Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಪೂರ್ವಕಾಲ ವೃತ್ತಾಂತ 4

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಯೆಹೂದನ ವಂಶಜರು: ಪೆರೆಚನು, ಹೆಚ್ರೋನನು, ಕರ್ಮೀ, ಹೂರನು, ಶೋಬಾಲನು.
2ಶೋಬಾಲನ ಮಗನಾದ ರೆವಾಯನು ಯಹತನ ತಂದೆ. ಯಹತನು ಅಹೂಮೈ ಮತ್ತು ಲಹದ್ ಎಂಬವರ ತಂದೆ. ಇವರೇ ಚೊರ್‍ರದ ಕುಟುಂಬದವರು.
3ಏಟಾಮನ ಪುತ್ರರು: ಇಜ್ರೆಯೇಲ್, ಇಷ್ಮ ಮತ್ತು ಇಬ್ಬಾಷ್ ಮತ್ತು ಇವರ ತಂಗಿ ಹಚೆಲೆಲ್‌ಪೋನೀ ಎಂಬವರು.
4ಪೆನೂಯೇಲ್, ಗೆದೋರ್ ವಂಶದವರಿಗೆ ಮೂಲಪುರುಷನಾಗಿದ್ದನು. ಏಜೆರ್ ಹೂಷಾಹರ ಮೂಲಪುರುಷನಾಗಿದ್ದನು. ಇವರು ಎಫ್ರಾತಾಹ ಎಂಬಾಕೆಯ ಚೊಚ್ಚಲಮಗನಾದ ಹೂರನ ಮಕ್ಕಳು; ಈ ಹೂರನೇ ಬೇತ್ಲೆಹೇಮ್ ವಂಶದವರಿಗೆ ಮೂಲಪುರುಷನು.
5ತೆಕೋವದ ತಂದೆ ಅಷ್ಹೂರನಿಗೆ ಹೆಲಾಹ, ನಾರ ಎಂಬ ಇಬ್ಬರು ಪತ್ನಿಯರಿದ್ದರು.
6ನಾರಳು ಅವನಿಗೆ ಅಹುಜ್ಜಾಮ್, ಹೇಫೆರ್, ತೇಮಾನಿ, ಅಹಷ್ಟಾರ್ಯನನ್ನು ಹೆತ್ತಳು. ಇವರೇ ನಾರಳ ಮಕ್ಕಳು.
7ಹೆಲಾಹಳ ಪುತ್ರರು: ಚೆರೆತ್, ಇಚ್ಹಾರ್, ಎತ್ನಾನ್.
8ಕೋಚನು ಅನೂಬ್‌ನನ್ನೂ, ಚೊಬೇಬನನ್ನೂ, ಹಾರುಮನ ಮಗನಾದ ಅಹರ‍್ಹೇಲನ ಸಂತತಿಗಳನ್ನೂ ಪಡೆದನು.
9ಯಾಬೇಚನು ತನ್ನ ಸಹೋದರರಿಗಿಂತ ಘನವುಳ್ಳವನಾಗಿದ್ದನು. ಅವನ ತಾಯಿ, “ನಾನು ಇವನನ್ನು ವ್ಯಥೆಯಿಂದ ಹೆತ್ತೆನು,” ಎಂದು ಅವನಿಗೆ ಯಾಬೇಚನೆಂಬ ಹೆಸರಿಟ್ಟಳು.
10ಆದರೆ ಯಾಬೇಚನು ಇಸ್ರಾಯೇಲಿನ ದೇವರಿಗೆ, “ನೀವು ನನ್ನನ್ನು ನಿಜವಾಗಿ ಆಶೀರ್ವದಿಸಬೇಕು; ನನ್ನ ಮೇರೆಯನ್ನು ವಿಸ್ತರಿಸಬೇಕು; ನಿಮ್ಮ ಹಸ್ತವು ನನ್ನ ಸಂಗಡ ಇರಲಿ; ನನ್ನನ್ನು ವ್ಯಥೆಪಡಿಸದ ಹಾಗೆ ನನ್ನನ್ನು ಕೇಡಿನಿಂದ ತಪ್ಪಿಸಿರಿ,” ಎಂದು ಮೊರೆಯಿಟ್ಟನು. ದೇವರು ಅವನು ಬೇಡಿಕೊಂಡದ್ದನ್ನು ಅನುಗ್ರಹಿಸಿದರು.
11ಶೂಹನ ಸಹೋದರ ಕೆಲೂಬನು ಎಷ್ಟೋನನ ತಂದೆ ಮೆಹೀರನನ್ನು ಪಡೆದನು.
