Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಪ್ರಸಂಗಿ 1

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ದಾವೀದನ ಮಗನೂ ಯೆರೂಸಲೇಮಿನ ಅರಸನೂ ಆದ ಪ್ರಸಂಗಿಯ ಮಾತುಗಳು:
2“ವ್ಯರ್ಥಗಳಲ್ಲಿ ವ್ಯರ್ಥ! ವ್ಯರ್ಥಗಳಲ್ಲಿ ವ್ಯರ್ಥ!” ಎಂದು ಪ್ರಸಂಗಿ ಹೇಳುತ್ತಾನೆ. “ಸಮಸ್ತವೂ ವ್ಯರ್ಥ! ಎಲ್ಲವೂ ವ್ಯರ್ಥ.”
3ಸೂರ್ಯನ ಕೆಳಗೆ ಮನುಷ್ಯನು ಪಡುವ ಎಲ್ಲಾ ಪ್ರಯಾಸಗಳಿಂದ ಅವನಿಗೆ ಲಾಭವೇನು?
4ಸಂತತಿಗಳು ಬರುತ್ತವೆ, ಸಂತತಿಗಳು ಹೋಗುತ್ತವೆ; ಆದರೆ ಭೂಮಿಯು ಶಾಶ್ವತವಾಗಿ ಉಳಿಯುತ್ತದೆ.
5ಸೂರ್ಯನು ಉದಯಿಸುತ್ತಾನೆ, ಸೂರ್ಯನು ಮುಳುಗುತ್ತಾನೆ. ತಾನು ಉದಯಿಸುವ ಸ್ಥಳಕ್ಕೆ ಆತುರದಿಂದ ಹಿಂದಿರುಗುತ್ತಾನೆ.
6ಗಾಳಿಯು ದಕ್ಷಿಣದ ಕಡೆಗೆ ಬೀಸುತ್ತದೆ. ಉತ್ತರದ ಕಡೆಗೆ ತಿರುಗುತ್ತದೆ. ಸುತ್ತುತ್ತಾ, ಸುತ್ತುತ್ತಾ ಹೋಗುತ್ತದೆ. ಆ ಗಾಳಿಯು ತನ್ನ ಸುತ್ತಳತೆಗಳ ಪ್ರಕಾರ ಹಿಂದಿರುಗುತ್ತದೆ.
7ನದಿಗಳೆಲ್ಲಾ ಸಮುದ್ರಕ್ಕೆ ಹರಿದು ಹೋಗುತ್ತವೆ. ಆದರೂ ಸಮುದ್ರವು ತುಂಬುವುದಿಲ್ಲ. ನದಿಗಳು ಎಲ್ಲಿಂದ ಬಂದಿವೆಯೋ, ಆ ಸ್ಥಳಕ್ಕೆ ಅವು ಹಿಂದಿರುಗುತ್ತವೆ.
8ಎಲ್ಲಾ ಕಾರ್ಯಗಳು ಪ್ರಯಾಸದಿಂದ ತುಂಬಿವೆ. ಇದನ್ನು ಮನುಷ್ಯನು ವಿವರಿಸಲಾರನು. ನೋಡುವುದರಿಂದ ಕಣ್ಣು ತೃಪ್ತಿಗೊಳ್ಳದು, ಕೇಳುವುದರಿಂದ ಕಿವಿಯು ದಣಿಯದು.
9ಇದ್ದದ್ದೇ ಇರುವುದು, ನಡೆದದ್ದೇ ನಡೆಯುವುದು. ಸೂರ್ಯನ ಕೆಳಗೆ ಹೊಸದಾದದ್ದು ಯಾವದೂ ಇಲ್ಲ.
10“ನೋಡು, ಇದು ಹೊಸದು,” ಎಂದು ಯಾವ ವಿಷಯವಾಗಿ ಹೇಳಬಹುದೋ? ಅದು ನಮಗಿಂತ ಮುಂಚೆ ಇದ್ದದ್ದು, ಪುರಾತನ ಕಾಲದಿಂದ ಇದ್ದದ್ದೇ.
