Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಪ್ರಸಂಗಿ 4

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಪುನಃ ನಾನು ಸೂರ್ಯನ ಕೆಳಗೆ ನಡೆಯುತ್ತಿರುವ ದಬ್ಬಾಳಿಕೆಯನ್ನೆಲ್ಲಾ ನೋಡಿದೆನು: ಹಿಂಸೆಗೊಂಡವರ ಕಣ್ಣೀರನ್ನೂ, ಅವರನ್ನು ಸಂತೈಸುವವರು ಯಾರೂ ಇಲ್ಲದಿರುವುದನ್ನೂ ನೋಡಿದೆನು. ಅಧಿಕಾರವು ಅವರ ದಬ್ಬಾಳಿಕೆಗಾರರ ಬಳಿಯಲ್ಲಿತ್ತು. ಆದರೆ ಅವರನ್ನು ಸಂತೈಸುವವರು ಒಬ್ಬರೂ ಇಲ್ಲ.
2ಆದಕಾರಣ ನಾನು ಇದನ್ನು ನೋಡಿ ಜೀವದಿಂದ ಇರುವವರಿಗಿಂತ, ಮೃತಪಟ್ಟವರೇ ಮೇಲು ಎಂದು ನಾನು ತೀರ್ಮಾನಿಸಿದೆ.
3ಆದರೆ ಇವರಿಬ್ಬರಿಗಿಂತಲೂ ಇನ್ನೂ ಹುಟ್ಟದೇ, ಸೂರ್ಯನ ಕೆಳಗೆ ನಡೆಯುವ ಕೆಟ್ಟ ಕೃತ್ಯವನ್ನು ನೋಡದಿರುವವನೇ ಶ್ರೇಷ್ಠನು.
4ಮನುಷ್ಯನು ಪಡುವ ಎಲ್ಲಾ ಪ್ರಯಾಸವನ್ನೂ ಸಾಧಿಸುವ ಎಲ್ಲಾ ಕಾರ್ಯಗಳನ್ನೂ ನೋಡಿದಾಗ ಇವು ಪರಸ್ಪರ ಮತ್ಸರಕ್ಕೆ ಕಾರಣವೆಂದು ನಾನು ತಿಳಿದುಕೊಂಡೆನು. ಇದು ಕೂಡ ಗಾಳಿಯನ್ನು ಬೆನ್ನಟ್ಟಿದ ಹಾಗೆ ವ್ಯರ್ಥವೇ.
5ಸುಮ್ಮನೇ ಕೈಕಟ್ಟಿ ಕುಳಿತುಕೊಂಡು ಬುದ್ಧಿಹೀನರು, ತಮ್ಮನ್ನು ತಾವೇ ಹಾಳುಮಾಡಿಕೊಳ್ಳುತ್ತಾರೆ.
6ಗಾಳಿಯನ್ನು ಹಿಡಿಯಲು ಬೆನ್ನಟ್ಟಿದಂತೆ ಪ್ರಯಾಸದಿಂದ ತುಂಬಿದ ಎರಡು ಕೈಗಳಿಂದ ಮಾಡಿದ ಕೆಲಸಕ್ಕಿಂತ ನೆಮ್ಮದಿಯಿಂದ ಒಂದು ಕೈಯಿಂದ ಮಾಡಿದ ಕೆಲಸವೇ ಲೇಸು.
7ಆಗ ಮತ್ತೆ ನಾನು ಸೂರ್ಯನ ಕೆಳಗೆ ವ್ಯರ್ಥವಾದದ್ಡನ್ನು ಕಂಡೆನು:
8ಜೊತೆಗಾರನಿಲ್ಲದೆ ಒಬ್ಬಂಟಿಗನಾದ ಒಬ್ಬ ಮನುಷ್ಯನಿದ್ದನು. ಅವನಿಗೆ ಮಗನಾಗಲಿ, ಸಹೋದರನಾಗಲಿ ಇರಲಿಲ್ಲ. ಆದರೂ ಅವನ ಪ್ರಯಾಸಕ್ಕೆ ಕೊನೆಯಿಲ್ಲ. ತನ್ನ ಸಂಪತ್ತಿನಿಂದ ಅವನ ಕಣ್ಣು ತೃಪ್ತಿ ಹೊಂದಿರಲಿಲ್ಲ. ಅವನು, “ನಾನು ಸುಖಸಂತೋಷವನ್ನು ತೊರೆದು, ಯಾರಿಗೋಸ್ಕರ ಕಷ್ಟಪಡುತ್ತಲೇ ಇದ್ದೇನೆ?” ಎಂದುಕೊಂಡನು. ಇದು ಕೂಡ ವ್ಯರ್ಥವೇ, ಪ್ರಯಾಸದ ಕೆಲಸವೇ ಸರಿ.
