Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಪೂರ್ವಕಾಲ ವೃತ್ತಾಂತ 31

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಇದಾದನಂತರ ಅಲ್ಲಿ ಇರುವವರಾದ ಸಮಸ್ತ ಇಸ್ರಾಯೇಲರು ಯೆಹೂದ ಪಟ್ಟಣಗಳಿಗೆ ಹೊರಟುಹೋಗಿ, ವಿಗ್ರಹಗಳನ್ನು ಮುರಿದು, ಅಶೇರ ಸ್ತಂಭಗಳನ್ನು ಕಡಿದು, ಸಮಸ್ತ ಯೆಹೂದ, ಬೆನ್ಯಾಮೀನ್, ಎಫ್ರಾಯೀಮ್, ಮನಸ್ಸೆ ದೇಶಗಳಲ್ಲಿ ಯಾವುದನ್ನೂ ಉಳಿಸಲಿಲ್ಲ, ಉನ್ನತ ಪೂಜಾಸ್ಥಳಗಳನ್ನು ಮತ್ತು ಬಲಿಪೀಠಗಳನ್ನು ಕೆಡವಿಹಾಕಿದರು. ಆಗ ಇಸ್ರಾಯೇಲರೆಲ್ಲರು ತಮ್ಮ ತಮ್ಮ ಆಸ್ತಿಪಾಸ್ತಿಯಿರುವ ಪಟ್ಟಣಗಳಿಗೆ ತಿರುಗಿ ಹೋದರು. ಆರಾಧಿಸುವುದಕ್ಕೆ ವ್ಯವಸ್ಥೆ
2ಹಿಜ್ಕೀಯನು ಅವನವನ ಸೇವೆಯ ಪ್ರಕಾರ ಯಾಜಕರ, ಲೇವಿಯರ ಸರತಿಗಳನ್ನು ನೇಮಿಸಿದನು. ದಹನಬಲಿಗಳನ್ನೂ ಮತ್ತು ಸಮಾಧಾನದ ಬಲಿಗಳನ್ನೂ ಅರ್ಪಿಸುವುದಕ್ಕೂ, ಸೇವಿಸುವುದಕ್ಕೂ ಯೆಹೋವ ದೇವರ ಪಾಳೆಯದ ಬಾಗಿಲುಗಳಲ್ಲಿ ಸ್ತೋತ್ರ ಮಾಡುವುದಕ್ಕೂ, ಕೊಂಡಾಡುವುದಕ್ಕೂ ಯಾಜಕರನ್ನೂ, ಲೇವಿಯರನ್ನೂ ನೇಮಿಸಿದನು.
3ಅವನು ಯೆಹೋವ ದೇವರ ನಿಯಮದಲ್ಲಿ ಬರೆದ ಪ್ರಕಾರ ಉದಯಕಾಲದ ಸಾಯಂಕಾಲದ ದಹನಬಲಿಗಳಿಗೋಸ್ಕರವೂ ವಿಶ್ರಾಂತಿಯ ದಿನಗಳಲ್ಲಿಯೂ ಅಮಾವಾಸ್ಯೆಗಳಲ್ಲಿಯೂ ನೇಮಿಸಿದ ಹಬ್ಬಗಳಲ್ಲಿಯೂ ಬೇಕಾದ ದಹನಬಲಿಗಳಿಗೋಸ್ಕರವೂ ಅರಸನ ಆಸ್ತಿಯಿಂದಲೇ ಅವನ ಭಾಗವನ್ನು ನೇಮಿಸಿದನು.
4ಯಾಜಕರೂ ಲೇವಿಯರೂ ಯೆಹೋವ ದೇವರ ನಿಯಮದಲ್ಲಿ ಆಸಕ್ತರಾಗಿರುವುದಕ್ಕಾಗಿ ಅವರಿಗೆ ತಕ್ಕ ಭಾಗವನ್ನು ಕೊಡಬೇಕೆಂದು ಯೆರೂಸಲೇಮಿನಲ್ಲಿ ಜನರಿಗೆ ಅವನು ಆಜ್ಞಾಪಿಸಿದನು.
