Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಅರಸುಗಳು 4

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಹೀಗೆ ಅರಸನಾದ ಸೊಲೊಮೋನನು ಸಮಸ್ತ ಇಸ್ರಾಯೇಲಿನ ಮೇಲೆ ಅರಸನಾಗಿದ್ದನು.
2ಅವನಿಗೆ ಇದ್ದ ಮುಖ್ಯ ಅಧಿಕಾರಿಗಳು ಯಾರೆಂದರೆ: ಚಾದೋಕನ ಮಗ ಅಜರ್ಯನು ಮುಖ್ಯಯಾಜಕನಾಗಿದ್ದನು.
3ಶೀಷನ ಮಕ್ಕಳಾದ ಎಲೀಹೋರೆಫ್ ಹಾಗು ಅಹೀಯಾಹು ಎಂಬವರು ಕಾರ್ಯದರ್ಶಿಗಳು. ಅಹೀಲೂದನ ಮಗನಾದ ಯೆಹೋಷಾಫಾಟನು ಅವನ ಲೇಖಕ.
4ಯೆಹೋಯಾದಾವನ ಮಗ ಬೆನಾಯನು ಸೈನ್ಯದ ಅಧಿಪತಿಯು, ಚಾದೋಕನೂ, ಅಬಿಯಾತರನೂ ಯಾಜಕರು.
5ನಾತಾನನ ಮಗ ಅಜರ್ಯನು ಅಧಿಪತಿಗಳ ಮೇಲ್ವಿಚಾರಕನು. ನಾತಾನನ ಮಗ ಜಾಬೂದನು ಯಾಜಕನು ಹಾಗು ಅರಸನ ವೈಯಕ್ತಿಕ ಸಲಹೆಗಾರನು.
6ಅಹಿಷಾರನು ರಾಜ್ಯ ಗೃಹಾಧಿಪತಿ. ಅಬ್ದನ ಮಗ ಅದೋನೀರಾಮನು ದಾಸರ ಮೇಲೆ ಉಸ್ತುವಾರಿಮಾಡಿಸುವವನಾಗಿದ್ದನು.
7ಇದಲ್ಲದೆ ಅರಸನಿಗೂ, ಅವನ ಮನೆಗೂ ಆಹಾರವನ್ನು ಸಿದ್ಧಮಾಡಿಸುವುದಕ್ಕೋಸ್ಕರ ಸೊಲೊಮೋನನಿಗೆ ಸಮಸ್ತ ಇಸ್ರಾಯೇಲಿನ ಮೇಲೆ ಹನ್ನೆರಡು ಜಿಲ್ಲಾಧಿಕಾರಿಗಳು ಇದ್ದರು. ಪ್ರತಿಯೊಬ್ಬನೂ ತನಗೆ ವರುಷದಲ್ಲಿ ನೇಮಕವಾದ ತಿಂಗಳು ಬಂದಾಗ, ದವಸಧಾನ್ಯಗಳನ್ನು ಒದಗಿಸುತ್ತಿದ್ದನು.
8ಅವರ ಹೆಸರುಗಳು, ಅವರ ಜಿಲ್ಲೆಗಳು: ಬೆನ್ ಹೂರ್ ಎಫ್ರಾಯೀಮ್ ಪರ್ವತ ಪ್ರದೇಶದ ಅಧಿಕಾರಿ.
9ಬೆನ್ ಡೆಕೆರ್ ಮಾಕಾಚ್, ಶಾಲ್ಬೀಮ್, ಬೇತ್ ಷೆಮೆಷ್, ಏಲೋನ್ ಹಾಗು ಬೇತ್ ಹಾನಾನ್‌ಗಳಲ್ಲಿ ಅಧಿಕಾರಿ.
10ಬೆನ್ ಹೆಸೆದ್ ಅರುಬ್ಬೋತದಲ್ಲಿ ಅಧಿಕಾರಿ. ಸೋಕೋ ಮತ್ತು ಹೇಫೆರಿನ ಎಲ್ಲಾ ಪ್ರದೇಶಗಳು ಅವನವಾಗಿದ್ದವು.
11ಬೆನ್ ಅಬೀನಾದಾಬ್ ನಾಫೋತ್ ದೋರ್‌ದಲ್ಲಿ ಅಧಿಕಾರಿ. ಅವನು ಸೊಲೊಮೋನನ ಮಗಳಾದ ಟಾಫತಳನ್ನು ಮದುವೆಯಾಗಿದ್ದನು.
