Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಎಫೆಸದವರಿಗೆ 1

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ದೇವರ ಚಿತ್ತಾನುಸಾರವಾಗಿ ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನು, ಎಫೆಸದಲ್ಲಿರುವ ಭಕ್ತರಿಗೂ ಕ್ರಿಸ್ತ ಯೇಸುವಿನಲ್ಲಿ ನಂಬಿಗಸ್ತರಿಗೂ ಬರೆಯುತ್ತಿರುವುದು:
2ನಮ್ಮ ತಂದೆಯಾದ ದೇವರಿಂದಲೂ ಕರ್ತ ಆಗಿರುವ ಯೇಸು ಕ್ರಿಸ್ತರಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಆಗಲಿ. ಕ್ರಿಸ್ತನಿಂದ ಆತ್ಮಿಕ ಆಶೀರ್ವಾದಗಳು
3ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ದೇವರೂ ತಂದೆಯೂ ಆಗಿರುವವರಿಗೆ ಸ್ತೋತ್ರ, ದೇವರು ಕ್ರಿಸ್ತನಲ್ಲಿ ಪರಲೋಕದ ಎಲ್ಲಾ ಆತ್ಮಿಕ ಆಶೀರ್ವಾದಗಳಿಂದ ನಮ್ಮನ್ನು ಆಶೀರ್ವದಿಸಿದ್ದಾರೆ.
4ನಾವು ಪ್ರೀತಿಯಲ್ಲಿದ್ದು ಅವರ ಮುಂದೆ ಪರಿಶುದ್ಧರೂ ನಿರ್ದೋಷಿಗಳೂ ಆಗಿರಬೇಕೆಂದು ಅವರು ಲೋಕದ ಅಸ್ತಿವಾರಕ್ಕೆ ಮುಂಚೆ ನಮ್ಮನ್ನು ಕ್ರಿಸ್ತನಲ್ಲಿ ಆರಿಸಿಕೊಂಡರು.
5ದೇವರು ತಮ್ಮ ಚಿತ್ತದ ಸಂತೋಷಕ್ಕನುಸಾರವಾಗಿ ಕ್ರಿಸ್ತ ಯೇಸುವಿನ ಮೂಲಕ ನಮ್ಮನ್ನು ತಮಗೋಸ್ಕರ ತಮ್ಮ ಪುತ್ರರಾಗಿ ಸ್ವೀಕಾರ ಮಾಡುವಂತೆ ಮೊದಲೇ ನೇಮಿಸಿದರು.
6ತಮ್ಮ ಕೃಪಾ ಮಹಿಮೆಯ ಸ್ತುತಿಗಾಗಿಯೇ ಇವುಗಳನ್ನು ದೇವರು ತಾವು ಪ್ರೀತಿಸುವ ಕ್ರಿಸ್ತನಲ್ಲಿ ನಮಗೆ ಉಚಿತವಾಗಿ ದಯಪಾಲಿಸಿದ್ದಾರೆ.
7ದೇವರ ಕೃಪಾ ಐಶ್ವರ್ಯಕ್ಕೆ ಅನುಸಾರವಾಗಿ ಕ್ರಿಸ್ತನಲ್ಲಿ ನಮಗೆ ಅವರ ರಕ್ತದ ಮೂಲಕ ಪಾಪಗಳ ಕ್ಷಮಾಪಣೆಯಾಗಿ ವಿಮೋಚನೆಯಾಯಿತು.
8ದೇವರು ಆ ಕೃಪೆಯನ್ನು ನಮ್ಮಲ್ಲಿ ಸಮೃದ್ಧಿಯಾಗಿ ಸುರಿಸಿದ್ದಾರೆ. ಎಲ್ಲಾ ಜ್ಞಾನ ವಿವೇಕಗಳೊಂದಿಗೆ
9ದೇವರು ಕ್ರಿಸ್ತನಲ್ಲಿ ಉದ್ದೇಶಮಾಡಿಕೊಂಡ ತಮ್ಮ ಚಿತ್ತದ ರಹಸ್ಯವನ್ನು ಸಂತೋಷದಿಂದ ನಮಗೆ ಪ್ರಕಟಿಸಿದರು,
10ಆ ರಹಸ್ಯವೋ ಭೂಪರಲೋಕಗಳಲ್ಲಿರುವ ಸಮಸ್ತವನ್ನೂ ಕಾಲವು ಪರಿಪೂರ್ಣಗೊಂಡಾಗ ಕ್ರಿಸ್ತನಲ್ಲಿ ಒಂದುಗೂಡಿಸುವುದಾಗಿದೆ.
11ದೇವರ ಚಿತ್ತಾನುಸಾರವಾಗಿ ಎಲ್ಲಾ ಕಾರ್ಯಗಳನ್ನು ನಡೆಸುವ ಅವರ ಉದ್ದೇಶದ ಪ್ರಕಾರ ಕ್ರಿಸ್ತನಲ್ಲಿ ನಮ್ಮನ್ನು ಮೊದಲೇ ಆರಿಸಿಕೊಂಡರು.
12ಇದರಿಂದ ಕ್ರಿಸ್ತನಲ್ಲಿ ಮೊದಲು ನಿರೀಕ್ಷೆಯುಳ್ಳವರಾದ ನಾವು ಅವರ ಮಹಿಮೆಯ ಸ್ತುತಿಯಾಗಿರುವಂತೆ ನೇಮಿಸಿದರು.
13ನೀವು ಸಹ ನಿಮ್ಮ ರಕ್ಷಣೆಯ ಸುವಾರ್ತೆಯ ಸತ್ಯವಾಕ್ಯವನ್ನು ಕೇಳಿದ ಮೇಲೆ ಕ್ರಿಸ್ತನಲ್ಲಿ ನಂಬಿಕೆಯಿಟ್ಟು ವಾಗ್ದಾನದ ಪವಿತ್ರಾತ್ಮರಿಂದ ಮುದ್ರೆಹೊಂದಿದ್ದೀರಿ.
