಕಾದ ಸೌದೆಯ ಅರ್ಪಣೆಗೋಸ್ಕರ ಯಾಜಕರಿಗೂ, ಲೇವಿಯರಿಗೂ, ಜನರಿಗೂ ಚೀಟಿಗಳನ್ನು ಹಾಕಿದೆವು.
35ಯೆಹೋವ ದೇವರ ಆಲಯಕ್ಕೆ ಪ್ರತಿ ವರ್ಷದಲ್ಲಿಯೂ ನಮ್ಮ ಭೂಮಿಯ ಫಲಗಳಿಂದ ಪ್ರಥಮ ಫಲಗಳನ್ನು ತರುವುದಕ್ಕೂ,
36ಮೋಶೆಯ ನಿಯಮದಲ್ಲಿ ಬರೆದಿರುವ ಹಾಗೆ ನಮ್ಮ ಪುತ್ರರಲ್ಲಿಯೂ, ನಮ್ಮ ಪಶುಗಳಲ್ಲಿಯೂ ಚೊಚ್ಚಲಾದವುಗಳನ್ನು; ನಮ್ಮ ದನಗಳಲ್ಲಿಯೂ, ಮಂದೆಗಳಲ್ಲಿಯೂ ಚೊಚ್ಚಲಾದವುಗಳನ್ನು, ನಮ್ಮ ದೇವರ ಆಲಯಕ್ಕೆ ತಂದು, ನಮ್ಮ ದೇವರ ಆಲಯದಲ್ಲಿ ಸೇವಿಸುವ ಯಾಜಕರಿಗೆ ಕೊಡುತ್ತೇವೆ;
37ನಮ್ಮ ಹಿಟ್ಟಿನಲ್ಲಿ ಮೊದಲಿನ ಪಾಲನ್ನು ನಮ್ಮ ಕಾಣಿಕೆಗಳನ್ನೂ, ಸಕಲ ಮರಗಳ ಫಲವನ್ನೂ, ದ್ರಾಕ್ಷಾರಸವನ್ನೂ, ಎಣ್ಣೆಯನ್ನೂ ಯಾಜಕರ ಬಳಿಗೆ ನಮ್ಮ ದೇವರ ಆಲಯದ ಕೊಠಡಿಗಳಲ್ಲಿ ತಂದಿಡುತ್ತೇವೆ; ಲೇವಿಯರು ಒಕ್ಕಲುತನವಿರುವ ಪಟ್ಟಣಗಳಿಂದ ಹತ್ತರಲ್ಲೊಂದು ಪಾಲನ್ನು ಹೊಂದುವ ಹಾಗೆ ನಮ್ಮ ಭೂಮಿಯ ಹತ್ತರಲ್ಲೊಂದು ಪಾಲನ್ನು ಲೇವಿಯರಿಗೆ ತರುವುದಕ್ಕೂ ಪ್ರಮಾಣ ಮಾಡಿದೆವು.
38ಇದಲ್ಲದೆ ಲೇವಿಯರು ಹತ್ತರಲ್ಲೊಂದು ಪಾಲನ್ನು ತೆಗೆದುಕೊಳ್ಳುವಾಗ ಆರೋನನ ವಂಶದವನಾದ ಯಾಜಕನೊಬ್ಬನು ಲೇವಿಯರ ಸಂಗಡ ಇರಬೇಕು. ಲೇವಿಯರು ಹತ್ತರಲ್ಲೊಂದು ಪಾಲಾದದ್ದರಲ್ಲಿ ಹತ್ತನೆಯ ಪಾಲನ್ನು ತೆಗೆದುಕೊಂಡು ನಮ್ಮ ದೇವರ ಆಲಯದಲ್ಲಿ ಕೊಟ್ಟಡಿಗಳ ಬಳಿಯಿರುವ ಬೊಕ್ಕಸದ ಮನೆಗೆ ತರಬೇಕು.
39ಏಕೆಂದರೆ ಪರಿಶುದ್ಧ ಸ್ಥಾನದ ಸಲಕರಣೆಗಳೂ, ಸೇವೆ ಮಾಡುವ ಯಾಜಕರೂ, ದ್ವಾರಪಾಲಕರೂ, ಹಾಡುಗಾರರೂ ಇರುವ ಕೊಟ್ಟಡಿಗಳಿಗೆ ಇಸ್ರಾಯೇಲರೂ, ಲೇವಿಯರ ಮಕ್ಕಳೂ, ಕಾಣಿಕೆಯಾದ ಧಾನ್ಯವನ್ನೂ, ದ್ರಾಕ್ಷಾರಸವನ್ನೂ, ಎಣ್ಣೆಯನ್ನೂ ತರಬೇಕು. “ನಾವು ನಮ್ಮ ದೇವರ ಆಲಯವನ್ನು ಎಂದೂ ಅಲಕ್ಷ್ಯಮಾಡುವುದಿಲ್ಲ,” ಎಂದು ಬರೆದುಕೊಟ್ಟರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.