12ಅಹೀಲೂದನ ಮಗ ಬಾಣಾ ಎಂಬವನು ತಾನಕ್, ಮೆಗಿದ್ದೋ, ಬೇತ್ ಷೆಯಾನಿನ ಎಲ್ಲಾ ಕಡೆಗಳಲ್ಲಿಯೂ ಆಳಿಕೆಮಾಡುತ್ತಿದ್ದನು. ಬೇತ್ ಶಾನ್ ಚಾರೆತಾನಿನ ಪಕ್ಕದಲ್ಲಿದ್ದ ಇಜ್ರೆಯೇಲ್ ಎಂಬ ಪಟ್ಟಣದ ಕೆಳಗಿತ್ತು. ಅವನ ಪ್ರಾಂತವು ಬೇತ್ ಷೆಯಾನಿನಿಂದ ಆಬೇಲ್ ಮೆಹೋಲದವರೆಗೆ ಯೊಕ್ಮೆಯಾಮಿನಲ್ಲಿ ಅಂತ್ಯಗೊಂಡಿತ್ತು.
13ಬೆನ್ ಗೆಬೆರ್ ಗಿಲ್ಯಾದಿನ ರಾಮೋತ್ ಎಂಬ ಊರಿಗೆ ಅಧಿಕಾರಿಯಾಗಿದ್ದನು. ಈ ಗಿಲ್ಯಾದಿನ ಪ್ರಾಂತದಲ್ಲಿ ಮನಸ್ಸೆಯ ಮಗ ಯಾಯೀರನ ಗ್ರಾಮಗಳಿಗೂ, ಬಾಷಾನಿನಲ್ಲಿ ಪೌಳಿ ಗೋಡೆಗಳಿಂದಲೂ, ಕಬ್ಬಿಣದ ಅಗುಳಿಗಳಿಂದಲೂ ಭದ್ರಮಾಡಲಾಗಿದ್ದ ಅರವತ್ತು ಪಟ್ಟಣಗಳಲ್ಲಿದ್ದ ಅರ್ಗೋಬ್ ಪ್ರದೇಶಕ್ಕೂ ಅಧಿಕಾರಿಯಾಗಿದ್ದನು.
14ಇದ್ದೋ ಎಂಬವನ ಮಗನಾದ ಅಹೀನಾದಾಬ್ ಮಹನಯಿಮ್ ಎಂಬ ಸ್ಥಳಕ್ಕೆ ಅಧಿಕಾರಿ.
15ಅಹೀಮಾಚ್ ನಫ್ತಾಲಿಯಲ್ಲಿ ಅಧಿಕಾರಿ. ಅವನಿಗೆ ಸೊಲೊಮೋನನ ಮಗಳಾದ ಬಾಸೆಮತ್ ಹೆಂಡತಿಯಾಗಿದ್ದಳು.
16ಹೂಷೈಯ ಮಗ ಬಾಣಾ ಆಶೇರದಲ್ಲಿ ಮತ್ತು ಆಲೋತಿನಲ್ಲಿ ಅಧಿಕಾರಿ.
17ಫಾರೂಹನ ಮಗ ಯೆಹೋಷಾಫಾಟನು ಇಸ್ಸಾಕಾರ್ ಪ್ರಾಂತದಲ್ಲಿ ಅಧಿಕಾರಿ.
18ಏಲನ ಮಗ ಶಿಮ್ಮಿಯು ಬೆನ್ಯಾಮೀನ್ ಪ್ರಾಂತದಲ್ಲಿ ಅಧಿಕಾರಿ.
19ಊರಿಯನ ಮಗ ಗೆಬೆರನು ಗಿಲ್ಯಾದಿನಲ್ಲಿ ಅಧಿಕಾರಿ. ಅಮೋರಿಯರ ಅರಸನಾದ ಸೀಹೋನನ ದೇಶಕ್ಕೂ ಬಾಷಾನಿನ ಅರಸನಾದ ಓಗನ ದೇಶಕ್ಕೂ ಅವನೊಬ್ಬನೇ ಅಧಿಪತಿಯಾಗಿದ್ದನು. ಸೊಲೊಮೋನನ ದಿನದ ದವಸ ಧಾನ್ಯಗಳು
20ಯೆಹೂದ ಮತ್ತು ಇಸ್ರಾಯೇಲಿನ ಜನರು ಸಮುದ್ರದ ಮರಳಿನ ಹಾಗೆ ಅಸಂಖ್ಯಾತರಾದರು. ಅವರು ಉಂಡು ಕುಡಿದು ಸುಖದಿಂದ ಇದ್ದರು.