12ಎಷ್ಟೋನನಿಂದ ಬೇತ್ ರಾಫಾ, ಪಾಸೇಹ, ತೆಹಿನ್ನ ಎಂಬ ಮೂವರು ಮಕ್ಕಳು ಇದ್ದರು. ತೆಹಿನ್ನ ನಾಹಷ್ ಪಟ್ಟಣದ ಸ್ಥಾಪಕ. ಈ ಜನರ ವಂಶಜರು ರೇಕಾ ಎಂಬಲ್ಲಿ ವಾಸಿಸಿದ್ದರು.
13ಕೆನಾಜನ ಪುತ್ರರು: ಒತ್ನಿಯೇಲನು ಸೆರಾಯನು. ಒತ್ನಿಯೇಲನ ಪುತ್ರರು: ಹತತ್ ಹಾಗು ಮೆಯೋನೋತೈ.
14ಮೆಯೋನೋತೈ ಒಫ್ರಾಹನನ್ನು ಪಡೆದನು. ಸೆರಾಯನು ಶಿಲ್ಪಿಗರಾಗಿರುವ ಗೇಹರಾಷೀಮರ ಸ್ಥಾಪಕನಾದ ಯೋವಾಬನ ತಂದೆ. ಈ ಜನರು ಕೈಕೆಲಸದವರಾದ್ದರಿಂದ ಗೇಹರಾಷೀಮರು ಎಂಬ ಹೆಸರು ಬಂತು.
15ಯೆಫುನ್ನೆಯ ಮಗನಾದ ಕಾಲೇಬನ ಪುತ್ರರು: ಈರು, ಏಲ, ನಾಮ್ ಎಂಬವರು; ಏಲನ ಮಗನು ಕೆನಜ್.
16ಯೆಹಲ್ಲೆಲೇಲನ ಪುತ್ರರು: ಜೀಫನು, ಜಿಫಾಹನು, ತೀರ್ಯನು, ಅಸರೇಲನು.
17ಎಜ್ರನ ಪುತ್ರರು: ಯೆತೆರ್, ಮೆರೆದ್, ಏಫೆರ್, ಯಾಲೋನ್ ಎಂಬವರು. ಮೇರದನ ಹೆಂಡತಿಯು ಅವನಿಗೆ ಮಿರ್ಯಾಮ್, ಶಮ್ಮಾಯ, ಎಷ್ಟೆಮೋವನ ತಂದೆ ಇಷ್ಬಾಹನನ್ನೂ ಹೆತ್ತಳು.
18ಇವರು ಮೆರೆದನು ಮದುವೆಯಾದ ಫರೋಹನ ಮಗಳು ಬಿತ್ಯಳ ಮಕ್ಕಳು. ಇದಲ್ಲದೆ ಯೆಹೂದ್ಯಳಾದ ಅವನ ಇನ್ನೊಬ್ಬ ಹೆಂಡತಿ, ಗೆದೋರ್ಯನ ತಂದೆ ಯೆರೆದನನ್ನೂ, ಸೋಕೋವಿನ ತಂದೆ ಹೆಬೆರನನ್ನೂ, ಜಾನೋಹನ ತಂದೆ ಯೆಕೂತೀಯೇಲನನ್ನೂ ಹೆತ್ತಳು.
19ಹೋದೀಯನು ನಹಮನ ಸಹೋದರಿಯನ್ನು ಮದುವೆಯಾದನು. ಇವರ ಸಂತತಿಯವರು ಕೆಯೀಲದಲ್ಲಿ ವಾಸಿಸಿದ ಗರ್ಮ್ಯ ಗೋತ್ರದ ಮತ್ತು ಎಷ್ಟೆಮೋವಾಬದಲ್ಲಿ ವಾಸಿಸಿದ ಮಾಕಾತ್ ಗೋತ್ರದ ಪೂರ್ವಜರು.
20ಶೀಮೋನನ ಪುತ್ರರು: ಅಮ್ನೋನನು, ರಿನ್ನನು, ಬೆನ್ಹನಾನನು, ತಿಲೋನನು. ಇಷ್ಷೀಯನ ಸಂತತಿ: ಜೋಹೆತನು, ಬೆನ್ ಜೋಹೆತನು.