5ಈ ಆಜ್ಞೆ ಹೊರಗೆ ಬಂದಾಗಲೇ ಇಸ್ರಾಯೇಲರು ಧಾನ್ಯ, ದ್ರಾಕ್ಷಾರಸ, ಎಣ್ಣೆ, ಜೇನು, ಹೊಲಗಳ ಹುಟ್ಟುವಳಿ, ಇವುಗಳ ಮೊದಲನೆಯ ಪಾಲನ್ನು ಬಹಳವಾಗಿ ಒಳಗೆ ತಂದರು. ಹಾಗೆಯೇ ಸಮಸ್ತ ವಸ್ತುಗಳಲ್ಲಿ ದಶಮಾಂಶದ ಪಾಲನ್ನು ಬಹಳವಾಗಿ ತಂದರು.
6ಇದಲ್ಲದೆ ಯೆಹೂದ ಪಟ್ಟಣಗಳಲ್ಲಿ ನಿವಾಸವಾಗಿರುವ ಇಸ್ರಾಯೇಲರು ಯೆಹೂದ್ಯರು ದನಗಳಲ್ಲಿಯೂ ಕುರಿಗಳಲ್ಲಿಯೂ ದಶಮಾಂಶ ತಂದರು. ತಮ್ಮ ದೇವರಾದ ಯೆಹೋವ ದೇವರಿಗೆ ಪರಿಶುದ್ಧ ಮಾಡಿದ ಪರಿಶುದ್ಧ ವಸ್ತುಗಳಲ್ಲಿ ದಶಮಾಂಶದ ಪಾಲು ತಂದು, ರಾಶಿರಾಶಿಯಾಗಿ ಇಟ್ಟರು.
7ಮೂರನೆಯ ತಿಂಗಳಲ್ಲಿ ರಾಶಿ ಮಾಡುವುದನ್ನು ಆರಂಭಿಸಿ, ಏಳನೆಯ ತಿಂಗಳಲ್ಲಿ ತೀರಿಸಿದರು.
8ಹಿಜ್ಕೀಯನೂ ಪ್ರಧಾನರೂ ಬಂದು ರಾಶಿಗಳನ್ನು ನೋಡಿದಾಗ, ಅವರು ಯೆಹೋವ ದೇವರನ್ನೂ ಸ್ತುತಿಸಿದರು, ಅವರ ಜನರಾದ ಇಸ್ರಾಯೇಲರನ್ನೂ ಆಶೀರ್ವದಿಸಿದರು.
9ಆಗ ಹಿಜ್ಕೀಯನು ರಾಶಿಗಳನ್ನು ಕುರಿತು ಯಾಜಕರನ್ನೂ, ಲೇವಿಯರನ್ನೂ ವಿಚಾರಿಸಿದನು.
10ಚಾದೋಕ್ ಸಂತಾನದ ಮುಖ್ಯಯಾಜಕ ಅಜರ್ಯನು, “ಜನರು ದೇವರಾದ ಯೆಹೋವ ದೇವರಿಗೆ ಕಾಣಿಕೆಯಾಗಿ ಪ್ರತ್ಯೇಕಿಸತಕ್ಕದ್ದನ್ನು ಅವರ ಆಲಯಕ್ಕೆ ತಂದಂದಿನಿಂದ ಯೆಹೋವ ದೇವರು ತಮ್ಮ ಪ್ರಜೆಗೆ ಸಮೃದ್ಧಿಯನ್ನು ಅನುಗ್ರಹಿಸಿದ್ದಾರೆ. ನಾವು ಉಂಡು ತೃಪ್ತರಾಗಿ, ಇನ್ನೂ ಇಷ್ಟು ದೊಡ್ಡ ರಾಶಿಯನ್ನು ಉಳಿಸಿಕೊಂಡಿರುತ್ತೇವೆ,” ಎಂದನು.
11ಬಳಿಕ ಹಿಜ್ಕೀಯನು ಯೆಹೋವ ದೇವರ ಆಲಯದಲ್ಲಿ ಕೊಠಡಿಗಳನ್ನು ಸಿದ್ಧಮಾಡಲು ಆಜ್ಞಾಪಿಸಿದನು.
