Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೆಹೆಜ್ಕೇಲನು 48

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1“ಗೋತ್ರಗಳ ಹೆಸರುಗಳು ಯಾವುವೆಂದರೆ: “ಉತ್ತರದ ಕೊನೆಯಿಂದ ಹೆತ್ಲೋನಿನ ಮಾರ್ಗದ ಮೇರೆಯೂ ಹಾಮಾತಿಗೆ ಹೋಗುವ ಮಾರ್ಗವಾಗಿ ಹಚರ್ ಏನಾನಿನ ಉತ್ತರದ ಕಡೆಗಿರುವ ದಮಸ್ಕದ ಮೇರೆಯೂ ಹಮಾತಿನ ಬಳಿಯಲ್ಲಿ ಇರುವ ಪೂರ್ವ, ಪಶ್ಚಿಮ ಇವೇ ಅದರ ಕಡೆಗಳು, ದಾನ್ ಗೋತ್ರಕ್ಕೆ ಒಂದು ಭಾಗವಾಗಿದೆ.
2ದಾನಿನ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದವರೆಗೂ ಆಶೇರನಿಗೆ ಒಂದು ಭಾಗವಾಗಿದೆ.
3ಆಶೇರನ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯವರೆಗೆ ನಫ್ತಾಲಿಗೆ ಒಂದು ಭಾಗವಾಗಿದೆ.
4ನಫ್ತಾಲಿಯ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯವರೆಗೆ ಮನಸ್ಸೆಗೆ ಒಂದು ಭಾಗ.
5ಮನಸ್ಸೆಯ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯವರೆಗೂ ಎಫ್ರಾಯೀಮಿಗೆ ಒಂದು ಭಾಗ.
6ಎಫ್ರಾಯೀಮ್ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದವರೆಗೆ ರೂಬೇನ್ ಗೆ ಒಂದು ಭಾಗ.
7ರೂಬೇನಿನ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ, ಪಶ್ಚಿಮದ ಕಡೆಯವರೆಗೂ ಯೆಹೂದಕ್ಕೆ ಒಂದು ಭಾಗ.
8“ಯೆಹೂದದ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯವರೆಗೂ ಇಪ್ಪತ್ತೈದು ಸಾವಿರ ಮೊಳ ಅಗಲವಾದಂತ ನೀವು ಅರ್ಪಿಸುವಂತ ಕಾಣಿಕೆ ಪೂರ್ವದಿಂದ ಪಶ್ಚಿಮದ ಕಡೆಯವರೆಗೂ ಇರಬೇಕು.
9“ನೀವು ಯೆಹೋವ ದೇವರಿಗೆ ಅರ್ಪಿಸುವಂತಹ ಕಾಣಿಕೆ ಇಪ್ಪತ್ತೈದು ಸಾವಿರ ಉದ್ದವೂ ಹತ್ತು ಸಾವಿರ ಮೊಳ ಅಗಲವೂ ಆಗಿರಬೇಕು.
10ಅವರಿಗಾಗಿ ಎಂದರೆ ಯಾಜಕರಿಗಾಗಿ ಇದೇ ಪರಿಶುದ್ಧ ಕಾಣಿಕೆ ಆಗಿರಬೇಕು. ಅದು ಉತ್ತರಕ್ಕೆ ಇಪ್ಪತ್ತೈದು ಸಾವಿರ, ಪಶ್ಚಿಮಕ್ಕೆ ಹತ್ತು ಸಾವಿರ ಅಗಲವೂ ಪೂರ್ವಕ್ಕೆ ಹತ್ತು ಸಾವಿರ ಅಗಲವೂ ದಕ್ಷಿಣಕ್ಕೆ ಇಪ್ಪತ್ತೈದು ಸಾವಿರ ಉದ್ದವೂ ಇರಬೇಕು. ಅದರ ಮಧ್ಯದಲ್ಲಿ ಯೆಹೋವ ದೇವರ ಪರಿಶುದ್ಧ ಸ್ಥಳವೂ ಇರಬೇಕು.
11ಇದು ನನಗೆ ನಂಬಿಗಸ್ತರಾಗಿ ನಡೆದುಕೊಂಡ ಚಾದೋಕನ ಪುತ್ರರಲ್ಲಿ ಪ್ರತಿಷ್ಠಿತರಾಗಿರುವ ಯಾಜಕರದಾಗಿರಬೇಕು; ಇಸ್ರಾಯೇಲರು ತಪ್ಪಿಹೋದಾಗ, ಲೇವಿಯರೂ ತಪ್ಪಿಹೋದ ಪ್ರಕಾರ ಚಾದೋಕಿನವರು ತಪ್ಪಿಹೋಗಲಿಲ್ಲ.