21ಇದಲ್ಲದೆ ಸೊಲೊಮೋನನು ಯೂಫ್ರೇಟೀಸ್ ಮೊದಲುಗೊಂಡು ಫಿಲಿಷ್ಟಿಯರ ದೇಶ ಮತ್ತು ಈಜಿಪ್ಟಿನ ಮೇರೆಯವರೆಗೂ ಇರುವ ಸಮಸ್ತ ರಾಜ್ಯಗಳನ್ನು ಆಳುತ್ತಿದ್ದನು. ಆ ರಾಜ್ಯಗಳವರು ಸೊಲೊಮೋನನು ಜೀವಿಸಿರುವ ದಿವಸಗಳೆಲ್ಲಾ ಕಪ್ಪಗಳನ್ನು ಕೊಡುವವರಾಗಿ ಅವನಿಗೆ ಅಧೀನರಾಗಿದ್ದರು.
22ಸೊಲೊಮೋನನು ಒಂದು ದಿನದ ಭೋಜನಕ್ಕೆ ಕೊಡುತ್ತಿದ್ದ ಆಹಾರ ಪದಾರ್ಥಗಳು 5,000 ಕಿಲೋಗ್ರಾಂ ನಯವಾದ ಗೋಧಿಯ ಹಿಟ್ಟು, 10,000 ಕಿಲೋಗ್ರಾಂ ಜವೆಗೋಧಿ,
23ಕೊಬ್ಬಿದ ಎತ್ತುಗಳು ಹತ್ತು, ಮೇಯುವ ಎತ್ತುಗಳು ಇಪ್ಪತ್ತು, ಕುರಿಗಳು ನೂರು. ಇವುಗಳ ಹೊರತಾಗಿ ದುಪ್ಪಿಗಳೂ, ಜಿಂಕೆಗಳೂ, ಕೆಂದ ಜಿಂಕೆಗಳೂ, ಕೊಬ್ಬಿದ ಕೋಳಿಗಳೂ ಆಗಿದ್ದವು.
24ಯೂಫ್ರೇಟೀಸ್ ನದಿಯ ಈಚೆಯಲ್ಲಿ ತಿಪ್ಸಹು ಮೊದಲುಗೊಂಡು ಗಾಜದವರೆಗೂ, ನದಿಯ ಈಚೆಯಲ್ಲಿರುವ ಸಮಸ್ತ ಅರಸರ ಮೇಲೆ ಅವನು ಅಧಿಕಾರಿಯಾಗಿದ್ದನು. ಇದಲ್ಲದೆ ಅವನಿಗೆ ಸುತ್ತಲಿರುವ ಸಮಸ್ತ ದಿಕ್ಕಿನಲ್ಲಿ ಅವನಿಗೆ ಸಮಾಧಾನವಿತ್ತು.
25ಹೀಗೆಯೇ ದಾನ್ ಮೊದಲುಗೊಂಡು ಬೇರ್ಷೆಬದ ಮಟ್ಟಿಗೂ, ಸೊಲೊಮೋನನ ಸಮಸ್ತ ದಿವಸಗಳಲ್ಲಿ ಯೆಹೂದ ಮತ್ತು ಇಸ್ರಾಯೇಲಿನಲ್ಲಿರುವ ಪ್ರತಿಯೊಬ್ಬ ಮನುಷ್ಯನು ತನ್ನ ದ್ರಾಕ್ಷಿಬಳ್ಳಿಯ ಕೆಳಗೂ, ತನ್ನ ಅಂಜೂರದ ಮರದ ಕೆಳಗೂ ಸುರಕ್ಷಿತವಾಗಿ ವಾಸವಾಗಿದ್ದರು.
26ಸೊಲೊಮೋನನಿಗೆ ತನ್ನ ರಥಗಳಿಗೋಸ್ಕರ ನಲವತ್ತು ಸಾವಿರ ಕುದುರೆಗಳಿಗೆ ಸ್ಥಳವಿತ್ತು, ಹನ್ನೆರಡು ಸಾವಿರ ರಾಹುತರೂ ಇದ್ದರು.