12ಅವು ಸಿದ್ಧವಾದ ಮೇಲೆ ಜನರು ಕಾಣಿಕೆಗಳನ್ನು ತಮ್ಮ ಆದಾಯದ ದಶಮಾಂಶವನ್ನು ಹಾಗು ದೇವರಿಗೆ ಮುಡುಪಾಗಿ ಇಟ್ಟಿದ್ದನ್ನು ನಿರ್ವಂಚನೆಯಿಂದ ತಂದು, ಅವುಗಳಲ್ಲಿ ಹಾಕುತ್ತಿದ್ದರು. ಈ ಎಲ್ಲಾ ಉಗ್ರಾಣಗಳ ಮೇಲ್ವಿಚಾರಣೆಯಲ್ಲಿ ಲೇವಿಯನಾದ ಕೋನನ್ಯನು ಮುಖ್ಯಸ್ಥನಾಗಿದ್ದನು. ಅವನ ತಮ್ಮ ಶಿಮ್ಮಿಯು ದ್ವಿತೀಯ ಸ್ಥಾನದವನಾಗಿದ್ದನು.
13ಅರಸನಾದ ಹಿಜ್ಕೀಯನು ನೇಮಿಸಿದ ಪ್ರಕಾರ, ಯೆಹೀಯೇಲ್, ಅಜಜ್ಯ, ನಹತ್, ಅಸಾಯೇಲ್, ಯೆರೀಮೋತ್, ಯೋಜಾಬಾದ್, ಎಲೀಯೇಲ್, ಇಸ್ಮಕ್ಯ, ಮಹತ್, ಬೆನಾಯ, ಇವರು ಕೋನನ್ಯನ ಸಹೋದರನಾದ ಶಿಮ್ಮಿಯ ಕೈಕೆಳಗೆ ಆಡಳಿತಗಾರರಾಗಿದ್ದರು. ಅಜರ್ಯನು ದೇವರ ಆಲಯದ ಅಧಿಪತಿಯಾಗಿದ್ದನು.
14ಲೇವಿಯನಾಗಿರುವ ಇಮ್ನನ ಮಗ ಕೋರೆಯು ಎಂಬ ಪೂರ್ವದಿಕ್ಕಿನಲ್ಲಿರುವ ದ್ವಾರಪಾಲಕನು ಯೆಹೋವ ದೇವರ ಕಾಣಿಕೆಗಳನ್ನೂ, ಮಹಾಪರಿಶುದ್ಧವಾದವುಗಳನ್ನೂ ಪಾಲು ಹಂಚುವುದಕ್ಕೆ ದೇವರಿಗೆ ಉಚಿತಾರ್ಥವಾಗಿ ಅರ್ಪಿಸಿದ ಕಾಣಿಕೆಗಳ ಮೇಲ್ವಿಚಾರಕನಾಗಿದ್ದನು.
15ಇವನ ತರುವಾಯ ಯಾಜಕರ ಪಟ್ಟಣಗಳಲ್ಲಿ ತಮ್ಮ ಸಹೋದರರಿಗೆ ನಂಬಿಗಸ್ತಿಕೆಯಿಂದ ಸರತಿ ಸರತಿಯಾಗಿ ಹಿರಿಯರು ಕಿರಿಯರು ಎಂಬ ವ್ಯತ್ಯಾಸಮಾಡದೆ ಪಾಲು ಹಂಚುವುದಕ್ಕೆ ಏದೆನನೂ, ಮಿನ್ಯಾಮೀನನೂ, ಯೇಷೂವನ ಶೆಮಾಯನೂ, ಅಮರ್ಯನೂ, ಶೆಕನ್ಯನೂ ಇದ್ದರು.