21ಯೆಹೂದನ ಮಗ ಶೇಲಹನ ಪುತ್ರರು: ಲೇಕಾಹ್ಯನ ತಂದೆ ಏರನು, ಮಾರೇಷನ ತಂದೆ ಲದ್ದ; ಬೇತ್ ಅಷ್ಬೇಯ ಪಟ್ಟಣದಲ್ಲಿ ವಾಸಿಸಿದ ನೇಕಾರರ ಕುಟುಂಬಗಳವರು,
22ಕೋಜೇಬದವರಾದ ಯೊಕೀಮ್ಯರೂ, ಯೋವಾಷನು, ಸಾರಾಫ ಮೋವಾಬ್ ಮತ್ತು ಯೆಷೂಬಿ ಲೆಹೇಮಿನಲ್ಲಿ ಅಧಿಕಾರವುಳ್ಳವರಾಗಿದ್ದರು. ಈ ದಾಖಲೆಗಳು ಪ್ರಾಚೀನ ಕಾಲದಿಂದ ಬಂದವು.
23ಇವರೇ ನೆಟಾಯಿಮ್, ಗೆದೇರ ಎಂಬ ಸ್ಥಳಗಳಲ್ಲಿ ವಾಸವಾಗಿದ್ದ ಕುಂಬಾರರು. ಅವರು ಅಲ್ಲಿಯೇ ಇದ್ದು ಅರಸನಿಗೋಸ್ಕರ ಕೆಲಸ ಮಾಡುತ್ತಿದ್ದರು. ಸಿಮೆಯೋನನು
24ಸಿಮೆಯೋನನ ವಂಶಜರು: ನೆಮೂಯೇಲನು, ಯಾಮೀನನು, ಯಾರೀಬನು, ಜೆರಹನು ಮತ್ತು ಸೌಲನು.
25ಅವನ ಮಗನಾದ ಶಲ್ಲೂಮನು, ಅವನ ಮಗನಾದ ಮಿಬ್ಸಾಮನು, ಅವನ ಮಗನಾದ ಮಿಷ್ಮಾವನು.
26ಮಿಷ್ಮಾವನ ವಂಶಜರು: ಅವನ ಮಗ ಹಮ್ಮೂಯೇಲನು, ಅವನ ಮಗ ಜಕ್ಕೂರನು, ಅವನ ಮಗನಾದ ಶಿಮ್ಮಿಯಿ.
27ಶಿಮ್ಮಿಯಿಗೆ ಹದಿನಾರು ಮಂದಿ ಪುತ್ರರೂ, ಆರು ಮಂದಿ ಪುತ್ರಿಯರೂ ಇದ್ದರು. ಆದರೆ ಅವನ ಸಹೋದರರಿಗೆ ಬಹಳ ಮಕ್ಕಳಿರಲಿಲ್ಲ. ಅವರ ಸಮಸ್ತ ಸಂತತಿಯು ಯೆಹೂದದ ಮಕ್ಕಳ ಹಾಗೆ ಹೆಚ್ಚಾಗಿರಲಿಲ್ಲ.
28ಇವರು ಬೇರ್ಷೆಬದಲ್ಲಿಯೂ; ಮೋಲಾದದಲ್ಲಿಯೂ; ಹಚರ್ ಷೂವಾಲ್ ಎಂಬಲ್ಲಿಯೂ;
29ಬಿಲ್ಹದಲ್ಲಿಯೂ ಎಚೆಮಿನಲ್ಲಿಯೂ, ತೋಲಾದ್,
30ಬೆತೂಯೇಲ್, ಹೊರ್ಮದಲ್ಲಿಯೂ; ಚಿಕ್ಲಗಿನಲ್ಲಿಯೂ;
31ಬೇತ್ ಮರ್ಕಾಬೋತ್, ಹಚರ್ ಸೂಸೀಮ್, ಬೇತ್ ಬಿರೀ ಮತ್ತು ಶಾರಯಿಮ್‌ನಲ್ಲಿಯೂ ವಾಸವಾಗಿದ್ದರು. ದಾವೀದನ ಆಳ್ವಿಕೆಯವರೆಗೂ ಇವು ಅವರ ಪಟ್ಟಣಗಳಾಗಿದ್ದವು.
32ಅವರ ಸುತ್ತಲಿನ ಗ್ರಾಮಗಳು ಯಾವುವೆಂದರೆ: ಏಟಾಮ್, ಆಯಿನ್, ರಿಮ್ಮೋನ್, ತೋಕೆನ್, ಆಷಾನ್ ಎಂಬ ಐದು ಪಟ್ಟಣಗಳು.