12ಮೀಸಲಾಗಿರುವ ಈ ನಾಡಿನ ವಿಶೇಷ ಕಾಣಿಕೆಯು ಲೇವಿಯರ ಮೇರೆಯ ಬಳಿಯಲ್ಲಿಯೇ ಅತಿ ಪರಿಶುದ್ಧವಾದದ್ದಾಗಿರಬೇಕು.
13“ಯಾಜಕರ ಮೇರೆಗೆ ಎದುರಾಗಿ ಲೇವಿಯರಿಗೆ ಇಪ್ಪತ್ತೈದು ಸಾವಿರ ಉದ್ದವೂ ಹತ್ತು ಸಾವಿರ ಅಗಲವೂ ಆಗಬೇಕು. ಒಟ್ಟು ಉದ್ದ ಇಪ್ಪತ್ತೈದು ಸಾವಿರ ಮತ್ತು ಅಗಲವು ಹತ್ತು ಸಾವಿರ.
14ಅವರು ಅದರಲ್ಲಿ ಏನನ್ನೂ ಮಾರಬಾರದು, ಏನನ್ನೂ ಬದಲಾಯಿಸಬಾರದು. ದೇಶದ ಪ್ರಥಮ ಫಲವನ್ನು ಯಾರಿಗೂ ಕೊಡಬಾರದು. ಏಕೆಂದರೆ ಅದು ಯೆಹೋವ ದೇವರಿಗೆ ಪರಿಶುದ್ಧವಾಗಿದೆ.
15“ಸುಮಾರು ಎರಡೂವರೆ ಕಿಲೋಮೀಟರ್ ಅಗಲ ಮತ್ತು ಸುಮಾರು ಹದಿಮೂರು ಕಿಲೋಮೀಟರ್ ಉದ್ದದ ಉಳಿದ ಪ್ರದೇಶವು ನಗರದ ಸಾಮಾನ್ಯ ಬಳಕೆಗಾಗಿ, ಇದು ಮನೆಗಳು ಮತ್ತು ಹುಲ್ಲುಗಾವಲುಗಳನ್ನು ಹೊಂದಿರುತ್ತದೆ. ನಗರವು ಅದರ ಮಧ್ಯದಲ್ಲಿ ಇರುತ್ತದೆ;
16ಮತ್ತು ಅದರ ಅಳತೆಯು ಈ ರೀತಿ ಇರುತ್ತದೆ: ಉತ್ತರದ ಕಡೆಗೆ ಸುಮಾರು ಎರಡೂವರೆ ಕಿಲೋಮೀಟರ್, ದಕ್ಷಿಣದ ಕಡೆಗೆ ಸುಮಾರು ಎರಡೂವರೆ ಕಿಲೋಮೀಟರ್, ಪೂರ್ವಕ್ಕೆ ಸುಮಾರು ಎರಡೂವರೆ ಕಿಲೋಮೀಟರ್, ಪಶ್ಚಿಮಕ್ಕೆ ಸುಮಾರು ಎರಡೂವರೆ ಕಿಲೋಮೀಟರ್.
17ಪಟ್ಟಣದ ಹುಲ್ಲುಗಾವಲು ಹೀಗಿರಬೇಕು. ಉತ್ತರದಲ್ಲಿ 135 ಮೀಟರ್ ದಕ್ಷಿಣದಲ್ಲಿ 135 ಮೀಟರ್ ಪೂರ್ವದಲ್ಲಿ 135 ಮೀಟರ್; ಪಶ್ಚಿಮದಲ್ಲಿ 135 ಮೀಟರ್.
18ಕಾಣಿಕೆಯಾದ ಪರಿಶುದ್ಧಭಾಗಕ್ಕೆ ಎದುರಾಗಿರುವಂಥದ್ದೂ ಉದ್ದದಲ್ಲಿ ಉಳಿದ ಭೂಮಿಯು ಪೂರ್ವಕ್ಕೆ ಹತ್ತು ಸಾವಿರ ಮೊಳವಾಗಿಯೂ ಪಶ್ಚಿಮಕ್ಕೆ ಹತ್ತು ಸಾವಿರ ಮೊಳವಾಗಿಯೂ ಇರಬೇಕು. ಅದು ಕಾಣಿಕೆಯ ಪರಿಶುದ್ಧಭಾಗಕ್ಕೆ ಎದುರಾಗಿರಬೇಕು. ಅದರ ಆದಾಯವು ಪಟ್ಟಣದಲ್ಲಿ ಸೇವೆಮಾಡುವವರ ಆಹಾರಕ್ಕಾಗುವಷ್ಟು ಇರಬೇಕು.