16ವಂಶಾವಳಿಯ ದಾಖಲೆಯ ಪ್ರಕಾರ ಮೂರು ವರ್ಷ ಪ್ರಾಯ ಮೊದಲ್ಗೊಂಡು ಮೇಲಿರುವ ಗಂಡು ಮಕ್ಕಳು ಹೊರತಾಗಿ ಯೆಹೋವ ದೇವರ ಆಲಯದಲ್ಲಿ ಪ್ರವೇಶಿಸುವವರೆಲ್ಲರಿಗೆ ಅವರ ಕೆಲಸಗಳಲ್ಲಿ ಅವರ ಸರತಿಗಳ ಪ್ರಕಾರ ಅವರ ಸೇವೆಗೆ ಅವರವರ ದಿನದ ಭಾಗವನ್ನು ಕೊಡುವುದಕ್ಕೂ,
17ಹಾಗೆಯೇ ಇಪ್ಪತ್ತು ವರ್ಷ ಪ್ರಾಯ ಮೊದಲ್ಗೊಂಡು ವಂಶಾವಳಿಯ ದಾಖಲೆಯ ಪ್ರಕಾರ ಅವರವರ ಕೆಲಸಗಳಲ್ಲಿಯೂ, ಅವರವರ ಸರತಿಗಳಲ್ಲಿಯೂ ಇರುವ ಯಾಜಕರಿಗೂ, ಲೇವಿಯರಿಗೂ ಅವರ ಸಮಸ್ತ ಕೂಟದಲ್ಲಿ ವಂಶಾವಳಿಯ ದಾಖಲೆಯ ಪ್ರಕಾರ
18ಅವರ ಹೆಂಡತಿಯರಿಗೂ ಚಿಕ್ಕವರಿಗೂ ಪುತ್ರಪುತ್ರಿಯರಿಗೂ ಪಾಲು ಕೊಡುವುದಕ್ಕೂ ಇದ್ದರು. ಏಕೆಂದರೆ ಅವರು ತಮ್ಮ ಉದ್ಯೋಗದಲ್ಲಿ ತಮ್ಮನ್ನೇ ತಾವು ಪರಿಶುದ್ಧಗೊಳಿಸುವಲ್ಲಿ ನಂಬಿಗಸ್ತರಾಗಿದ್ದರು.
19ಯಾಜಕರಲ್ಲಿ ಸಮಸ್ತ ಗಂಡಸರಿಗೂ, ಲೇವಿಯರಲ್ಲಿ ಲಿಖಿತರಾದ ಸಮಸ್ತರಿಗೂ ಪಾಲನ್ನು ಕೊಡುವುದಕ್ಕೆ ತಮ್ಮ ಪಟ್ಟಣಗಳ ವಲಯಗಳಲ್ಲಿರುವ ಯಾಜಕರಾದ ಆರೋನನ ವಂಶಾವಳಿಯ ದಾಖಲೆಯ ಪ್ರಕಾರ ಮನುಷ್ಯರು ಪ್ರತಿ ಪಟ್ಟಣದಲ್ಲಿ ಇದ್ದರು.
20ಹೀಗೆಯೇ ಹಿಜ್ಕೀಯನು ಸಮಸ್ತ ಯೆಹೂದದಲ್ಲಿ ತನ್ನ ದೇವರಾದ ಯೆಹೋವ ದೇವರ ಸಮ್ಮುಖದಲ್ಲಿ ಉತ್ತಮವಾದದ್ದನ್ನೂ, ಸರಿಯಾದದ್ದನ್ನೂ, ಸತ್ಯವಾದದ್ದನ್ನೂ ನಡೆಸಿದನು.
21ಇದಲ್ಲದೆ ದೇವರ ಆಲಯದ ಸೇವೆಯಲ್ಲಿಯೂ, ಮೋಶೆಯ ನಿಯಮದಲ್ಲಿಯೂ, ದೇವರ ಆಜ್ಞೆಗಳಲ್ಲಿಯೂ ಅವನು ತನ್ನ ದೇವರನ್ನು ಹುಡುಕಲು ಆರಂಭಿಸಿದ ಸಮಸ್ತ ಕಾರ್ಯಗಳನ್ನು ತನ್ನ ಪೂರ್ಣಹೃದಯದಿಂದ ಮಾಡಿ, ಅವನು ಅಭಿವೃದ್ಧಿ ಹೊಂದಿದನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.