Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಪೂರ್ವಕಾಲ ವೃತ್ತಾಂತ 3

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಸೊಲೊಮೋನನು ಯೆರೂಸಲೇಮಿನಲ್ಲಿ ತನ್ನ ತಂದೆ ದಾವೀದನಿಗೆ ಯೆಹೋವ ದೇವರು ಕಾಣಿಸಿಕೊಂಡ ಸ್ಥಳವಾದ ಮೊರೀಯಾ ಬೆಟ್ಟದ ಮೇಲೆ, ದಾವೀದನು ಸಿದ್ಧಮಾಡಿದ ಸ್ಥಳವಾದ ಯೆಬೂಸಿಯನಾದ ಒರ್ನಾನನ ಕಣದಲ್ಲಿ ಯೆಹೋವ ದೇವರ ಆಲಯವನ್ನು ಕಟ್ಟಿಸಲು ಪ್ರಾರಂಭಿಸಿದನು.
2ತನ್ನ ಆಳಿಕೆಯ ನಾಲ್ಕನೆಯ ವರ್ಷದ ಎರಡನೆಯ ತಿಂಗಳಿನ ಎರಡನೆಯ ದಿವಸದಲ್ಲಿ ಕಟ್ಟುವುದಕ್ಕೆ ಆರಂಭಿಸಿದನು.
3ದೇವರ ಆಲಯವನ್ನು ಕಟ್ಟುವುದಕ್ಕೆ ಸೊಲೊಮೋನನು ಹಾಕಿಸಿದ ಅಸ್ತಿವಾರಗಳು ಏನೆಂದರೆ ಮೊದಲಿನ ಅಳತೆಯ ಪ್ರಕಾರವಾಗಿ ಅದರ ಉದ್ದ ಸುಮಾರು 27 ಮೀಟರ್ ಮತ್ತು ಅದರ ಅಗಲ 9 ಮೀಟರ್;
4ಮುಂದೆ ಇರುವ ದ್ವಾರಾಂಗಳ ಆಲಯದ ಅಗಲದ ಪ್ರಕಾರ ಸುಮಾರು 9 ಮೀಟರ್ ಉದ್ದವಾಗಿತ್ತು; 54 ಮೀಟರ್ ಎತ್ತರವಾಗಿತ್ತು. ಅವನು ಅದನ್ನು ಒಳಗಡೆ ಶುದ್ಧ ಬಂಗಾರದಿಂದ ಹೊದಿಸಿದನು.
5ಅವನು ದೊಡ್ಡ ತುರಾಯಿ ಮರಗಳಿಂದ ಮುಚ್ಚಿದ ಕೋಣೆಯನ್ನು ಶುದ್ಧ ಬಂಗಾರದಿಂದ ಹೊದಿಸಿ, ಅದರ ಮೇಲೆ ಖರ್ಜೂರದ ಗಿಡಗಳನ್ನೂ, ಸರಪಣಿಗಳನ್ನೂ ಕೆತ್ತಿಸಿದನು.
6ಇದಲ್ಲದೆ ಸೌಂದರ್ಯದ ನಿಮಿತ್ತವಾಗಿ ಅಮೂಲ್ಯವಾದ ರತ್ನಗಳಿಂದ ಆ ಆಲಯವನ್ನು ಮುಚ್ಚಿದನು. ಅದರ ಬಂಗಾರವು ಪರ್ವಯಿಮ್ ದೇಶದ್ದು.
7ಆಲಯದ ತೊಲೆಗಳನ್ನೂ, ಸ್ತಂಭಗಳನ್ನೂ, ಗೋಡೆಗಳನ್ನೂ, ಬಾಗಿಲುಗಳನ್ನೂ, ಅವನು ಬಂಗಾರದಿಂದ ಹೊದಿಸಿ, ಗೋಡೆಗಳ ಮೇಲೆ ಕೆರೂಬಿಗಳನ್ನೂ ಕೆತ್ತಿಸಿದನು.
8ಅವನು ಮಹಾಪರಿಶುದ್ಧವಾದ ಸ್ಥಳವನ್ನು ಕಟ್ಟಿದನು. ಅದರ ಉದ್ದವು ಆಲಯದ ಅಗಲದ ಪ್ರಕಾರ 9 ಮೀಟರ್; ಅದರ ಅಗಲ 9 ಮೀಟರ್. ಅವನು ಅದನ್ನು 20,000 ಕಿಲೋಗ್ರಾಂ ಶುದ್ಧ ಬಂಗಾರದಿಂದ ಹೊದಿಸಿದನು.
9ಅದರ ಮೊಳೆಗಳು ಐನೂರ ಎಪ್ಪತ್ತು ಕಿಲೋಗ್ರಾಂಗಳ ತೂಕ ಬಂಗಾರದ್ದಾಗಿತ್ತು. ಹಾಗೆಯೇ ಮೇಲಿನ ಕೊಠಡಿಗಳನ್ನು ಬಂಗಾರದಿಂದ ಹೊದಿಸಿದನು.