19ಪಟ್ಟಣದಲ್ಲಿ ಸೇವೆಮಾಡುವವರು ಇಸ್ರಾಯೇಲಿನ ಎಲ್ಲಾ ಗೋತ್ರಗಳಿಂದಲೇ ಅದರಲ್ಲಿಯೇ ಸೇವೆಮಾಡಬೇಕು.
20ಎಲ್ಲಾ ಕಾಣಿಕೆಯ ಸ್ಥಳವು ಇಪ್ಪತ್ತೈದು ಸಾವಿರ ಮೊಳ ಉದ್ದವಾಗಿಯೂ ಇಪ್ಪತ್ತೈದು ಸಾವಿರ ಮೊಳ ಅಗಲವಾಗಿಯೂ ಇರಬೇಕು. ನೀವು ಪರಿಶುದ್ಧ ವಿಶೇಷ ಕಾಣಿಕೆಯನ್ನು ಚಚ್ಚೌಕವಾಗಿ ಪಟ್ಟಣದ ಸೊತ್ತಿನ ಸಂಗಡ ಅರ್ಪಿಸಬೇಕು.
21“ಪರಿಶುದ್ಧ ಭಾಗವೂ ಪಟ್ಟಣದ ಸೊತ್ತಿಗೂ ಈ ಕಡೆಗೂ ಆ ಕಡೆಗೂ ಉಳಿದ ಭೂಮಿಯು ಕಾಣಿಕೆಯ ಇಪ್ಪತ್ತೈದು ಸಾವಿರ ಮೊಳಕ್ಕೆ ಎದುರಾಗಿ ಪೂರ್ವದ ಮೇರೆಯಲ್ಲಿರುವಂಥದ್ದೂ ಪಶ್ಚಿಮದಲ್ಲಿ ಇಪ್ಪತ್ತೈದು ಸಾವಿರ ಮೊಳಕ್ಕೆ ಎದುರಾಗಿ ಪಶ್ಚಿಮದ ಮೇರೆಯಲ್ಲಿರುವಂಥದ್ದೂ ಪ್ರಧಾನನಿಗಾದ ಪಾಲಿಗೆ ಎದುರಾಗಿಯೂ ಇರಬೇಕು. ಮೀಸಲಾದ ಪವಿತ್ರ ಕ್ಷೇತ್ರವೂ ಪವಿತ್ರಾಲಯವೂ ಅದರ ಮಧ್ಯದಲ್ಲಿರುವುವು.
22ಇದಲ್ಲದೆ ಲೇವಿಯರ ಸೊತ್ತಿನಿಂದ ಮೊದಲುಗೊಂಡು ಪಟ್ಟಣದ ಸೊತ್ತಿನಿಂದ ಪ್ರಧಾನನ ನಡುವೆ ಇರುವಂಥದ್ದು ಯೆಹೂದದ ಮೇರೆಗೂ ಬೆನ್ಯಾಮೀನನ ಮೇರೆಗೂ ಮಧ್ಯದಲ್ಲಿರುವಂಥದ್ದೂ ಪ್ರಧಾನನಿಗೆ ಸಲ್ಲಬೇಕು.
23“ಮಿಕ್ಕ ಗೋತ್ರಗಳ ವಿಷಯವೇನೆಂದರೆ: “ಪೂರ್ವದ ಕಡೆಯಿಂದ ಪಶ್ಚಿಮದವರೆಗೂ ಬೆನ್ಯಾಮೀನನ ಒಂದು ಭಾಗವಾಗಿದೆ.
24ಬೆನ್ಯಾಮೀನನ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದವರೆಗೂ ಸಿಮೆಯೋನ್ ಒಂದು ಭಾಗವಾಗಿದೆ.
25ಸಿಮೆಯೋನ್ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯವರೆಗೂ ಇಸ್ಸಾಕಾರ್ ನ ಒಂದು ಭಾಗವಾಗಿದೆ.
26ಇಸ್ಸಾಕಾರ್ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯವರೆಗೂ ಜೆಬುಲೂನ್ ನ ಒಂದು ಭಾಗವಾದೆ;
27ಜೆಬುಲೂನ್ ನ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯವರೆಗೂ ಗಾದ್ ನ ಒಂದು ಭಾಗವಾಗಿದೆ.