27ಆ ಅಧಿಪತಿಗಳು ತಮಗೆ ನೇಮಕವಾದ ತಿಂಗಳಲ್ಲಿ ಅರಸನಾದ ಸೊಲೊಮೋನನಿಗೋಸ್ಕರವೂ, ಅರಸನ ಮೇಜಿಗೆ ಬರುವವರೆಲ್ಲರಿಗೋಸ್ಕರವೂ ಸಿದ್ಧಮಾಡಿದ್ದರು. ಅವರಿಗೆ ಕೊರತೆಯಾದದ್ದು ಒಂದೂ ಇರಲಿಲ್ಲ.
28ಹೀಗೆಯೇ ಪ್ರತಿಯೊಬ್ಬನು ತನ್ನ ನೇಮಕದ ಪ್ರಕಾರ ಕುದುರೆಗಳಿಗೋಸ್ಕರವೂ, ಸವಾರಿ ಒಂಟೆಗಳಿಗೋಸ್ಕರವೂ, ಅವುಗಳ ಸ್ಥಳಕ್ಕೆ ಜವೆಗೋಧಿಯನ್ನೂ, ಹುಲ್ಲನ್ನೂ ತಂದರು. ಸೊಲೊಮೋನನ ಜ್ಞಾನ
29ದೇವರು ಸೊಲೊಮೋನನಿಗೆ ಅತ್ಯಧಿಕವಾಗಿ ಜ್ಞಾನವನ್ನೂ, ಗ್ರಹಿಕೆಯನ್ನೂ, ಸಮುದ್ರ ತೀರದಲ್ಲಿಯ ಮರಳಿನ ಹಾಗೆಯೇ ವಿವೇಕವನ್ನೂ ಕೊಟ್ಟರು.
30ಸೊಲೊಮೋನನ ಜ್ಞಾನವು ಮೂಡಣ ದೇಶದ ಸಮಸ್ತರ ಜ್ಞಾನಕ್ಕಿಂತಲೂ, ಈಜಿಪ್ಟಿನ ಸಮಸ್ತರ ಜ್ಞಾನಕ್ಕಿಂತಲೂ ಅಧಿಕವಾಗಿತ್ತು.
31ಜೇರಹನ ಮಗನಾದ ಏತಾನನು, ಮಹೋಲನ ಮಕ್ಕಳಾದ ಹೇಮಾನನು, ಕಲ್ಕೋಲನು, ದರ್ದನು ಮೊದಲಾದ ಸಮಸ್ತ ಮನುಷ್ಯರಿಗಿಂತಲೂ ಅವನು ಜ್ಞಾನಿಯಾಗಿದ್ದನು. ಸುತ್ತಲಿರುವ ಸಕಲ ದೇಶಗಳಲ್ಲಿ ಅವನ ಕೀರ್ತಿ ಇತ್ತು.
32ಅವನು ಮೂರು ಸಾವಿರ ಜ್ಞಾನೋಕ್ತಿಗಳನ್ನು ಹೇಳಿದನು. ಅವನ ಹಾಡುಗಳು ಸಾವಿರದ ಐದು.
33ಅವನು ಮರಗಳನ್ನು ಕುರಿತು ಲೆಬನೋನಿನಲ್ಲಿರುವ ದೇವದಾರು ಮರ ಮೊದಲುಗೊಂಡು ಗೋಡೆಯ ಮೇಲೆ ಬೆಳೆಯುವ ಹಿಸ್ಸೋಪಿನವರೆಗೂ ಹೇಳಿದನು. ಇದಲ್ಲದೆ ಮೃಗಗಳನ್ನು ಕುರಿತೂ, ಪಕ್ಷಿಗಳನ್ನು ಕುರಿತೂ, ಕ್ರಿಮಿಗಳನ್ನು ಕುರಿತೂ, ಮೀನುಗಳನ್ನು ಕುರಿತೂ ಪ್ರಸ್ತಾಪಿಸಬಲ್ಲವನಾಗಿದ್ದನು.
34ಸೊಲೊಮೋನನ ಜ್ಞಾನವನ್ನು ಕುರಿತು ಕೇಳಿದ ಭೂಮಿಯ ಮೇಲಿರುವ ಸಮಸ್ತ ಅರಸರ ಬಳಿಯಿಂದ ಎಲ್ಲಾ ಜನಗಳು ಅವನ ಜ್ಞಾನವನ್ನು ಕೇಳಲು ಬಂದರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.