10ಮಹಾಪರಿಶುದ್ಧವಾದ ಸ್ಥಳದಲ್ಲಿ ಎರಡು ಕೆರೂಬಿಗಳನ್ನು ಮಾಡಿಸಿ, ಬಂಗಾರದಿಂದ ಅವುಗಳನ್ನು ಹೊದಿಸಿದನು.
11ಕೆರೂಬಿಗಳ ರೆಕ್ಕೆಗಳು 9 ಮೀಟರ್ ಉದ್ದವಾಗಿದ್ದವು. ಒಂದು ರೆಕ್ಕೆಯು ಎರಡೂವರೆ ಮೀಟರ್ ಉದ್ದವಾಗಿದ್ದು, ಆಲಯದ ಗೋಡೆಯವರೆಗೆ ಮುಟ್ಟಿತ್ತು; ಮತ್ತೊಂದು ರೆಕ್ಕೆ ಎರಡೂವರೆ ಮೀಟರ್ ಉದ್ದವಾಗಿದ್ದು, ಇನ್ನೊಂದು ಕೆರೂಬಿಯ ರೆಕ್ಕೆಯವರೆಗೂ ಮುಟ್ಟಿತ್ತು.
12ಹಾಗೆಯೇ ಮತ್ತೊಂದು ಕೆರೂಬಿಯ ರೆಕ್ಕೆಯು ಎರಡೂವರೆ ಮೀಟರ್ ಉದ್ದವಾಗಿದ್ದು, ಆಲಯದ ಗೋಡೆಯವರೆಗೆ ಮುಟ್ಟಿತ್ತು; ಇನ್ನೊಂದು ರೆಕ್ಕೆಯು ಎರಡೂವರೆ ಮೀಟರ್ ಉದ್ದವಾಗಿದ್ದು, ಬೇರೆ ಇರುವ ಕೆರೂಬಿಯ ರೆಕ್ಕೆಗೆ ಕೂಡಿಕೊಂಡಿತ್ತು.
13ಈ ಕೆರೂಬಿಗಳ ರೆಕ್ಕೆಗಳು 9 ಮೀಟರ್ ಉದ್ದಕ್ಕೆ ಚಾಚಿಕೊಂಡವು. ಅವು ತಮ್ಮ ಕಾಲುಗಳ ಮೇಲೆ ನಿಂತವು. ಅವುಗಳ ಮುಖಗಳು ಒಳಗಡೆಯಾಗಿದ್ದವು.
14ಪರದೆಯನ್ನು ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ನಯವಾದ ಹೊಸೆದ ನಾರಿನಿಂದ ಮಾಡಿಸಿ, ಅದರಲ್ಲಿ ಕೆರೂಬಿಗಳುಳ್ಳದ್ದನ್ನಾಗಿ ಮಾಡಿಸಿದನು.
15ಇದಲ್ಲದೆ ಅವನು ಕಟ್ಟಡದ ಪ್ರವೇಶದ್ವಾರದಲ್ಲಿ ಎರಡು ಸ್ತಂಭಗಳನ್ನು ನಿರ್ಮಿಸಿದನು, ಪ್ರತಿಯೊಂದೂ ಹದಿನೈದು ಮೀಟರ್ ಎಪ್ಪತ್ತೈದು ಸೆಂಟಿಮೀಟರ್ ಎತ್ತರ, ಪ್ರತಿಯೊಂದರ ಮೇಲೆಯೂ ನಿರ್ಮಿಸಲಾದ ಪ್ರತಿಯೊಂದು ತಲೆಗಳು ಎರಡೂವರೆ ಮೀಟರ್ ಉದ್ದವಿತ್ತು.
16ಗರ್ಭಗುಡಿಯಲ್ಲಿ ಸರಪಣಿಗಳಂತೆ ಮಾಡಿ, ಸ್ತಂಭಗಳ ತುದಿಗಳ ಮೇಲೆ ಇಟ್ಟು, ನೂರು ದಾಳಿಂಬೆ ಹಣ್ಣುಗಳನ್ನು ಮಾಡಿ, ಸರಪಣಿಗಳ ಮೇಲೆ ಇರಿಸಿದನು.
17ಆ ಸ್ತಂಭಗಳನ್ನು ಮಂದಿರದ ಮುಂಭಾಗದಲ್ಲಿ ಒಂದನ್ನು ಬಲಗಡೆಯಲ್ಲಿಯೂ, ಇನ್ನೊಂದನ್ನು ಎಡಗಡೆಯಲ್ಲಿಯೂ ನಿಲ್ಲಿಸಿದನು. ಬಲಗಡೆಯಲ್ಲಿ ನಿಲ್ಲಿಸಿದ ಸ್ತಂಭಕ್ಕೆ ಯಾಕೀನ್ ಎಂದೂ, ಎಡಗಡೆಯ ಸ್ತಂಭಕ್ಕೆ ಬೋವಾಜ್ ಎಂದೂ ಹೆಸರಿಟ್ಟನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.