33ಇದಲ್ಲದೆ ಆ ಪಟ್ಟಣಗಳ ಸುತ್ತಲಿದ್ದ ಊರುಗಳು ಬಾಳ್ ಪಟ್ಟಣದವರೆಗೆ ವಾಸವಾಗಿದ್ದರು. ಇವೇ ಅವರು ವಾಸವಾಗಿರುವ ಸ್ಥಳಗಳೂ, ಅವರ ವಂಶಾವಳಿಗಳೂ:
34ಮೆಷೋಬಾಬನು, ಯಮ್ಲೇಕನು, ಅಮಚ್ಯನ ಮಗನಾದ ಯೋಷನು,
35ಯೋಯೇಲನು, ಅಸಿಯೇಲನ ಮಗನಾದ ಸೆರಾಯನ ಮಗ ಯೊಷಿಬ್ಯನ ಮಗ ಯೇಹೂವು.
36ಎಲ್ಯೋವೇನೈ, ಯಾಕೋಬ, ಯೆಷೋಹಾಯ, ಅಸಾಯ, ಅದೀಯೇಲ್, ಯೆಸೀಮಿಯೇಲ್, ಬೆನಾಯಾ.
37ಶೆಮಾಯನ ಮಗ ಶಿಮ್ರಿಯ ಮಗ ಯೆದಾಯನ ಮಗ ಅಲ್ಲೋನನ ಮಗ ಶಿಪ್ಫಿಯ ಮಗ ಜೀಜನು.
38ಹೆಸರು ಹೆಸರಾಗಿ ಬರೆಯಲಾದ ಇವರು ತಮ್ಮ ಕುಟುಂಬಗಳಲ್ಲಿ ನಾಯಕರಾಗಿದ್ದರು. ಅವರ ಪಿತೃಗಳ ಮನೆ ಬಹಳ ಅಭಿವೃದ್ಧಿಯಾಯಿತು.
39ತಮ್ಮ ಮಂದೆಗಳಿಗೆ ಮೇವನ್ನು ಹುಡುಕಲು ತಗ್ಗಿನ ಪೂರ್ವದಿಕ್ಕಿನಲ್ಲಿರುವ ಗೆದೋರು ಎಂಬ ಸ್ಥಳದ ಪ್ರವೇಶದವರೆಗೂ ಹೋದರು.
40ಅವರು ರಸವತ್ತಾದ ಒಳ್ಳೆಯ ಮೇವನ್ನು ಕಂಡುಕೊಂಡರು. ಆ ದೇಶವು ವಿಸ್ತಾರವಾಗಿಯೂ, ಶಾಂತವಾಗಿಯೂ, ಸಮಾಧಾನವಾಗಿಯೂ ಇತ್ತು. ಪೂರ್ವದಲ್ಲಿ ಹಾಮನ ವಂಶದವರು ಅಲ್ಲಿ ವಾಸವಾಗಿದ್ದರು.
41ಹೆಸರು ಹೆಸರಾಗಿ ಬರೆದಿರುವವರಾದ ಇವರು ಯೆಹೂದದ ಅರಸನಾದ ಹಿಜ್ಕೀಯನ ದಿವಸಗಳಲ್ಲಿ ಅಲ್ಲಿಗೆ ಹೋಗಿ ಹಾಮ್ಯರ ಡೇರೆಗಳನ್ನೂ ಅಲ್ಲಿ ಸಿಕ್ಕಿದ ಮೆಗೂನ್ಯರನ್ನೂ ಸಂಪೂರ್ಣವಾಗಿ ನಾಶಮಾಡಿದರು. ಅಲ್ಲಿ ತಮ್ಮ ಮಂದೆಗಳಿಗೆ ಮೇವು ಇರುವುದರಿಂದ ಇಂದಿನವರೆಗೂ ಅವರ ಸ್ಥಳದಲ್ಲಿ ವಾಸಿಸಿದರು.
42ಇದಲ್ಲದೆ ಅವರಲ್ಲಿ ಸಿಮೆಯೋನನ ಪುತ್ರರಲ್ಲಿ ಐನೂರು ಮಂದಿ ಇಷ್ಷೀಯ ಪುತ್ರರಾದ ಪೆಲಟ್ಯ, ನೆಯರ್ಯ, ರೆಫಾಯ, ಉಜ್ಜೀಯೇಲ್ ಎಂಬವರನ್ನು ತಮ್ಮ ಅಧಿಪತಿಗಳಾಗಿ ಮಾಡಿಕೊಂಡು. ಸೇಯೀರ್ ಎಂಬ ಪರ್ವತ ದೇಶಕ್ಕೆ ಹೋದರು.
43ಅವರು ತಪ್ಪಿಸಿಕೊಂಡ ಉಳಿದ ಅಮಾಲೇಕ್ಯರನ್ನು ಕೊಂದು, ಅಲ್ಲಿ ಇಂದಿನವರೆಗೂ ವಾಸವಾಗಿದ್ದಾರೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.