28ಗಾದಿನ ಮೇರೆಯ ಬಳಿಯಲ್ಲಿ ದಕ್ಷಿಣದ ಕಡೆಯಲ್ಲಿ ದಕ್ಷಿಣದ ಮೇರೆಯು ತಾಮಾರ್ ಮೊದಲುಗೊಂಡು ಮೆರೀಬಾ ಕಾದೇಶಿನ ಹಳ್ಳದ ಮೇಲೆ ಈಜಿಪ್ಟಿನ ಮುಂದಿರುವ, ತೊರೆಯ ಮಾರ್ಗವಾಗಿ ದೊಡ್ಡ ಸಮುದ್ರದವರೆಗೆ ಇರುವುದು.
29“ನೀವು ಇಸ್ರಾಯೇಲಿನ ಗೋತ್ರಗಳಿಗೆ ಚೀಟುಹಾಕಿ ಬಾಧ್ಯವಾಗಿ ಹಂಚಿಕೊಡಬೇಕಾದ ದೇಶವು ಇದೆ. ಅದರ ಭಾಗಗಳು ಇವೇ,” ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ. ನೂತನ ಪಟ್ಟಣದ ಬಾಗಿಲುಗಳು
30“ಪಟ್ಟಣದ ಹೊರಗೆ ನಿರ್ಗಮನ ಹೀಗಿರಬೇಕು: “ಉತ್ತರದ ಕಡೆಯಲ್ಲಿ ನಾಲ್ಕು ಸಾವಿರದ ಐನೂರು ಅಳತೆಗಳು.
31ಪಟ್ಟಣದ ಬಾಗಿಲುಗಳು ಇಸ್ರಾಯೇಲಿನ ಗೋತ್ರಗಳ ಹೆಸರುಗಳ ಪ್ರಕಾರ ಇರಬೇಕು. ಉತ್ತರಕ್ಕೆ ಮೂರು ಬಾಗಿಲುಗಳು: ರೂಬೇನ್ ಬಾಗಿಲು ಒಂದು, ಯೆಹೂದ ಬಾಗಿಲು ಒಂದು, ಲೇವಿ ಬಾಗಿಲು ಒಂದು.
32ಸುಮಾರು ಎರಡೂವರೆ ಕಿಲೋಮೀಟರ್ ಉದ್ದವಿರುವ ಪೂರ್ವದಲ್ಲಿ ಮೂರು ಬಾಗಿಲುಗಳಿರುತ್ತವೆ: ಯೋಸೇಫ್ ಬಾಗಿಲು ಒಂದು, ಬೆನ್ಯಾಮೀನನ ಬಾಗಿಲು, ಒಂದು ದಾನ್ ಬಾಗಿಲು ಒಂದು.
33ಸುಮಾರು ಎರಡೂವರೆ ಕಿಲೋಮೀಟರ್ ಉದ್ದವಿರುವ ದಕ್ಷಿಣದಲ್ಲಿ ಮೂರು ಬಾಗಿಲುಗಳಿರುತ್ತವೆ: ಒಂದು ಸಿಮೆಯೋನ್ ಬಾಗಿಲು, ಒಂದು ಇಸ್ಸಾಕಾರ್ ನ ಬಾಗಿಲು, ಒಂದು ಜೆಬುಲೂನ್ ನ ಬಾಗಿಲು.
34ಸುಮಾರು ಎರಡೂವರೆ ಕಿಲೋಮೀಟರ್ ಉದ್ದವಿರುವ ಪಶ್ಚಿಮದಲ್ಲಿ ಮೂರು ಬಾಗಿಲುಗಳಿರುತ್ತವೆ: ಒಂದು ಗಾದ್ ಬಾಗಿಲು, ಇನ್ನೊಂದು ಆಶೇರ್ ಬಾಗಿಲು, ಮತ್ತೊಂದು ನಫ್ತಾಲಿ ಬಾಗಿಲು.
35“ಸುತ್ತಲೂ ಹದಿನೆಂಟು ಸಾವಿರ ಅಳತೆಗಳು. “ಆ ದಿನದಿಂದ ಆ ಪಟ್ಟಣದ ಹೆಸರು, ‘ಯೆಹೋವ ದೇವರ ನೆಲೆ’ ” ಎಂಬುದೇ ಆಗಿರುವುದು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.