11ಹಿಂದಿನ ಕಾಲದ ಜನರ ಜ್ಞಾಪಕವು ಈಗಿನವರಿಗಿಲ್ಲ. ಮುಂದಿನ ಕಾಲದಲ್ಲಿ ಬರುವವರ ಜ್ಞಾಪಕವು ಅವುಗಳ ಮುಂದಿನ ಕಾಲದ ಜನರಿಗೆ ಇರುವುದಿಲ್ಲ. ಜ್ಞಾನವು ವ್ಯರ್ಥವಾದದ್ದು
12ಪ್ರಸಂಗಿಯಾದ ನಾನು ಯೆರೂಸಲೇಮಿನಲ್ಲಿ ಇಸ್ರಾಯೇಲರ ಮೇಲೆ ಅರಸನಾಗಿದ್ದೆ.
13ಆಕಾಶದ ಕೆಳಗೆ ನಡೆಯುವ ಕೆಲಸಗಳನ್ನೆಲ್ಲಾ ಜ್ಞಾನದಿಂದ ವಿಚಾರಿಸಿ, ವಿಮರ್ಶಿಸುವುದಕ್ಕೆ ನಾನು ನನ್ನ ಮನಸ್ಸು ಮಾಡಿದೆ. ದೇವರು ಮಾನವರ ಮೇಲೆ ಈ ಕಷ್ಟಕರವಾದ ಪ್ರಯಾಸವನ್ನು ಹೊರಿಸಿದ್ದಾರೆ.
14ಸೂರ್ಯನ ಕೆಳಗೆ ನಡೆಯುವ ಎಲ್ಲಾ ಕೆಲಸಗಳನ್ನು ನಾನು ನೋಡಿದ್ದೇನೆ. ಗಾಳಿಯನ್ನು ಹಿಂದಟ್ಟುವಂತೆ ಎಲ್ಲವೂ ವ್ಯರ್ಥ.
15ವಕ್ರವಾದದ್ದನ್ನು ಸರಿಮಾಡುವುದಕ್ಕೆ ಆಗುವುದಿಲ್ಲ. ಇಲ್ಲದ್ದನ್ನು ಲೆಕ್ಕಿಸುವುದು ಅಸಾಧ್ಯ.
16ನನ್ನಷ್ಟಕ್ಕೆ ನಾನೇ ಹೀಗೆಂದುಕೊಂಡೆನು, “ನೋಡು, ಯೆರೂಸಲೇಮಿನಲ್ಲಿ ನನಗಿಂತ ಮೊದಲು ಆಳಿದವರಿಗಿಂತ ನಾನು ಹೆಚ್ಚು ಜ್ಞಾನವನ್ನು ಸಂಪಾದಿಸಿದ್ದೇನೆ. ಹೌದು, ಜ್ಞಾನದ ಹಾಗೂ ತಿಳುವಳಿಕೆಯ ಅನುಭವ ನನಗಿದೆ.”
17ಆಗ ಜ್ಞಾನವನ್ನೂ ಮನಗುಂದುವಿಕೆಯನ್ನೂ ಬುದ್ಧಿಹೀನತೆಯನ್ನೂ ತಿಳಿದುಕೊಳ್ಳುವಂತೆ ನಾನು ಮನಸ್ಸಿಟ್ಟೆನು, ಅದರ ಜೊತೆಗೆ ಇದು ಸಹ ಗಾಳಿಯನ್ನು ಬೆನ್ನಟ್ಟಿದಂತೆ, ಎಂದು ನಾನು ಅರಿತುಕೊಂಡೆನು.
18ಏಕೆಂದರೆ ಬಹು ಜ್ಞಾನವಿದ್ದಲ್ಲಿ ಬಹು ಸಂಕಟ, ಹೆಚ್ಚು ತಿಳುವಳಿಕೆ ಇದ್ದಲ್ಲಿ ಹೆಚ್ಚು ವ್ಯಥೆ ಇದೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.