14ದೇವರಿಗೆ ಸೇರಿದವರಾದ ನಾವು ವಿಮೋಚನೆಯಾಗುವ ತನಕ ನಮ್ಮ ಸ್ವರ್ಗೀಯ ವಾರಸುತನವನ್ನು ಹೊಂದುವೆವು ಎಂಬುವುದಕ್ಕೆ ಈ ಪವಿತ್ರಾತ್ಮ ದೇವರೇ ನಮಗೆ ಹೊಣೆಯಾಗಿದ್ದಾರೆ. ದೇವರ ಮಹಿಮೆಯ ನಿಮಿತ್ಯವಾಗಿ ನಾವು ಅವರನ್ನು ಸ್ತುತಿಸೋಣ. ಕೃತಜ್ಞತೆ ಮತ್ತು ಪ್ರಾರ್ಥನೆ
15ಈ ಕಾರಣದಿಂದ ನಾನು ಸಹ ಕರ್ತ ಯೇಸುವಿನಲ್ಲಿರುವ ನಿಮ್ಮ ನಂಬಿಕೆ ಹಾಗೂ ಪರಿಶುದ್ಧರೆಲ್ಲರಿಗಾಗಿರುವ ಪ್ರೀತಿಯನ್ನು ಕುರಿತು ಕೇಳಿ,
16ನನ್ನ ಪ್ರಾರ್ಥನೆಗಳಲ್ಲಿ ನಿಮಗಾಗಿ ವಿಜ್ಞಾಪಿಸಿ, ನಿಮ್ಮ ನಿಮಿತ್ತವಾಗಿ ಎಡಬಿಡದೆ ಸ್ತೋತ್ರ ಮಾಡುತ್ತೇನೆ.
17ನಮ್ಮ ಕರ್ತ ಯೇಸುಕ್ರಿಸ್ತರ ದೇವರೂ ಮಹಿಮೆಯ ತಂದೆಯಾದವರನ್ನು ನೀವು ಪೂರ್ಣವಾಗಿ ತಿಳಿದುಕೊಳ್ಳುವಂತೆ ಜ್ಞಾನದ ಮತ್ತು ಪ್ರಕಟಣೆಯ ಆತ್ಮವನ್ನು ನಿಮಗೆ ಅನುಗ್ರಹಿಸಲಿ ಎಂದು ನಿಮಗಾಗಿ ಯಾವಾಗಲೂ ಪ್ರಾರ್ಥನೆ ಮಾಡುವವನಾಗಿದ್ದೇನೆ.
18ದೇವರು ನಿಮ್ಮ ಮನೋನೇತ್ರಗಳನ್ನು ಬೆಳಗಿಸಲಿ ಎಂದು ಬೇಡಿಕೊಳ್ಳುತ್ತಿದ್ದೇನೆ. ಆಗ ಮಾತ್ರವೇ ನೀವು ದೇವರ ಕರೆಯ ನಿರೀಕ್ಷೆಯನ್ನೂ, ಪರಿಶುದ್ಧರಲ್ಲಿ ಅವರಿಗಿರುವ ವಾರಸುತನದ ಮಹಿಮೆಯನ್ನೂ ನೀವು ತಿಳಿದುಕೊಳ್ಳುವಿರಿ.
19ಮಾತ್ರವಲ್ಲದೆ ನಂಬುವವರಾದ ನಮಗಾಗಿರುವ ಹೋಲಿಸಲಾಗದ ದೇವರ ಮಹಾಶಕ್ತಿಯನ್ನೂ ನೀವು ತಿಳಿಯುವಂತೆ ಪ್ರಾರ್ಥನೆ ಮಾಡುವವನಾಗಿದ್ದೇನೆ.
20ಈ ಮಹಾಶಕ್ತಿಯನ್ನು ದೇವರು ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿ,
21ಸಕಲ ರಾಜತ್ವ, ಅಧಿಕಾರ, ಶಕ್ತಿ, ಪ್ರಭುತ್ವಗಳ ಮೇಲೆಯೂ ಈ ಲೋಕದಲ್ಲಿ ಮಾತ್ರವಲ್ಲದೆ ಬರುವ ಲೋಕದಲ್ಲಿಯೂ ಸಹ, ಹೆಸರುಗೊಂಡವರೆಲ್ಲರ ಮೇಲೆಯೂ ಎಷ್ಟೋ ಹೆಚ್ಚಾಗಿ ಪರಲೋಕದಲ್ಲಿ ಕ್ರಿಸ್ತರನ್ನು ತಮ್ಮ ಬಲಗಡೆಯಲ್ಲಿ ಕೂರಿಸಿಕೊಂಡರು.
22ದೇವರು ಸಮಸ್ತವನ್ನೂ ಕ್ರಿಸ್ತನ ಪಾದಗಳ ಕೆಳಗೆ ಅಧೀನಮಾಡಿ, ಅವರನ್ನು ಎಲ್ಲದರ ಮೇಲೆ ಶಿರಸ್ಸಾಗಿರಲು ಸಭೆಗೋಸ್ಕರ ನೇಮಿಸಿದ್ದಾರೆ.
23ಎಲ್ಲವನ್ನು ಎಲ್ಲಾ ವಿಧದಲ್ಲಿಯೂ ತುಂಬಿಸುವ ದೇವರಿಂದ ಕ್ರಿಸ್ತನ ದೇಹವಾಗಿರುವ ಸಭೆಯು ಪರಿಪೂರ್ಣ ಉಳ್ಳದ್ದಾಗಿದೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.