9ಒಬ್ಬನಿಗಿಂತ ಇಬ್ಬರು ಲೇಸು, ಏಕೆಂದರೆ ಅವರ ಪ್ರಯಾಸಕ್ಕೆ ಒಳ್ಳೆಯ ಪ್ರತಿಫಲವಿದೆ:
10ಒಬ್ಬನು ಬಿದ್ದರೆ ಇನ್ನೊಬ್ಬನು ಎತ್ತುವನು. ಆದರೆ ಅವನು ಒಬ್ಬೊಂಟಿಗನಾಗಿ ಬಿದ್ದರೆ ಅವನ ಗತಿ ದುರ್ಗತಿಯೇ ಏಕೆಂದರೆ ಅವನಿಗೆ ಸಹಾಯ ಮಾಡುವುದಕ್ಕೆ ಯಾರೂ ಇರುವುದಿಲ್ಲ.
11ಇಬ್ಬರು ಜೊತೆಯಲ್ಲಿ ಮಲಗಿಕೊಂಡರೆ ಅವರಿಗೆ ಬೆಚ್ಚಗಾಗುತ್ತದೆ. ಆದರೆ ಒಬ್ಬನಷ್ಟೆ ಹೇಗೆ ಬೆಚ್ಚಗಿರುತ್ತಾನೆ?
12ಒಬ್ಬಂಟಿಗನ ಮೇಲೆ ಜಯ ಸಾಧಿಸಲು, ಇಬ್ಬರು ಎದುರಾಗಿ ನಿಲ್ಲಬಹುದು. ಆದರೆ ಮೂರು ಹುರಿಯ ಹಗ್ಗವು ಬೇಗನೆ ಕಿತ್ತು ಹೋಗುವುದಿಲ್ಲ. ಅಭಿವೃದ್ಧಿ ಸಹ ವ್ಯರ್ಥ
13ಬುದ್ಧಿಯ ಹೇಳಿಕೆಗೆ ಕಿವಿಗೊಡದ ಮೂಢ ಮುದಿ ಅರಸನಿಗಿಂತ ಬಡವನಾದರೂ ಜ್ಞಾನಿಯಾದ ಒಬ್ಬ ಯುವಕನೇ ಮೇಲು.
14ಆ ಯುವಕನು ಸೆರೆಮನೆಯಿಂದ ರಾಜ್ಯವನ್ನಾಳುವುದಕ್ಕಾಗಿ ಬಂದಿರಬಹುದು ಅಥವಾ ತನ್ನ ರಾಜ್ಯದಲ್ಲಿ ಬಡ ಪ್ರಜೆಯಾಗಿ ಹುಟ್ಟಿರಬಹುದು.
15ಸೂರ್ಯನ ಕೆಳಗೆ ಜೀವಿಸಿ ನಡೆದಾಡಿದವರೆಲ್ಲರೂ ಅರಸನ ಪ್ರತಿಯಾಗಿ ಯುವಕನನ್ನು ಹಿಂಬಾಲಿಸಿದ್ದನ್ನೂ ನಾನು ನೋಡಿದೆನು.
16ಇವನ ಆಧಿಪತ್ಯಕ್ಕೆ ಒಳಪಟ್ಟ ಜನರ ಸಂಖ್ಯೆಯು ಅಪಾರ. ಆದರೆ ಯುವಕನ ಆಳ್ವಿಕೆಯ ಮುಂಚೆ ಇದ್ದವರು ಮತ್ತು ತರುವಾಯ ಬಂದವರು ಇವನನ್ನು ಮೆಚ್ಚಲಿಲ್ಲ. ಇದು ಸಹ ಗಾಳಿಯನ್ನು ಬೆನ್ನಟ್ಟಿದಂತೆ ವ್ಯರ್ಥವೇ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.